ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಿಸಿದ ಪೇಜಾವರ ಶ್ರೀಗಳು
ಉಡುಪಿ, ನವೆಂಬರ್ 7: ಉಡುಪಿಯ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶ ತೀರ್ಥರು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕವನ ಓದುವ ಆಹ್ವಾನ ಸ್ವೀಕರಿಸಿ ಕವನ ವಾಚಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕವನ ಓದುವ ಸಂಬಂಧ ಹ್ಯಾಷ್ ಟ್ಯಾಗ್ ಅಭಿಯಾನ ನಡೆಯುತ್ತಿದ್ದು, ನವೆಂಬರ್ ತಿಂಗಳು ಪೂರ್ತಿ ಅರ್ಥಪೂರ್ಣವಾಗಿ ಕನ್ನಡ ಮಾಸಾಚರಣೆ ಮಾಡುವುದು ಇದರ ಉದ್ದೇಶವಾಗಿದೆ. ಇದರ ಅಂಗವಾಗಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕವನವನ್ನು ವಾಚಿಸುವಂತೆ ಸವಾಲಿನ ರೂಪದಲ್ಲಿ ಪ್ರಮುಖರ ಜೊತೆ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಬಂದ ಸವಾಲನ್ನು ಪೇಜಾವರ ಶ್ರೀಗಳು ಖುಷಿಯಿಂದಲೇ ಸ್ವೀಕರಿಸಿದ್ದಾರೆ.

ಆಹ್ವಾನ ಸ್ವೀಕರಿಸಿ ರಾಷ್ಟ್ರಕವಿ ಕುವೆಂಪು ಅವರ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಕವನ ವಾಚಿಸಿದ್ದಾರೆ. ಸದ್ಯ ಕನ್ನಡ ಸಾಹಿತ್ಯ ಯಾವುದಾದರು ಪ್ರಕಾರದ ವಾಚನದ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಹಿರಿಯರು ಕಿರಿಯರು ಈ ಕನ್ನಡ ಮಾಸದಲ್ಲಿ ಭಾಗವಹಿಸುತ್ತಾರೆ. ಪೇಜಾವರ ಶ್ರೀಗಳ ಈ ವಿಡಿಯೋ ಕನ್ನಡಾಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ತಂದಿದೆ.












Click it and Unblock the Notifications