ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಮರ ಜನಸಂಖ್ಯೆ ಏರುತ್ತಿರುವುದು ಕಳವಳಕಾರಿ : ಹರಿಶಂಕರ್ ದಾಸ್

By Manjunatha
|
Google Oneindia Kannada News

ಉಡುಪಿ , ನವೆಂಬರ್ 25 : ಉಡುಪಿಯಲ್ಲಿ ನಡೆಯುತ್ತಿರುವ 'ಧರ್ಮ ಸಂಸದ್' ಎರಡನೇ ದಿನವಾದ ಇಂದು (ನವೆಂಬರ್ 25) ರಂದು ಗೋಷ್ಠಿಗಳಲ್ಲಿ ಸಾಮಾಜಿಕ ಸಾಮರಸ್ಯ ನಿರ್ಮಾಣಕ್ಕೆ ಮಾಡಬೇಕಾದ ಪ್ರಯತ್ನಗಳ ಕುರಿತು ಸ್ವಾಮೀಜಿಗಳು, ಸಾಧು ಸಂತರಿಂದ ಚರ್ಚೆ ನಡೆಯಿತು.

In Pics:ಉಡುಪಿಯಲ್ಲಿ ಜರುಗುತ್ತಿರುವ ಧರ್ಮ ಸಂಸದ್ ಸಮ್ಮೇಳನದ ಚಿತ್ರಸಂಪುಟ

ಗೋಷ್ಠಿಯೊಂದರಲ್ಲಿ ರಾಜಸ್ಥಾನದ ಹರಿಶಂಕರ್ ದಾಸ್ ಸ್ವಾಮೀಜಿ ಅವರು ಹಿಂದೂ ಮತ್ತು ಮುಸಲ್ಮಾನರ ಜನಸಂಖ್ಯೆಯ ಮಧ್ಯೆ ಅಂತರ ಹೆಚ್ಚಾಗುತ್ತಿರುವುದನ್ನು ಪ್ರಸ್ತಾಪಿಸಿ, ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿ ಹಿಂದೂ ಜನಸಂಖ್ಯೆ ಕ್ಷೀಣವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Muslims population raising more than Hindu population

ಇದಕ್ಕೆ ಪರಿಹಾರವನ್ನೂ ಸೂಚಿಸಿದ ಸ್ವಾಮೀಜಿ ಅವರು, ದೇಶದಲ್ಲಿ ಒಬ್ಬ ದಂಪತಿ ಗರಿಷ್ಠ ಎರಡು ಮಕ್ಕಳನ್ನು ಮಾತ್ರ ಪಡೆಯುವಂತೆ ಮಿತಿ ಹೇರಬೇಕು. ಈ ವಿಚಾರವಾಗಿ ಧರ್ಮ ಸಂಸದ್ ನಲ್ಲಿ ನಿರ್ಣಯ ಕೈಗೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಬೇಕು ಎಂದರು.

ಉಡುಪಿ : ಪ್ರಗತಿಪರ ನಿರ್ಣಯಗಳನ್ನು ಅಂಗೀಕರಿಸಿದ 'ಧರ್ಮ ಸಂಸದ್'ಉಡುಪಿ : ಪ್ರಗತಿಪರ ನಿರ್ಣಯಗಳನ್ನು ಅಂಗೀಕರಿಸಿದ 'ಧರ್ಮ ಸಂಸದ್'

ಮುಂದುವರೆದು ಮಾತನಾಡಿದ ಅವರು 'ದೇಶದ ಕೆಲವು ಜಿಲ್ಲೆಗಳಲ್ಲಿ ಸನಾತನ ಧರ್ಮದ ವಿರೋಧಿಗಳು ಬಹುಸಂಖ್ಯಾತರಾಗಿದ್ದಾರೆ. ಹೀಗೆಯೇ ಮುಂದುವರಿದರೆ ಹಿಂದೂಗಳಿಗೆ ಉಳಿಗಾಲವಿಲ್ಲ. ಹಿಂದೂಗಳು ಸ್ವಯಂ ಸಂತಾನ ನಿಯಂತ್ರಣ ನೀತಿ ಪಾಲಿಸುತ್ತಿದ್ದಾರೆ, ಅದನ್ನು ಉಳಿದ ಧರ್ಮೀಯರೂ ಪಾಲಿಸುವಂತೆ ಆಗಬೇಕು ಎಂದರು.

English summary
Rajasthan's Harishankar Das swamiji says that Muslims population raising more than Hindu population and its worrying. govt should pass order that any person of India can only have two childrens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X