ಉಡುಪಿ ಸಬ್ ಜೈಲ್ ನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ
ಉಡುಪಿ, ಫೆಬ್ರವರಿ 03: ಹಿರಿಯಡ್ಕ ಸಮೀಪ ಅಂಜಾರುವಿನಲ್ಲಿರುವ ಸಬ್ ಜೈಲ್ ನಲ್ಲಿ ಖೈದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಣಾಧೀನ ಖೈದಿ, ಉಡುಪಿಯ ಕಿದಿಯೂರು ಗ್ರಾಮದ ನಿವಾಸಿ ಅಮರ್ ನಾಥ್ (32) ಎಂಬ ವ್ಯಕ್ತಿ ನೇಣಿಗೆ ಶರಣಾದವನು.
ಅಮರ್ ನಾಥ್ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿತನಾಗಿದ್ದ. 2018 ನವೆಂಬರ್ ರಿಂದ ವಿಚಾರಣಾಧೀನ ಕೈದಿಯಾಗಿದ್ದ ಈತ ಕಾರಾಗೃಹದ ವೀಡಿಯೋ ಕಾನ್ಫರೆನ್ಸ್ ಹಾಲ್ ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಕ್ಷಣ ಗಮನಿಸಿದ ಇಲ್ಲಿನ ಸಿಬ್ಬಂದಿಗಳು, ಆತನನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications