ಪ್ರೊ. ಪದ್ಮನಾಭ ಶ್ರೀವರ್ಮ ಜೈನಿ ವಿಧಿವಶ

ಉಡುಪಿ, ಮೇ 27; ದಕ್ಷಿಣ ಕನ್ನಡ ಮೂಲದ ಪ್ರೊಫೆಸರ್ ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು ಅಮೆರಿಕದಲ್ಲಿ ವಿಧಿವಶರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.

ಬುದ್ಧಿಸ್ಟ್ ಸ್ಟಡೀಸ್‌ನ ಅತ್ಯುನ್ನತ ತ್ರಿಪಿಟಿಕಾಚಾರ್ಯ ಪದವಿ ಪಡೆದಿದ್ದ ಪ್ರೊ. ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು (98) ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರು.

ಪ್ರೊಫೆಸರ್ ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು ಮೇ 25ರಂದು ಕ್ಯಾಪಿಫೋರ್ನಿಯಾದಲ್ಲಿರುವ ಸ್ವಗೃಹದಲ್ಲಿ ನಿಧನರಗಿದ್ದಾರೆ. ಮೂಡಬಿದಿರೆ ತಾಲೂಕು ನೆಲ್ಲಿಕಾರಿನಲ್ಲಿ ಅಕ್ಟೋಬರ್ 23, 1923ರಲ್ಲಿ ಅವರು ಬನಾರಸ್ ಹಿಂದೂ ಯೂನಿವರ್ಸಿಟಿ, ಸ್ಕೂಲ್ ಒಫ್ ಓರಿಯೆಂಟಲ್ ಆಫ್ರಿಕಾನ್ ಸ್ಟಡೀಸ್‌ನಲ್ಲಿ ಶಿಕ್ಷಣ ಪಡೆದಿದ್ದರು.

Scholar Padmanabh Shrivarma Jaini No More

ಯೂನಿವರ್ಸಿಟಿ ಒಫ್ ಮಿಚಿಗನ್ ಹಾಗೂ ಯೂನಿವರ್ಸಿಟಿ ಒಫ್ ಬೆರ್ಕೆಲಿ ಕ್ಯಾಲಿಫೋರ್ನಿಯಾದಲ್ಲಿ ಸೇವೆ ಸಲ್ಲಿಸಿದ್ದರು. ಹೆಡ್ ಆಫ್ ದಿ ಡಿಪಾರ್ಟ್ಮೆಂಟ್ ಆಫ್ ಸೌತ್ ಅಂಡ್ ಸೌತ್ ಈಸ್ಟ್ ಏಶಿಯನ್ ಸ್ಟಡೀಸ್, ಯೂನಿವರ್ಸಿಟಿ ಒಫ್ ಕ್ಯಾಲಿಫೋರ್ನಿಯಾದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ಜೈನಿಯವರಿಗೆ ಬುದ್ಧಿಸ್ಟ್ ಸ್ಟಡೀಸ್‌ನ ಅತ್ಯುನ್ನತ ಪದವಿ ಆದ ತ್ರಿಪಿಟಿಕಾಚಾರ್ಯವನ್ನು ಸಿಲೋನ್ ದೇಶದ ಪ್ರಧಾನಿ ಸೇನಾನಾಯಿಕೆ ಅವರು ಪ್ರಧಾನ ಮಾಡಿದ್ದರು. ಹಲವು ಪುಸ್ತಕಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಬರೆದು ಸಾವಿರಾರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗಿದ್ದರು.

ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು ಆತ್ಮಕಥನ 'ಯೋಗಾಯೋಗ' ಕಳೆದ ವರ್ಷ ಮುದ್ರಣವಾಗಿದ್ದು ವಿದೇಶದ ಎಲ್ಲಾ ಗ್ರಂಥಾಲಯದಲ್ಲಿದೆ. ಸಂಸ್ಕೃತ, ಪ್ರಾಕೃತ ಹಾಗೂ ಪಾಲಿ ಭಾಷೆಗಳಲ್ಲಿ ಅವರು ಪಾರಂಗತಾರಾಗಿದ್ದರು. ಜೈನ ಹಾಗೂ ಬೌದ್ಧ ಧರ್ಮಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+