Get Updates
Get notified of breaking news, exclusive insights, and must-see stories!

ಉಡುಪಿ: ನೀರಲ್ಲಿ ಕೊಚ್ಚಿ ಹೋಗಿದ್ದ ನಿಧಿ ಶವವಾಗಿ ಪತ್ತೆ

Recommended Video

      ಉಡುಪಿಯಲ್ಲಿ ಸುರಿದ ಮಳೆಯ ಅಬ್ಬರಕ್ಕೆ 9 ವರ್ಷದ ನಿಧಿ ಆಚಾರ್ಯ ಬಲಿ | Oneindia Kannada

      ಉಡುಪಿ, ಮೇ 30: ಉಡುಪಿಯಲ್ಲಿ ಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ನಿನ್ನೆ ಕೊಚ್ಚಿ ಹೋಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ ನಿಧಿ ಆಚಾರ್ಯ(9) ಶವವಾಗಿ ಪತ್ತೆಯಾಗಿದ್ದಾಳೆ.

      16 ಗಂಟೆಗಳ ಬಳಿಕ ಎನ್ ಡಿಆರ್ ಎಫ್ ಕಾರ್ಯಾಚರಣೆ ವೇಳೆ ಮೃತ ದೇಹ ಪತ್ತೆಯಾಗಿದೆ. ಸ್ಥಳೀಯ ಮನೋಹರ್ ಎಂಬುವವರಿಗೆ ನಿಧಿ ಮೃತ ದೇಹ ಸಿಕ್ಕಿದೆ. ಸ್ಕೂಲ್ ಬ್ಯಾಗ್, ಜಾಕೆಟ್ ಧರಿಸಿದ್ದ ನಿಧಿ ಘಟನಾ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಪತ್ತೆಯಾಗಿದ್ದಾಳೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

      ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನಿನ್ನೆ ನಿಧಿ, ಅಕ್ಕ ನಿಶಾ ಜೊತೆ ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದಳು. ಪಟ್ಲ ಎಂಬಲ್ಲಿ ಕಿರು ಸೇತುವೆ ದಾಟುವಾಗ ಅವಘಡವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರು ಸೇತುವೆ ಮೇಲೆ ಬಂದಿತ್ತು. ಆ ರಭಸಕ್ಕೆ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.

      Nidhi Acharya(9) Body Found 100 Metres From Spot.

      ನಿಶಾ ಆಚಾರ್ಯಳನ್ನು ಸ್ಥಳೀಯರು ರಕ್ಷಿಸಿದರು. ಆದರೆ ಕಣ್ಮರೆಯಾದ ನಿಧಿ ಈಗ ಶವವಾಗಿ ಪತ್ತೆಯಾಗಿದ್ದಾಳೆ. ನಿಧಿ ಪಡುಬಿದ್ರೆಯ ಗಣಪತಿ ಸ್ಕೂಲ್ ನ ವಿದ್ಯಾರ್ಥಿನಿ. ಮೂರು ಗಂಟೆಗೆ ಶಾಲೆ ಬಿಟ್ಟಿದ್ದು, ಮಳೆಯಿದ್ದ ಕಾರಣ ಮಕ್ಕಳಿಬ್ಬರು ತಡವಾಗಿ ಶಾಲೆಯಿಂದ ಹೊರಟಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+