ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಯ ಹುಟ್ಟಿಸಿದ ಕಡಲ ರಕ್ಕಸ ಅಲೆಗಳು: ಕರಾವಳಿಗರಿಗೆ ಆತಂಕ ಶುರು

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

ಕರಾವಳಿಗರಲ್ಲಿ ಆತಂಕ ಸೃಷ್ಟಿಸಿದ ಉಡುಪಿಯ ಕಡಲ ತೀರದ ರಕ್ಕಸ ಅಲೆಗಳು | Oneindia Kannada

ಉಡುಪಿ, ಜುಲೈ.12: ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವುದರ ಪರಿಣಾಮ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ನಷ್ಟ ಉಂಟಾಗಿವೆ. ಅಷ್ಟೇ ಅಲ್ಲ, ಅಲೆಗಳ ಅಬ್ಬರ ಜೋರಾಗಿದ್ದು, ಇದೀಗ ಕಡಲತಡಿಯಲ್ಲಿ ಆತಂಕ ಶುರುವಾಗಿದೆ.

ಅಲೆಗಳು ನೇರವಾಗಿ ರಸ್ತೆಗಳಿಗೆ ಬಡಿಯುವ ಮೂಲಕ ಸಂಚಾರಕ್ಕೂ ಸಮಸ್ಯೆಯುಂಟು ಮಾಡಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಕಡಲ್ಕೊರೆತ ತೀವ್ರಗೊಂಡಿದೆ. ಕಡಲ ತಡಿಯ ಒಳ ರಸ್ತೆಗಳಿಗೆ ವೇಗದ ಅಲೆಗಳು ಅಪ್ಪಳಿಸುತ್ತಿವೆ.

ಉಡುಪಿ: ಕಡಲ್ಕೊರೆತಕ್ಕೆ ತತ್ತರಗೊಂಡ ಕಡಲತಡಿ ನಿವಾಸಿಗಳುಉಡುಪಿ: ಕಡಲ್ಕೊರೆತಕ್ಕೆ ತತ್ತರಗೊಂಡ ಕಡಲತಡಿ ನಿವಾಸಿಗಳು

ಕಡಲ ರಕ್ಕಸ ಅಲೆಗಳು ಉಡುಪಿಯ ಮಲ್ಪೆ ಪಡುಕೆರೆ ಹೆಜಮಾಡಿ ಸಂಪರ್ಕ ರಸ್ತೆಗೆ ತೀವ್ರ ಹಾನಿಯುಂಟು ಮಾಡುತ್ತಿವೆ. ಕೆಲವು ಕಡೆ ಕಾಂಕ್ರೀಟು ರಸ್ತೆ ಬಿರುಕು ಬಿಟ್ಟು, ಸಂಚಾರಕ್ಕೆ ಆಡಚಣೆ ಉಂಟಾಗಿದೆ. ಇನ್ನು ಕಡಲ್ಕೊರೆತ ನಡೆದ ಕೆಲ ಪ್ರದೇಶಗಳಲ್ಲಿ ಉಪ್ಪು ನೀರು ಹೊಳೆ ಸೇರುವ ಸಾಧ್ಯತೆ ಇದೆ.

Sea waves are causing fear to coastal people

ಪ್ರತೀ ಮಳೆಗಾಲಕ್ಕೆ ತಾತ್ಕಾಲಿಕ ತಡೆಗೋಡೆ ಕಾಮಗಾರಿಯೇನೋ ನಡೆಯುತ್ತದೆ. ಆದರೆ ಕಡಲ ರಕ್ಕಸ ಅಲೆಗಳು ತಡೆಗೋಡೆಯ ಕಲ್ಲುಗಳನ್ನೂ ಆಹುತಿ ತೆಗೆದುಕೊಳ್ಳುತ್ತಿವೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರಕೃತಿಯ ಅಬ್ಬರ ನಿಯಂತ್ರಿಸುವುದು ಕಷ್ಟವಾಗಿದೆ.

Sea waves are causing fear to coastal people

ಅಧಿಕಾರಿಗಳು ಕೇವಲ ಸೂಚನೆ ಮೇರೆಗೆ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಬಿಟ್ಟರೆ ಯಾರೂ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ.

English summary
Sea waves are causing fear to coastal people. Sea waves Udupi Malpe Padukere Hejamadi connectivity road has been causing severe damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X