ಶಾಸಕ ಆನಂದ್ ಸಿಂಗ್ ಚೆನ್ನಾಗಿದ್ದಾರೆ:ಸಚಿವೆ ಜಯಮಾಲಾ ಸ್ಪಷ್ಟನೆ
ಉಡುಪಿ, ಜನವರಿ 24: ಶಾಸಕ ಆನಂದ್ ಸಿಂಗ್ ಅವರನ್ನು ನಾನು ನೋಡಲು ಹೋಗಿಲ್ಲ. ಆದರೆ ಅವರು ಚೆನ್ನಾಗಿದ್ದಾರೆ ಎಂದು ಸಚಿವೆ ಜಯಮಾಲಾ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆಯಾಗುತ್ತಿದ್ದು, ಇದು ಶಾಸಕರುಗಳ ವೈಯಕ್ತಿಕ ಜಗಳವಾಗಿದೆ. ಬಳ್ಳಾರಿ ಶಾಸಕರು ಹೊಡೆದಾಡಿಕೊಂಡಿದ್ದಾರೆ. ಆದರೆ ಯಾರೇ ಹೊಡೆದಾಡಿದರೂ ನಾವು ಸಪೋರ್ಟ್ ಮಾಡಲ್ಲ. ಶಾಸಕರು ಹೊಡೆದುಕೊಂಡರೆ ಪಾರ್ಟಿ ಏನು ಮಾಡೋಕಾಗುತ್ತೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಾರ್ಟಿ ಇಮೇಜ್ ಗೆ ಏನೂ ಧಕ್ಕೆಯಾಗಲ್ಲ. ಪಕ್ಷ ಏನ್ಮಾಡಿದೆ, ನಾವೇನು ಹೊಡ್ಕೊಳ್ಳಿ ಅಂದ್ವಾ? ಯಾಕೆ ಬೇರೆ ಪಕ್ಷದವ್ರೇನೂ ಹೊಡ್ದಾಕೊಳ್ಳಲ್ವಾ? ಅವರಿಗ್ಯಾರಿಗೂ ಬಾಯಿ ಇಲ್ವಾ, ಕೈ ಇಲ್ವಾ? ಯಾಕೆ ಬಿಜೆಪಿಯೋರೇ ಇದನ್ನು ಮಾಡಿಸಿರಬಾರದು. ನಮ್ಮ ಕಣ್ಣಿಗೆ ಮೇಲೆ ಕಾಣೋದು ಮಾತ್ರ ಸತ್ಯ ಅನ್ನೋಕಾಗಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications