ಪೇಜಾವರ ಶ್ರೀಗಳಿಗೆ ಇಂದು (ಆಗಸ್ಟ್ 20) ಹರ್ನಿಯ ಶಸ್ತ್ರಚಿಕಿತ್ಸೆ
ಉಡುಪಿ, ಆಗಸ್ಟ್ 20: ಇಂದು ಉಡುಪಿಯ ಪೇಜಾವರ ಶ್ರೀಗಳು ಹರ್ನಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ . ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪರ್ಯಾಯ ಪಿಠಾಧಿಪತಿ ವಿಶ್ವೇಶತೀರ್ಥ ಸ್ವಾಮಿಗಳಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಯಲಿದೆ .
ಹರ್ನಿಯಾ ನೋವು ಹೊರತುಪಡಿಸಿ ಲವಲವಿಕೆಯಿಂದಿರುವ 86ವರ್ಷ ಪ್ರಾಯದ ಪೇಜಾವರ ಶ್ರೀಗಳು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗೆ ಒಳಗಾಗಲಿದ್ದಾರೆ . ಸದ್ಯ ಪರ್ಯಾಯ ಪೂಜಾ ಕೈಂಕರ್ಯ ಕೈಗೊಂಡಿರುವ ಪೇಜಾವರ ಶ್ರೀಗಳು ಶನಿವಾರ ಕೂಡ ಎಲ್ಲಾ ಪೂಜಾ ವಿಧಿ ವಿಧಾನದಲ್ಲಿ ಭಾಗವಹಿಸಿದ್ದರು .

ಇಂದು ಮಹಾಪೂಜೆಯ ಬಳಿಕ ಪೇಜಾವರ ಶ್ರೀಗಳು ಆಸ್ಪತ್ರೆಗೆ ತೆರಳಲಿದ್ದಾರೆ .ಒಂದು ದಿನದ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಮಠಕ್ಕೆ ಪೇಜಾವರ ಶ್ರೀಗಳು ಮರಳಲಿದ್ದಾರೆ.
ಇದೊಂದು ಸಣ್ಣ ಶಸ್ತ್ರಚಿಕಿತ್ಸೆ ಆಗಿದ್ದು ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ .












Click it and Unblock the Notifications