ಉಡುಪಿಯಲ್ಲಿ ಮರಳು ಸಮಸ್ಯೆ ಉಲ್ಬಣ:ವ್ಯಕ್ತಿಯಿಂದ ದಯಾಮರಣಕ್ಕೆ ಅರ್ಜಿ!
ಉಡುಪಿ, ಮಾರ್ಚ್ 28: ಉಡುಪಿಯಲ್ಲಿ ಮರಳು ಸಮಸ್ಯೆ ತೀವ್ರಗೊಂಡಿದೆ. ಮರಳುಗಾರಿಕೆ, ಕಟ್ಟಡ ಉದ್ಯಮವನ್ನು ನೇರವಾಗಿ ಮತ್ತು ಪರೋಕ್ಷವಾಗಿ ನಂಬಿಕೊಂಡ ಕುಟುಂಬಗಳು ತತ್ತರಿಸಿ ಹೋಗಿವೆ.ಮರಳುಗಾರಿಕೆಯನ್ನೇ ನಂಬಿಕೊಂಡಿದ್ದ ಕುಟುಂಬವೊಂದು ತುತ್ತು ಅನ್ನಕ್ಕೂ ಗತಿ ಇಲ್ಲದೆ ಜಿಲ್ಲಾಧಿಕಾರಿಗಳಿಗೆ ದಯಾಮರಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇವರು ರಾಘವೇಂದ್ರ.ಹೆಚ್ಚೆಂದರೆ ನಲವತ್ತರ ಆಸುಪಾಸಿನ ವಯಸ್ಸು.ಶಾಲೆಗೆ ಹೋಗುವ ಮಕ್ಕಳಿದ್ದಾರೆ.ಕಳೆದ ನಾಲ್ಕು ವರ್ಷಗಳ ಹಿಂದಿನ ತನಕವೂ ಇವರಿಗೆ ಮರಳುಗಾರಿಕೆ ಕಸುಬಾಗಿತ್ತು.ನಾಲ್ಕು ಟಿಪ್ಪರ್ ಗಳು ಮತ್ತು ಹನ್ನೆರಡು ಮಂದಿ ಕೆಲಸಗಾರರನ್ನಿಟ್ಟು ದುಡಿಸುವ ತಾಕತ್ತಿದ್ದವರು ರಾಘವೇಂದ್ರ.ಆದರೆ ಮೂರು ವರ್ಷಗಳಿಂದ ಉಡುಪಿಯಲ್ಲಿ ಮರಳು ಅಭಾವ ತೀವ್ರಗೊಂಡಿದೆ.
ಕಠಿಣ ಸಿಆರ್ ಝಡ್ ಕಾಯಿದೆ ರಾಘವೇಂದ್ರ ತರಹದ ಅನೇಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.ಮರಳುಗಾರಿಕೆಯನ್ನೇ ನಂಬಿರುವ ಜನ ಇದೀಗ ತತ್ತರಿಸಿ ಹೋಗಿದ್ದಾರೆ.ನಿ
ಮಗೆ ಆಶ್ಚರ್ಯವಾಗಬಹುದು, ಮರಳುಗಾರಿಕೆ ಇವತ್ತು ಶುರುವಾಗಬಹುದು, ನಾಳೆ ಶುರುವಾಗಬಹುದು ಎಂದು ಕಾಯುತ್ತಿದ್ದ ರಾಘವೇಂದ್ರ ಈಗ ತಮ್ಮಬಳಿ ಇದ್ದ ಮೂರು ಟಿಪ್ಪರ್ ಗಳನ್ನು ಮಾರಿ ಬೀದಿ ಪಾಲಾಗಿದ್ದಾರೆ. ಇರುವ ಇನ್ನೊಂದು ಟಿಪ್ಪರ್ ಮೇಲೆ ಏಳು ಲಕ್ಷ ಸಾಲ ಇದೆ. ಹೀಗಾಗಿ ಹೊಟ್ಟೆಪಾಡಿಗೆ ಬೇರೆ ದಾರಿಯೇ ಇಲ್ಲದೆ ಇವರು ಡಿಸಿಗೆ ಪತ್ರ ಬರೆದಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ನನಗೂ ನನ್ನ ಕುಟುಂಬಕ್ಕೂ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಈ ವ್ಯಕ್ತಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ!

ಒಂದೇ ಸಮನೆ ಅತ್ತ ರಾಘವೇಂದ್ರ
ಮರಳು ಉದ್ಯಮ ನಡೆಸುವ ವ್ಯಕ್ತಿಗಳ ಜೊತೆ ಪತ್ರಿಕಾಗೋಷ್ಠಿ ನಡೆಸಿದ ರಾಘವೇಂದ್ರ ಒಂದೇ ಸಮನೆ ಅತ್ತಿದ್ದಾರೆ.ನನಗೆ ಬದುಕಲು ಯಾವುದೇ ದಾರಿ ಉಳಿದಿಲ್ಲ, ಉಡುಪಿ ಜಿಲ್ಲಾಧಿಕಾರಿಯವರು ಒಂದೋ ಮರಳುಗಾರಿಕೆಗೆ ಅನುಮತಿ ಕೊಡಬೇಕು ಅಥವಾ ದಯಾಮರಣಕ್ಕೆ ಅವಕಾಶ ಕೊಡಬೇಕು ಎಂಬುದು ಈ ವ್ಯಕ್ತಿಯ ಆಗ್ರಹ.

ಎಸ್ ಇ ಝಡ್ ಕಾಯಿದೆ ಸಡಿಲಿಸಲು ಒಪ್ಪುತ್ತಿಲ್ಲ
ಮರಳು ಸಮಸ್ಯೆ ಪರಿಹರಿಸಲು ಕೋರಿ ಉಡುಪಿಯಲ್ಲಿ ವರ್ಷಗಳಿಂದ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಾಗಿವೆ.ಮರಳು ಲಾರಿಗಳು ಸಾವಿರ ಸಂಖ್ಯೆಗಳಲ್ಲಿ ರಸ್ತೆಯಲ್ಲಿ ನಿಂತು ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ಉಡುಪಿ ಶಾಸಕರ ನೇತೃತ್ವದಲ್ಲೂ ಸತ್ಯಾಗ್ರಹಗಳಾಗಿವೆ.ಆದರೂ ಕೇಂದ್ರ ಸರಕಾರ ಮಾತ್ರ ಎಸ್ ಇ ಝಡ್ ಕಾಯಿದೆಯನ್ನು ಸಡಿಲಿಸಲು ಒಪ್ಪುತ್ತಿಲ್ಲ.

ಡಿಸಿಗೆ ಸಂಪೂರ್ಣ ಅಧಿಕಾರ
ಇನ್ನು ರಾಜ್ಯ ಸರಕಾರ ಡಿಸಿಗೆ ಸಂಪೂರ್ಣ ಅಧಿಕಾರ ನೀಡಿದೆ.ಆದರೆ ಜಿಲ್ಲಾಡಳಿತ ಜಪ್ಪಯ್ಯ ಅಂದ್ರೂ ಕಾನೂನಿನ ನೆಪ ಮುಂದಿಟ್ಟು ಈ ಹಿಂದಿನಂತೆ ಇದ್ದ ಮರಳುಗಾರಿಕೆಗೆ ಅನುಮತಿ ನೀಡುತ್ತಿಲ್ಲ. ಇದೆಲ್ಲದರ ಫಲವಾಗಿ ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ತೀವ್ರಗೊಂಡಿದೆ.

ಇದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ಘಂಟೆ
ಜಿಲ್ಲಾಡಳಿತ ಮತ್ತು ಮರಳು ಉದ್ಯಮದ ನಡುವಿನ ಸಂಘರ್ಷ ಮೂರು ವರ್ಷಗಳ ಬಳಿಕವೂ ನಿಲ್ಲುವ ಸೂಚನೆ ಕಾಣಿಸುತ್ತಿಲ್ಲ.ಪರಿಣಾಮವಾಗಿ ಮರಳುಗಾರಿಕೆಯನ್ನೇ ನಂಬಿದ ರಾಘವೇಂದ್ರರಂತಹ ಸಾವಿರಾರು ವ್ಯಕ್ತಿಗಳು ಹೊಟ್ಟೆಪಾಡಿಗೂ ಪರದಾಡುವಂತಾಗಿದೆ. ಮರಳುಗಾರಿಕೆಯನ್ನೇ ನಂಬಿದ ಈ ವ್ಯಕ್ತಿ ದಯಾಮರಣದ ಮೊರೆ ಹೋಗಿರುವುದು ಜಿಲ್ಲಾಡಳಿತಕ್ಕೆ ಒಂದು ಎಚ್ಚರಿಕೆ ಘಂಟೆ ಎಂಬುದರಲ್ಲಿ ಎರಡು ಮಾತಿಲ್ಲ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications