ಮೆಹಂದಿ ಎಫೆಕ್ಟ್: ವಧುವಿನ ಒಂದೇ ಕುಟುಂಬದ 7 ಮಂದಿಗೆ ಕೊರೊನಾ ಸೋಂಕು

ಉಡುಪಿ, ಜುಲೈ 15: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ಐವತ್ತರಿಂದ ಅರವತ್ತು ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಅಲ್ಲದೇ ಈ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹಬ್ಬುತ್ತಿದೆಯಾ ಎಂಬ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಕಾಪು ತಾಲ್ಲೂಕಿನಲ್ಲಿ ನಡೆದ ಘಟನೆ. ಕಾಪು ತಾಲೂಕಿನ ನವವಧುವಿನ ಒಂದೇ ಕುಟುಂಬದ ಏಳು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಕಾಪು ತಾಲೂಕು ಮಲ್ಲಾರಿನ ಕೊಂಬಗುಡ್ಡೆಯಲ್ಲಿ ಈ ಕುಟುಂಬ ಇದ್ದು, ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ಯುವಕನ ಜೊತೆ ಮದುವೆ ಆಗಿರುವ ವಧುವಿನ ಕುಟುಂಬ ಇದಾಗಿದೆ.

Udupi: Newly Married Bride Familys 7 Members Tests Positive For Coronavirus

ನವವಧುವಿಗೆ ಜು.6 ರಂದು ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಎಂಬತ್ತಕ್ಕೂ ಹೆಚ್ಚು ಮಂದಿ ಮೆಹಂದಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೀಗ 3 ಮಕ್ಕಳು, 3 ಮಹಿಳೆಯರ ಸಹಿತ ಏಳು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಸೋಂಕು ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತರರಿಗೂ ಹರಡುವ ಭೀತಿ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+