ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಎಸೆಯಿರಿ, ಬಹುಮಾನ ಗೆಲ್ಲಿರಿ: ಕರಾವಳಿಯಲ್ಲಿ ಹೀಗೊಂದು ಅಪರೂಪದ ಸ್ಪರ್ಧೆ

|
Google Oneindia Kannada News

ಉಡುಪಿ, ಸೆಪ್ಟೆಂಬರ್.30: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಈ ಮೊಬೈಲ್ ಫೋನ್ ಗಳಿಲ್ಲದಿದ್ದರೆ ದಿನ ನಿತ್ಯದ ಕೆಲಸಗಳೇ ಸಾಗೋದಿಲ್ಲ!

ಇತ್ತೀಚಿನ ದಿನಗಳಲ್ಲಂತೂ ಸಾವಿರಾರು ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಖರೀದಿಸಿದರೂ ಅದರಲ್ಲಿ ಒಂದಲ್ಲಾ ಒಂದು ನ್ಯೂನತೆಗಳು ಇದ್ದೇ ಇರುತ್ತವೆ. ಅತ್ಯಂತ ತುರ್ತು ಸಂದರ್ಭದಲ್ಲೇ ಕೈ ಕೊಡುವ ಈ ಮೊಬೈಲ್ ಗಳನ್ನು ತೆಗೆದು ಎಸೆದು ಬಿಡೋಣ ಎಂಬಂತಹ ಸಿಟ್ಟು ಒಂದು ಸಾರಿಯಾದರೂ ಬಂದಿರುತ್ತದೆ.

ಭೋಜನ ಪ್ರಿಯರಿಗೆ ಬಾಯಿ ಚಪ್ಪರಿಸುವ ಸುದ್ದಿ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಊಟದ ಸ್ಪರ್ಧೆಭೋಜನ ಪ್ರಿಯರಿಗೆ ಬಾಯಿ ಚಪ್ಪರಿಸುವ ಸುದ್ದಿ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಊಟದ ಸ್ಪರ್ಧೆ

ಅಂದಹಾಗೆ ಮೊಬೈಲ್ ಎಸೆಯುವುದೇ ಒಂದು ಸ್ಪರ್ಧೆಯಾದರೆ ಹೇಗಿರುತ್ತದೆ? ಹೌದು, ಇಂತಹುದೇ ಅಪರೂಪದ ಮೊಬೈಲ್ ಎಸೆಯುವ ಸ್ಪರ್ಧೆ ಆಯೋಜಿಸಿರುವುದು ಬೆಳಕಿಗೆ ಬಂದಿದೆ.
ವಿಶ್ವದೆಲ್ಲೆಡೆ ಮನರಂಜನೆಗಾಗಿ ಚಿತ್ರ ವಿಚಿತ್ರ ಸ್ಪರ್ಧೆಗಳು ನಡೆದ ಹಲವಾರು ಸಂಗತಿಗಳನ್ನು ಓದಿರುತ್ತೇವೆ.

ದೈಹಿಕ ಸ್ಪರ್ಧೆಗಳು ಒಂದೆಡೆಯಾದರೆ, ತಿನ್ನುವ ಮೇಲಾಟಗಳು ವಿಶ್ವದೆಲ್ಲೆಡೆ ಏರ್ಪಡುತ್ತಿರುತ್ತವೆ. ಕೆಲವೆಡೆ ಪೈಪೋಟಿಯಲ್ಲಿ ನೂಡಲ್ಸ್, ಚಾಕೊಲೆಟ್, ಫಿಜ್ಜಾ, ಪಾಸ್ತಾ ಮಾತ್ರವಲ್ಲದೆ ಮೆಣಸಿನ ಕಾಯಿ, ಮೆಣಸು, ಕಲ್ಲಂಗಡಿ ಇತ್ಯಾದಿ ಭಕ್ಷಿಸುವುದಿದೆ. ಭಾರತವೇನೂ ಇದಕ್ಕೆ ಹೊರತಲ್ಲ.

ನಾಟಿ ಕೋಳಿ ಸಾಂಬಾರ್ ನಲ್ಲಿ ಮುದ್ದೆ ನುಂಗಿ ಗೆದ್ದ ಮೀಸೆ ಈರೇಗೌಡನಾಟಿ ಕೋಳಿ ಸಾಂಬಾರ್ ನಲ್ಲಿ ಮುದ್ದೆ ನುಂಗಿ ಗೆದ್ದ ಮೀಸೆ ಈರೇಗೌಡ

ಕರ್ನಾಟಕದಲ್ಲಿ ರಾಗಿ ಮುದ್ದೆ, ಲಡ್ಡು, ದೋಸೆ, ಜೋಳದ ರೊಟ್ಟಿ, ಹೋಳಿಗೆ ತಿನ್ನುವ ಸ್ಪರ್ಧೆಗಳು ಅಲ್ಲಲ್ಲಿ ವ್ಯವಸ್ಥಿತವಾಗಿ ನಡೆಯುತ್ತವೆ. ಆದರೆ ಈವರೆಗೆ ನೀವು ಮೊಬೈಲ್ ಎಸೆಯುವ ಸ್ಪರ್ಧೆಯ ಬಗ್ಗೆ ಕೇಳಿದ್ದಿರಾ? ಕೇಳದಿದ್ದರೆ ಈ ಲೇಖನ ಓದಿ.. ಯಾಕೆಂದರೆ ಮೊಬೈಲ್ ಎಸೆದವರಿಗೂ ಬಹುಮಾನ ಕೊಡುವ ಅಪರೂಪದ ಸ್ಪರ್ಧೆ ಇದು.

 ಗೋಳಿಯಂಗಡಿಯಲ್ಲಿ ನಡೆಯಲಿದೆ ಸ್ಪರ್ಧೆ

ಗೋಳಿಯಂಗಡಿಯಲ್ಲಿ ನಡೆಯಲಿದೆ ಸ್ಪರ್ಧೆ

ಅಕ್ಟೋಬರ್ 7 ರಂದು ಭಾನುವಾರ ಹೆಬ್ರಿ-ಪಾಲಾಡಿ- ಕುಂದಾಪುರ ನಡುವೆ ಇರುವ ಗೋಳಿಯಂಗಡಿ ಎಂಬಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಈ ಮೊಬೈಲ್ ಎಸೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.

ಇಲ್ಲಿಯ ಪ್ರಗತಿ ಎಂಟರ್ ಪ್ರೈಸಸ್ ಮತ್ತು ವಂಡಾರು ಮಾವಿನಕಟ್ಟೆ ಸಹಯೋಗದಲ್ಲಿ ಈ ಅಪರೂಪದ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯ ರೂವಾರಿ ರೂಪೇಶ್ ಕುಮಾರ್ .

 ಪ್ರಥಮ ಬಹುಮಾನ 4ಜಿ ಸ್ಮಾರ್ಟ್ ಫೋನ್

ಪ್ರಥಮ ಬಹುಮಾನ 4ಜಿ ಸ್ಮಾರ್ಟ್ ಫೋನ್

ಈ ಸ್ಪರ್ಧೆಯ ನಿಯಮದ ಪ್ರಕಾರ ನಿಮ್ಮಲ್ಲಿರುವ ಯಾವುದೇ ಹಾಳಾದ ಸ್ಕ್ರಾಪ್ ಹ್ಯಾಂಡ್ ಸೆಟ್ ಗಳನ್ನು ತಂದು ಎಸೆಯಬಹುದು. ಬಹುದೂರದವರೆಗೆ ಎಸೆಯುವ ಸ್ಪರ್ಧಾಳುವಿಗೆ ಬಹುಮಾನ ನೀಡಲಾಗುತ್ತದೆ.

ಪ್ರಥಮ ಬಹುಮಾನವಾಗಿ ಬ್ರಾಂಡೆಡ್ 4 ಜಿ ಸ್ಮಾರ್ಟ್ ಫೋನ್ ಹಾಗೂ ದ್ವಿತೀಯ ಬಹುಮಾನವಾಗಿ ಆಂಡ್ರಾಯಿಡ್ ಮೊಬೈಲ್ ನೀಡಲು ಸ್ಪರ್ಧೆಯ ಆಯೋಜಕರು ನಿರ್ಧರಿಸಿದ್ದಾರೆ.

ಮಂಡ್ಯದಲ್ಲಿ ಮುದ್ದೆ ಉಣ್ಣೊ ಸ್ಪರ್ಧೆ, ಮುದ್ದೆ ತಿನ್ನಿ ಸಿನಿಮಾ ಸ್ಟಾರ್ ಆಗಿ!ಮಂಡ್ಯದಲ್ಲಿ ಮುದ್ದೆ ಉಣ್ಣೊ ಸ್ಪರ್ಧೆ, ಮುದ್ದೆ ತಿನ್ನಿ ಸಿನಿಮಾ ಸ್ಟಾರ್ ಆಗಿ!

 ಸ್ಪರ್ಧೆಯ ಹಿಂದಿನ ಉದ್ದೇಶ

ಸ್ಪರ್ಧೆಯ ಹಿಂದಿನ ಉದ್ದೇಶ

ಈ ಸ್ಪರ್ಧೆಯ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲು ಒನ್ ಇಂಡಿಯಾ, ಆಯೋಜಕ ರೂಪೇಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ... 'ಈ ಸ್ಪರ್ಧೆ ಮನರಂಜನೆಗೊಸ್ಕರ ಏರ್ಪಡಿಸಲಾಗಿದೆ. ಅದರ ಹಿಂದೆ ಒಂದು ಉದ್ದೇಶವೂ ಇದೆ.

ನಾನು ಸದ್ಯದಲ್ಲೇ ದೊಡ್ಡ ಮಟ್ಟದಲ್ಲಿ ಮೊಬೈಲ್ ಸರ್ವಿಸ್ ಆಂಡ್ ರಿಪೇರ್ ಸೆಂಟರ್ ಆರಂಭಿಸಲು ನಿರ್ಧರಿಸಿದ್ದೇನೆ. ಆಗ ಅಲ್ಲಿಗೆ ಹಲವಾರು ಕಂಪನಿಯ ಹಳೆಯ, ಅಪರೂಪದ ಮೊಬೈಲ್ ಗಳು ರಿಪೇರಿಗೆ ಬರುತ್ತವೆ.

ಅದರ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಆದ ಕಾರಣ ಮೊಬೈಲ್ ಎಸೆಯುವ ಸ್ಪರ್ಧೆ ಏರ್ಪಡಿಸಿ ಅಲ್ಲಿಗೆ ಬರುವ ಹಳೆಯ, ಸ್ಕ್ರಾಪ್ ಮೊಬೈಲ್ ಗಳ ಬಿಡಿಭಾಗಗಳನ್ನು ಬಳಸಿಕೊಳ್ಳ ಬಹುದು.

 300 ಮಂದಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ

300 ಮಂದಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ

ಸ್ಪರ್ಧೆಯ ಷರತ್ತಿನ ಪ್ರಕಾರ ಸ್ಪರ್ಧಾಳುಗಳು ಎಸೆದ ಮೊಬೈಲ್ ಹಿಂದಿರುಗಿಸುವುದಿಲ್ಲ. ಮನೆಗಳಲ್ಲಿ ಮೂಲೆ ಸೇರಿ ಧೂಳು ಹಿಡಿಯುತ್ತಿದ್ದ ಈ ಮೊಬೈಲ್ ಗಳನ್ನು ಇಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿದೆ.

ಈ ಹಿಂದೆ ಇಲ್ಲಿಯೇ ಸಮೀಪದ ಬ್ರಹ್ಮಾವರದಲ್ಲಿ 5 ವರ್ಷಗಳ ಹಿಂದೆ ಇಂತಹುದೇ ಮೊಬೈಲ್ ಎಸೆಯುವ ಸ್ಪರ್ಧೆ ಏರ್ಪಡಿಲಾಗಿತ್ತು. ಅದರಲ್ಲಿ 130 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು . ಈಗ ಗೋಳಿಯಂಗಡಿಯಲ್ಲಿ ಏರ್ಪಡಿಸಲಾಗಿರುವ ಈ ಸ್ಪರ್ಧೆಯಲ್ಲಿ 300 ಮಂದಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ರೂಪೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ದೂರದ ಫಿನ್ ಲ್ಯಾಂಡ್ ನಲ್ಲಿ ಪ್ರತಿವರ್ಷ ಮೊಬೈಲ್ ಎಸೆಯುವ ಸ್ಪರ್ಧೆ ನಡೆಯುತ್ತದೆ. 2012 ರಲ್ಲಿ ಮೊಬೈಲ್ ಎಸೆಯುವ ವಿಶ್ವಚಾಂಪಿಯನ್ ಶಿಪ್ ಕೂಡ ಫಿನ್ ಲ್ಯಾಂಡ್ ನಲ್ಲಿ ನಡೆದಿತ್ತು. ಆದರೆ ಅಲ್ಲಿ ಇದನ್ನು ಮನರಂಜನೆಯ ಭಾಗವಾಗಿ ಆಯೋಜಿಸಲಾಗುತ್ತದೆ. ಫಿನ್ ಲ್ಯಾಂಡ್ ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ 101 ಮೀಟರ್ ಮೊಬೈಲ್ ಎಸೆದ ದಾಖಲೆ ಇದೆ.

English summary
Mobile phone throwing competition organised in Goliyangadi near Kundapura. Competition winners will reward by the organiser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X