ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿಯಿಂದ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ: ಕಟೀಲ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 24: ಪ್ರಧಾನಿ ನರೇಂದ್ರ ಮೋದಿಯಿಂದ ಭಾರತೀಯ ಸಂಸ್ಕೃತಿ ಜಗತ್ತಿಗೆ ಪರಿಚಯ ಆಗುತ್ತಿದ್ದು, ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಗುಜರಾತ್ ನಿಂದ ಆರಂಭವಾಗಿದ್ದು, ಭಾರತ ಮತ್ತು ಅಮೆರಿಕಾ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ. ಭಾರತಕ್ಕೆ ಎಲ್ಲಾ ನೆರವು ಅಮೆರಿಕಾದಿಂದ ಸಿಗಲಿದೆ, ವಿಪಕ್ಷಗಳು ವಿರೋಧಿಸುವ ಕೆಲಸ ಮಾಡುತ್ತಿವೆ. ಬಿಜೆಪಿಯನ್ನು ಟೀಕೆ ಮಾಡೋದು ಕಾಂಗ್ರೆಸ್ ಜಾಯಮಾನ ಎಂದು ವಾಗ್ದಾಲಿ ನಡೆಸಿದರು.

ರವಿ ಪೂಜಾರಿ ಭೂಗತ ಲೋಕಕ್ಕೆ ಬಂದಿದ್ದು ಹೇಗೆ? ಆತನ ಹಿನ್ನೆಲೆ ಏನು? ರವಿ ಪೂಜಾರಿ ಭೂಗತ ಲೋಕಕ್ಕೆ ಬಂದಿದ್ದು ಹೇಗೆ? ಆತನ ಹಿನ್ನೆಲೆ ಏನು?

ಕಾಂಗ್ರೆಸ್ ಪಕ್ಷ ಬೌದ್ಧಿಕವಾಗಿ ದಿವಾಳಿಯಾಗಿದೆ. ರಾಷ್ಟ್ರದ ಪರಿಕಲ್ಪನೆ ಕಾಂಗ್ರೆಸ್ ಗೆ ಇಲ್ಲ, ಕಾಂಗ್ರೆಸ್ ಆಡಳಿತ ಇದ್ದಾಗ ಬರಾಕ್ ಒಬಾಮಾ ಬಂದಿಲ್ವಾ? ಒಬಾಮಾ ಲೋಕಸಭೆಯಲ್ಲಿ ಭಾಷಣ ಮಾಡಿದ್ದರು. ಕಾಂಗ್ರೆಸ್ ಅಂದು ಕಣ್ಮುಚ್ಚಿ ಕೂಳಿತಿದ್ಯಾಕೆ? ಎಂದು ಪ್ರಶ್ನಿಸಿದರು.

Nalin Kumar Kateel Said The world Is Looking To India Because Of Narendra Modi

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ""ನಾವು ಹಾಲಿನ ಜೊತೆ ಸಕ್ಕರೆ ತರ ಇದ್ದೇವೆ, ಭಿನ್ನಮತ ನಮ್ಮಲ್ಲಿ ಇಲ್ಲ. ಭಿನ್ನಮತ ಮಾಧ್ಯಮದಲ್ಲಿ ಇದೆಯಾ ಅಂತ ನನಗೆ ಸಂಶಯ. ಬಿಜೆಪಿಯಲ್ಲಿ ಮೂಲ, ವಲಸಿಗರು ಎಂಬುದಿಲ್ಲ ಬಂದವರೆಲ್ಲರೂ ನಮ್ಮ ಜೊತೆ ಒಂದಾಗಿದ್ದಾರೆ ಎಂದರು.

ಸೌದಿ ಜೈಲಲ್ಲಿ ಹರೀಶ್ ಬಂಗೇರ: ಶೋಭಾ ಕರಂದ್ಲಾಜೆ ಹೇಳಿದ್ದೇನು?ಸೌದಿ ಜೈಲಲ್ಲಿ ಹರೀಶ್ ಬಂಗೇರ: ಶೋಭಾ ಕರಂದ್ಲಾಜೆ ಹೇಳಿದ್ದೇನು?

ಸಿಎಂ ಇಬ್ರಾಹಿಂ ಯಾರ್ರೀ ಅವರು? ಅವರು ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ಮೊದಲು ಕಾಂಗ್ರೆಸ್ ಗೆ ಅಧ್ಯಕ್ಷರ ಆಯ್ಕೆ ಮಾಡಿ, ಪಕ್ಷ ಉಳಿಸುವ ಚಿಂತನೆ ಮಾಡಲಿ ಸೋನಿಯಾ ಗಾಂಧಿಯೇ ಹಂಗಾಮಿಯಾಗಿದ್ದಾರೆ. ವಿಪಕ್ಷ ನಾಯಕರ ಆಯ್ಕೆಯೇ ಅವರಿಂದ ಆಗ್ತಿಲ್ಲ, ರಾಷ್ಟ್ರೀಯ ಪಕ್ಷಕ್ಕೆ ಎಂತಹ ಗತಿ ಬಂದಿದೆ ಎಂದು ಉಡುಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

English summary
The whole world is looking towards India," state BJP president Nalin Kumar Kateel said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X