ಶೀರೂರು ಶ್ರೀಗಳ ಮರಣೋತ್ತರ ಪರೀಕ್ಷೆ ವರದಿ ಇನ್ನೂ ವಿಳಂಬ
Recommended Video

ಉಡುಪಿ, ಜುಲೈ 25: ಶೀರೂರು ಶ್ರೀಗಳ ಅಸಹಜ ಸಾವಿನ ತನಿಖೆ ಮುಂದುವರಿಯುತ್ತಿದ್ದು, ಹಲವು ರಹಸ್ಯಗಳು ಹೊರಬೀಳುತ್ತಲೇ ಇವೆ. ಅದರಲ್ಲೂ ಶ್ರೀಗಳು ವೃಂದಾವನಸ್ಥರಾದ ಮೇಲೆ ಇನ್ನಷ್ಟು ಮಾಹಿತಿಗಳು ಹೊರ ಬರುತ್ತಲೇ ಇವೆ.
ಶ್ರೀಗಳ ಸಾವಿನ ಬಗ್ಗೆ ಪೊಲೀಸ್ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಸಂಶಯವಿರುವ ಹಲವರನ್ನು ವಿಚಾರಣೆ ಕೂಡ ನಡೆಸಲಾಗಿದೆ. ಆದರೆ ಖಚಿತ ಮಾಹಿತಿ ಇಲ್ಲದೇ ಇರುವುದರಿಂದ ಯಾರನ್ನೂ ಬಂಧನಕ್ಕೆ ಒಳಪಡಿಸಿಲ್ಲ.
ಶ್ರೀಗಳ ಸಾವು ಅಸಹಜ ಎಂದು ಹೇಳಿದ ವೈದ್ಯರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಇನ್ನೇನೂ ವರದಿ ಪ್ರಕಟವಾದ ಕೂಡಲೇ ನಿಜವಾದ ಮುಖವಾಡ ಬಯಲಾಗಲಿದೆ.

ಮರಣೋತ್ತರ ಪರೀಕ್ಷೆಯ ವರದಿ ಎರಡು-ಮೂರು ದಿನಗಳಲ್ಲಿ ಬರುವ ಸಾಧ್ಯತೆಯಿದೆ ಎಂದು ಭಾವಿಸಿದ್ದ ಪೊಲೀಸರಿಗೆ, ವರದಿ ಇನ್ನೂ ಕೈ ಸೇರಿಲ್ಲ. ವರದಿ ಇನ್ನೂ ವಿಳಂಬವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಎಫ್.ಎಸ್.ಎಲ್ ರಿಪೋರ್ಟ್ ಬರಲಿದೆ.
6 ವಾರಗಳ ಬಳಿಕ ಎಫ್.ಎಸ್.ಎಲ್ ರಿಪೋರ್ಟ್ ಬರುವ ಸಾಧ್ಯತೆ ಪೊಲೀಸರು ತಿಳಿಸಿದ್ದಾರೆ. ಪೂರ್ಣ ವರದಿಯ ಬಳಿಕ ಪೊಲೀಸರಿಂದ ಮಹತ್ವದ ತನಿಖೆ ನಡೆಯಲಿದ್ದು, ಈಗಾಗಲೇ ಸಂಶಯ ಬಂದ ಕಡೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications