ಉಡುಪಿಯ ಗಂಗೊಳ್ಳಿಯ ಕಡಲ ಕಿನಾರೆಯಲ್ಲಿ ಕಡಲಾಮೆ ಪತ್ತೆ

ಉಡುಪಿ, ಜೂನ್ 30: ಗಂಗೊಳ್ಳಿಯ ಕಡಲ ಕಿನಾರೆಯಲ್ಲಿ ಕಡಲಾಮೆಯೊಂದು ಪತ್ತೆಯಾಗಿದ್ದು, ಸ್ಥಳೀಯರು ಇದನ್ನು ಕಂಡು ಜೋಪಾನವಾಗಿ ಹಿಡಿದು ಮತ್ತೆ ಕಡಲಿಗೆ ಬಿಟ್ಟಿದ್ದಾರೆ.

ಗಂಗೊಳ್ಳಿಯ ಬ್ಯಾಲಿಕೊಡೇರಿ ಸಮೀಪದ ಕಡಲ ತೀರದಲ್ಲಿ ಮೂರು ಕಾಲಿನ ಅಪರೂಪದ ಕಡಲಾಮೆಯೊಂದು ಕಂಡು ಬಂದಿದ್ದು, ಸಮುದ್ರದ ಅಲೆಗಳ ಹೊಡೆತಕ್ಕೆ ಕಡಲ ತೀರದ ಕಲ್ಲಿಗೆ ಬಡಿಯುತ್ತಿತ್ತು.

sea tortoise found in Gangoli, Udupi

ಇದನ್ನು ಗಮನಿಸಿದ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ ಪೂಜಾರಿಯವರು ಸಮುದ್ರಕ್ಕೆ ತೆರಳಲು ಸಾಧ್ಯವಾಗದೆ ಕಷ್ಟಪಡುತ್ತಿದ್ದ ಕಡಲಾಮೆಯನ್ನು ಸ್ಥಳೀಯ ಯುವಕರ ಸಹಾಯದಿಂದ ರಕ್ಷಿಸಿ, ಅದನ್ನು ಆರೈಕೆ ಮಾಡಿ ಮತ್ತೆ ಕಡಲಿಗೆ ಬಿಟ್ಟಿದ್ದಾರೆ.

ಅಂದಾಜು 30 ಕೆಜಿ ತೂಗುತ್ತಿದ್ದ ಕಡಲಾಮೆ ಕಲ್ಲಿಗೆ ಅಪ್ಪಳಿಸಿ ಘಾಸಿ ಗೊಂಡಿದ್ದು ಮರಳಿ ಸಮುದ್ರ ಸೇರಲು ಒದ್ದಾಡುತ್ತಿತ್ತು. ಸ್ಥಳೀಯ ನಿವಾಸಿ ಗಣೇಶ್ ಪೂಜಾರಿ ಹಾಗೂ ಯುವಕರು ಕಡಲಾಮೆಯನ್ನು ಕಲ್ಲಿನಿಂದ ಬೇರ್ಪಡಿಸಿ ಸೂಕ್ತ ಶುಶ್ರೋಷೆ ನೀಡಿ ಮರಳಿ ಕಡಲು ಸೇರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+