ಇಫ್ತಾರ್ ಕೂಟ, ಶ್ರೀಗಳ ಬೆನ್ನಿಗೆ ನಿಂತ ಉಡುಪಿ ಯುವ ಕಾಂಗ್ರೆಸ್

ಉಡುಪಿ, ಜೂನ್ 27 : ಶ್ರೀಕೃಷ್ಣ ಮಠದಲ್ಲಿ ಮುಸ್ಲಿಂ ಸಮುದಾಯದವರಿಗೆ ಆಯೋಜಿಸಲಾಗಿದ್ದ ಇಫ್ತಾರ್ ಕೂಟದ ಕುರಿತಾಗಿ ವ್ಯಾಪಕ ಪರ ವಿರೋಧ ಚರ್ಚೆಗಳು ನಡೆದಿವೆ.

ಅದಕ್ಕೆ ಪೂರಕವೆಂಬಂತೆ ಉಡುಪಿ ಯುವ ಕಾಂಗ್ರೆಸ್‌ ಪರ್ಯಾಯ ವಿಶ್ವೇಶ ತೀರ್ಥ ಶ್ರೀಗಳ ಪರವಾಗಿ ನಿಂತಿದೆ. ಜುಲೈ 02ರಂದು ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಲು ಶ್ರೀರಾಮ ಸೇನೆ ಮುಂದಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್ ಅಮೀನ್ ತಿಳಿಸಿದ್ದಾರೆ.

Pramod Muthalik trying to disrupt peace in Udupi, will not allow SRS protest: Youth Congress

ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್ ಅಮೀನ್, ಪೇಜಾವರ ಶ್ರೀಗಳ ಪರ ಹೇಳಿಕೆ ನೀಡಿದ್ದು, ಇಫ್ತಾರ್ ಕೂಟ ನಡೆಸಿದ್ದರ ವಿರುದ್ದ ಶ್ರೀರಾಮ ಸೇನೆಯ ಪ್ರತಿಭಟನೆಯ ವಿರುದ್ಧ ಕಿಡಿ ಕಾರಿದರು.

ಶ್ರೀರಾಮ ಸೇನೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಒಂದು ವೇಳೆ ಪ್ರತಿಭಟನೆ ಮಾಡಲು ಮುಂದಾದರೆ ಶ್ರೀರಾಮ ಸೇನೆಯ ವಿರುದ್ಧ ಯುವ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+