ಕುಂದಾಪುರ ಪ್ರವಾಸದಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ

ಉಡುಪಿ, ಡಿಸೆಂಬರ್ 24: ರಿಯಲ್ ಸ್ಟಾರ್ ಉಪೇಂದ್ರ ತವರಿನ ಪ್ರವಾಸದಲ್ಲಿದ್ದಾರೆ. ಉಪೇಂದ್ರ ಕುಟುಂಬ ಸಮೇತರಾಗಿ ಉಡುಪಿ ಜಿಲ್ಲೆ ಕುಂದಾಪುರಕ್ಕೆ ಬಂದಿದ್ದು, ಈ ಭಾಗದ ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ.

ಉಪೇಂದ್ರ ಅವರ ಕುಟುಂಬದ ಕುಲ ದೇವಸ್ಥಾನವಾದ ಸಾಲಿಗ್ರಾಮದ ಗುರು ನರಸಿಂಹ ದೇವಾಲಯಕ್ಕೆ ನಿನ್ನೆ ಅಂದರೆ ಡಿಸೆಂಬರ್ 23 ರಂದು ಸಂಜೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಪ್ರಿಯಾಂಕ ಉಪೇಂದ್ರ, ಪುತ್ರ ಮತ್ತು ತಾಯಿಯೂ ಉಪೇಂದ್ರ ಅವರ ಜೊತೆಗಿದ್ದರು.ಶ್ರೀ ಗುರುನರಸಿಂಹ ದೇವರು ಉಪೇಂದ್ರ ಕುಟುಂಬದ ಕುಲದೇವರು ಅನ್ನೋದು ವಿಶೇಷ.

Real StarUpendra visited temples in Kundapur, Udupi district.

ಪುತ್ರನ ಉಪನಯನ ಸಿದ್ಧತೆಯಲ್ಲಿರುವ ಉಪೇಂದ್ರ ಕುಲದೇವರಿಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ಉತ್ತರ ಕನ್ನಡ ಜಿಲ್ಲೆಯ ಸೋಂದೇ ಕ್ಷೇತ್ರದಲ್ಲಿರುವ ಮಠದಲ್ಲೂ ಉಪನಯನದ ಆಮಂತ್ರಣ ಇರಿಸಿ ಪೂಜೆ ಸಲ್ಲಿಸಿದ್ದರು. ಇದೇ ವೇಳೆ ತವರು ಗ್ರಾಮ ತೆಕ್ಕಟ್ಟೆಯಲ್ಲಿ ನಡೆದ ಪ್ರಜಾಕೀಯ ಪಕ್ಷದ ಕಾರ್ಯಕ್ರಮದಲ್ಲೂ ಭಾಗಿಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+