ಉಡುಪಿಯಲ್ಲಿ ರಿಯಲ್ ಕಾಂತಾರ; ಕೋರ್ಟ್‌ಗೆ ಮೆಟ್ಟಿಲೇರಿದ ವ್ಯಕ್ತಿ ಅಸಹಜ ಸಾವು

ಮಂಗಳೂರು, ಜನವರಿ, 08: ಕೋರ್ಟ್​ಗೆ ಹೋಗುತ್ತೀಯ, ಆದರೆ ನಿನ್ನ ತೀರ್ಮಾನ ಮೆಟ್ಟಿನಲ್ಲಿ ನಾನು ಮಾಡುತ್ತೇನೆ ಎಂದು ಪಂಜುರ್ಲಿ ದೈವ ನುಡಿಯುತ್ತದೆ. ಆದರೂ ಇದನ್ನು ಲೆಕ್ಕಿಸದೆ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ರಕ್ತಕಾರಿ ಸಾವನ್ನಪ್ಪುತ್ತಾನೆ. ಇದು ಕನ್ನಡದ ಸೂಪರ್ ಹಿಟ್ ಮೂವಿ ಕಾಂತಾರ ಸಿನಿಮಾದ ರೀಲ್ ಸ್ಟೋರಿಯಾಗಿತ್ತು. ಆದರೆ ಉಡುಪಿಯಲ್ಲಿ ಇದೇ ರೀತಿಯ ನೈಜ ಘಟನೆಯೊಂದು ನಡೆದಿದೆ.

ಉಡುಪಿ ಜಿಲ್ಲೆಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದಲ್ಲಿ ದೈವಕೋಲದ ವಿಚಾರದಲ್ಲಿ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದ. ಆ ವ್ಯಕ್ತಿ ದೈವದ ತಂಬಿಲ ಸೇವೆ ಸಂದರ್ಭದಲ್ಲಿ ಸ್ಥಾನದ ಎದುರೇ ಕುಸಿದ್ದಿಬಿದ್ದು ಸಾವನ್ನಪ್ಪಿದ್ದು, ಊರ ಜನ ಮೂಕವಿಸ್ಮಿತರಾಗಿದ್ದಾರೆ. ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ. ಈ ನೆಪದಲ್ಲಿ ಸಮಸ್ತ ಊರಿನವರು ಭಾಗಿಯಾಗುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ದೌಲತ್ತಿನಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇಲ್ಲಿಯ ಭಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಹೀಗೆ 9 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇದರಲ್ಲಿ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸ್ತಾರೆ. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸುತ್ತಾರೆ.

 ಕೋಲ ನಡೆಸಲು ಸಿದ್ಧತೆ

ಕೋಲ ನಡೆಸಲು ಸಿದ್ಧತೆ

ವರ್ಷಂಪ್ರತಿಯಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿದ್ದು, ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸಿತ್ತು. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24 ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ.

 ದೈವಸ್ಥಾನದ ದೈವ ನರ್ತಕರಿಗೆ ಬೆದರಿಕೆ

ದೈವಸ್ಥಾನದ ದೈವ ನರ್ತಕರಿಗೆ ಬೆದರಿಕೆ

ಟ್ರಸ್ಟಿ ಪ್ರಕಾಶ್ ಶೆಟ್ಟಿ ಕೀಟಲೆ ಕೋರ್ಟ್​ಗೆ ಮಾತ್ರ ಸೀಮಿತವಾಗಿರಲಿಲ್ಲ. ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಲೇ ಇರುತ್ತಾರೆ. ಕೊನೆಗೆ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು‌ ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿ ಕೊಡಬೇಕು ಎಂದು ಬೆದರಿಸುತ್ತಾರೆ ಅಂತಾ ದೈವ ನರ್ತಕರು ಆರೋಪ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಪಡುಬಿದ್ರೆ ಜಾರಂದಾಯ ಬಂಟ ದೇವಸ್ಥಾನ ವಾರ್ಷಿಕ ನೇಮೋತ್ಸವದ ಗೊಂದಲದಿಂದ‌ ಕೂಡಿದೆ. ಈ ಹಿನ್ನೆಲೆಯಲ್ಲಿ ದೈವ ನೇಮೋತ್ಸವ ಮಾಡದೆ ಇರಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ದೇವಸ್ಥಾನದ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದ ಟ್ರಸ್ಟ್ ಮುಖಂಡರು, ಕಾನೂನು ತೀರ್ಮಾನದ ನಂತರ ಮುಂದಿನ ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಂದಾಯ ದೈವಕ್ಕೆ ನೇಮೋತ್ಸವ ಮಾಡದೆ ಇರಲು ನಿರ್ಧರಿಸಿದ್ದಾರೆ. ಸೂತಕ ಹಿನ್ನೆಲೆ ಜನವರಿ 07ರಂದು ನಡೆಯಬೇಕಿದ್ದ ನೇಮೋತ್ಸವನ್ನು ನೂತನ ಸಮಿತಿ ಮುಂದೂಡಿದೆ.

 ಜನವರಿ 13ಕ್ಕೆ ಕೋಲ ನಡೆಸಲು ನಿರ್ಧಾರ

ಜನವರಿ 13ಕ್ಕೆ ಕೋಲ ನಡೆಸಲು ನಿರ್ಧಾರ

ಅಗೇಲು (ತಂಬಿಲ) ಸೇವೆ ವೇಳೆ ಕುಸಿದುಬಿದ್ದ ಜಯಪೂಜಾರಿ ಮೃತಪಟ್ಟು ಇಂದಿಗೆ 8ನೇ ಏಳನೇ ದಿನವಾಗಿದ್ದು, ಹೀಗಾಗಿ ಜನವರಿ 13 ಕ್ಕೆ ಕೋಲ ನಡೆಸಲು ನಿರ್ಧಾರ ಮಾಡಿದೆ. ನೂತನ ಸಮಿತಿ ನಿರ್ಧಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಕಾಶ್ ಶೆಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ಜನವರಿ 7ರಂದು ಕೋಲ ನಿರ್ಧಾರ ಆಗಿರುವುದು ಏಕಾಏಕಿ ಮುಂದೂಡಿದ್ದು ಸರಿಯಲ್ಲ. ಸೂತಕ ಇಡೀ ಗ್ರಾಮಕ್ಕೆ ಇಲ್ಲ, ಹೀಗಾಗಿ ಕೋಲ ನಡೆಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ದೈವ ನೇಮೋತ್ಸವ ಮಾಡದೆ ಇರಲು ದೇವಸ್ಥಾನದ ಟ್ರಸ್ಟ್ ನಿರ್ಧಾರಿಸಿದ್ದು, ದೇವಸ್ಥಾನದ ಮುಂದೆ ನಿಂತು ಟ್ರಸ್ಟ್ ಮುಖಂಡರು ಪ್ರಾರ್ಥನೆ ಸಲ್ಲಿಸಿದ್ದಾರೆ.

 2,000 ಜನರಿಗೆ ಊಟದ ವ್ಯವಸ್ಥೆ

2,000 ಜನರಿಗೆ ಊಟದ ವ್ಯವಸ್ಥೆ

ಟ್ರಸ್ಟ್ 2,000 ಜನರಿಗೆ ಊಟದ ವ್ಯವಸ್ಥೆ ಮಾಡಿತ್ತು. ಸಾವಿರಾರು ಕುರ್ಚಿಗಳು, ಟೇಬಲ್‌ಗಳು, ಹೂ ಗಳನ್ನು ವ್ಯವಸ್ಥೆಯನ್ನು ಜಾರಂದಾಯ ಸೇವಾ ಟ್ರಸ್ಟ್ ತರಿಸಿತ್ತು‌. ಆದರೆ ನೇಮ ರದ್ದಾದ ಹಿನ್ನೆಲೆಯಲ್ಲಿ ಸದ್ಯ ಊಟವನ್ನು ಸ್ಥಳೀಯ ಶಾಲೆಗಳಿಗೆ ನೀಡಿದೆ. ಒಟ್ಟಿನಲ್ಲಿ ದೈವಸ್ಥಾನ ಸಮಿತಿ, ಟ್ರಸ್ಟ್ ವಿಚಾರ ವಿಕೋಪಕ್ಕೆ ತಿರುಗಿದ್ದು, ಜನವರಿ 7ರಂದು ನಡೆಯಬೇಕಾದ ಕೋಲವನ್ನು ಮುಂದಿನ ದಿನದಲ್ಲಿ ನಡೆಸಲು ಟ್ರಸ್ಟ್ ನಿರ್ಧಾರ ಮಾಡಿದೆ. ಮುಂದಿನ ದಿನದಲ್ಲಿ ಈ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+