ವಿಡಿಯೋ ವೈರಲ್; ಉಡುಪಿಯಲ್ಲಿ ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿದ ರಕ್ಷಿತ್ ಶೆಟ್ಟಿ
Recommended Video
ಉಡುಪಿ, ಆಗಸ್ಟ್ 23: ಶ್ರೀ ಕೃಷ್ಣನ ಊರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ವೈಭವದಿಂದ ನಡೆಯುತ್ತಿದೆ. ಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ 9 ರಂಧ್ರದ ನವಗ್ರಹ ಕಿಟಕಿಯ ಮೂಲಕ ಭಕ್ತರು ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ.
ಮೊಸರು ಗಡಿಗೆ ಒಡೆವ ವಿಟ್ಲಪಿಂಡಿ ಹಾಗೂ ಕೃಷ್ಣನ ಬದುಕಿನ ಚಿತ್ರಣ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಇನ್ನೊಂದೆಡೆ ತಾಸೆಯ ಬಡಿತಕ್ಕೆ ಹೆಜ್ಜೆಹಾಕುವ ಹುಲಿವೇಷಧಾರಿಗಳ ಕುಣಿತವನ್ನು ನೋಡುವುದೇ ಕಣ್ಣಿಗೆ ಹಬ್ಬವೆನಿಸಿದೆ. ಹುಲಿಕುಣಿತಕ್ಕೆ ಈ ಬಾರಿ ಮತ್ತೂ ಒಂದು ಆಕರ್ಷಣೆ ಸೇರ್ಪಡೆಯಾಗಿದೆ.

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಹುಲಿ ನೃತ್ಯಕ್ಕೆ ಸ್ಟೆಪ್ ಹಾಕಿರುವುದೇ ಆ ವಿಶೇಷ. ಅಷ್ಟಮಿಯ ಸಂದರ್ಭದಲ್ಲಿ ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ಉಡುಪಿ ತಂಡದ ಜೊತೆ ರಕ್ಷಿತ್ 'ಪಿಲಿ ನಲಿಕೆ' ಮಾಡಿದರು.

ತಾಸೆಯ ಬಡಿತಕ್ಕೆ ಹೆಜ್ಜೆ ಹಾಕಿದ ರಕ್ಷಿತ್ ಶೆಟ್ಟಿ ತಮ್ಮ "ಉಳಿದವರು ಕಂಡಂತೆ" ಚಿತ್ರದ ಹುಲಿಕುಣಿತದ ಸನ್ನಿವೇಷವನ್ನು ನೆನೆದರು. ಚಿತ್ರದಲ್ಲಿ ತಾನು ಹುಲಿವೇಷ ಹಾಕಿ ಕುಣಿದ ಪರಿಯನ್ನು ನೆನೆಯುತ್ತಲೇ ತಂಡದ ಜೊತೆ ಹೆಜ್ಜೆ ಹಾಕಿದರು.
ರಕ್ಷಿತ್ ಹೆಜ್ಜೆ ಹಾಕಿದ ಸಂದರ್ಭ ಸ್ಥಳೀಯ ಯುವಕ, ಯುವತಿಯರು ಅವರಿಗೆ ಸಾಥ್ ನೀಡಿದರು. ರಕ್ಷಿತ್ ಶೆಟ್ಟಿ ಅವರ ಪಿಲಿ ನಲಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications