ರೇವಣ್ಣ ಸುಮಲತಾ ಅವರ ಕ್ಷಮೆಯಾಚಿಸಲಿ: ಶೋಭಾ ಕರಂದ್ಲಾಜೆ
Recommended Video

ಉಡುಪಿ, ಮಾರ್ಚ್ 08: ರಾಮಮಂದಿರ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಅಯೋಧ್ಯೆಯ ರಾಮಮಂದಿರ ವಿಚಾರ ಚುನಾವಣೆಗೆ ಬಳಸಲ್ಲ ಎಂದು ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಯೋಧ್ಯೆ ಶ್ರದ್ಧಾಭಕ್ತಿ ಕೇಂದ್ರ . ಸುಪ್ರೀಂ ಆದೇಶಕ್ಕೆ ತಲೆಬಾಗುತ್ತೇವೆ. 8 ವಾರದ ಗಡುವಿನಲ್ಲಿ ಏನಾಗುತ್ತೋ ಗೊತ್ತಿಲ್ಲ.ಮಾತುಕತೆ ಪ್ರಯತ್ನದಿಂದ ಸಮಸ್ಯೆ ಬಗೆಹರಿದರೆ ಸಂತಸ ಎಂದು ಹೇಳಿದ ಅವರು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಹರಿದರೆ ಉತ್ತಮ. ರಾಮ ಹುಟ್ಟಿದ ಜಾಗವನ್ನು ಮುಸಲ್ಮಾನರು ಬಿಟ್ಟುಕೊಟ್ಟರೆ ಸಂತೋಷ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹಾಗೂ ಸುಮಲತಾ ವಿರುದ್ಧ ಸಚಿವ ರೇವಣ್ಣ ಕೊಟ್ಟಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸುಮಲತಾ ಮೂರು ದಶಕದಿಂದ ಮಂಡ್ಯದ ಮಗಳು. ಸುಮಲತಾ ಅವರಿಗೆ ಜನಸೇವೆ ಮಾಡುವ ಮನಸ್ಸಾಗಿದೆ. ರೇವಣ್ಣ ಜವಾಬ್ದಾರಿಯುತ ರಾಜಕಾರಣಿ. ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಎಂದು ಕಿಡಿಕಾರಿದರು.

ಅಂಬರೀಶ್ ಸಾಯಲು ಸುಮಲತಾ ಕಾರಣವಲ್ಲ. ಕಾವೇರಿ ವಿಚಾರಕ್ಕೆ ಅಂಬರೀಶ್ ರಾಜೀನಾಮೆ ಕೊಟ್ಟಿದ್ದರು.ಗಂಡ ಸತ್ತವರು ರಾಜಕೀಯಕ್ಕೆ ಬರಲು ಇಷ್ಟೇ ದಿನ ಆಗಬೇಕಾಗಿಲ್ಲ. ಸುಮಲತಾ ಅವರು ರಾಜಕಾರಣಿಯಾಗಿ ದುಃಖ ಮರೆಯುವ ಪ್ರಯತ್ನದಲ್ಲಿದ್ದಾರೆ.
ಸಮಾಜಸೇವೆ ಗೆ ಬರುವ ಹೆಣ್ಮಕ್ಕಗಳಿಗೆ ಈ ರೀತಿಯಾಗಿ ಮಾತನಾಡಿದ್ದು ಸರಿಯಲ್ಲ.ರೇವಣ್ಣ ಸುಮಲತಾ ಅವರ ಕ್ಷಮೆಯಾಚಿಸಲಿ.ಗಂಡ ಕಳೆದುಕೊಂಡ ನೋವಲ್ಲಿರುವವರಿಗೆ ಮತ್ತೆ ನೋವು ಕೊಡಬೇಡಿ. ಮಹಿಳಾ ದಿನಾಚರಣೆ ದಿನ ಹೀಗೆ ಮಾತನಾಡಬಾರದಿತ್ತು ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದರು .
ನಮ್ಮ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸುಮಲತಾ ಅವರು ಪಕ್ಷೇತರವಾಗಿ ನಿಂತರೆ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆ. ಸದ್ಯ ಸುಮಲತಾ ಕಾಂಗ್ರೆಸ್ ಮನೆಯ ರಾಜಕಾರಣಿ. ಬಿಜೆಪಿಗೆ ಬಂದ್ರೆ ಸುಮಲತಾಗೆ ಸ್ವಾಗತ ಎಂದು ಶೋಭಾ ಕರಂದ್ಲಾಜೆ ಹೇಳಿದರು.












Click it and Unblock the Notifications