ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಣಿಪಾಲ, ಜೂನ್ 17 : ಭಾರತೀಯ ರೈಲ್ವೆಯ ಶೌಚಾಲಯ ವಿನ್ಯಾಸ ಮಾಡಿ, ಮಣಿಪಾಲ ವಿವಿಯ ಆರ್ಕಿಟೆಕ್ಟ್ ವಿದ್ಯಾರ್ಥಿ ವಿನೋದ್ ಅಂತೋನಿ ಥಾಮಸ್ ಅವರು ದ್ವಿತೀಯ ಬಹುಮಾನ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಮಣಿಪಾಲದ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 'ಕ್ಲೀನ್ ಇಂಡಿಯಾ' ಅಭಿಯಾನದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ, ರೈಲುಗಳಲ್ಲಿ ನೀರು ರಹಿತ ಹಾಗೂ ವಾಸನಾರಹಿತ ಶೌಚಾಲಯ ಅಳವಡಿಕೆಗಾಗಿ ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. [ಮಂಗಳೂರು-ಮುಂಬೈ ವಿಶೇಷ ಎಸಿ ರೈಲು]

vinod anthony thomas

ಲಕ್ನೋದ ಸಂಶೋಧನೆ, ವಿನ್ಯಾಸ ಹಾಗೂ ಗುಣಮಟ್ಟ ಸಂಘಟನೆ (ಆರ್‌ಡಿಎಸ್‌ಓ) ವಿನ್ಯಾಸಗಳನ್ನು ಪರಿಶೀಲನೆ ನಡೆಸಿ ಬಹುಮಾನ ಘೋಷಣೆ ಮಾಡಿದೆ. ಸ್ಪರ್ಧೆಗೆ ಬಂದ ವಿನ್ಯಾಸಗಳಲ್ಲಿ 10 ವಿನ್ಯಾಸಗಳನ್ನು ತಜ್ಞರನ್ನೊಳಗೊಂಡ ಸಮಿತಿ ಆಯ್ಕೆ ಮಾಡಿ ಅಂತಿಮ ಸುತ್ತಿಗೆ ಕಳುಹಿಸಿತ್ತು. [ಕರ್ನಾಟಕಕ್ಕೆ ಎರಡು ಸೆಮಿ ಹೈಸ್ಪೀಡ್ ರೈಲು: ಸುರೇಶ್ ಪ್ರಭು]

ಇವುಗಳಲ್ಲಿ ಮಣಿಪಾಲ ವಿವಿಯ ಆರ್ಕಿಟೆಕ್ಟ್‌ ವಿಭಾಗದ 10ನೆ ಸೆಮಿಸ್ಟರ್ ವಿದ್ಯಾರ್ಥಿ ವಿನೋದ್ ಅಂತೋನಿ ಥಾಮಸ್ ಅವರ ವಿನ್ಯಾಸವೂ ಆಯ್ಕೆಯಾಗಿತ್ತು. ಥಾಮಸ್ ಅವರ ವಿನ್ಯಾಸಕ್ಕೆ ರೂ. 75 ಸಾವಿರ ರೂ.ಗಳ 2ನೇ ಬಹುಮಾನ ನೀಡಲಾಗಿದೆ. [ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]

ವಿನೋದ್ ಥಾಮಸ್ ವಿನ್ಯಾಸಗೊಳಿಸಿದ ಶೌಚಾಲಯದಲ್ಲಿ ಈಗ ರೈಲುಗಳಲ್ಲಿರುವ ಟಾಯ್ಲೆಟ್‌ಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದಾರೆ. ಇದರಲ್ಲಿ ಮಲ-ಮೂತ್ರ, ತ್ಯಾಜ್ಯಗಳ ನಿರ್ವಹಣೆಗೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vinod Anthony Thomas student of Manipal University has bagged second prize for designing water-less toilets for Indian Railways. Vinod participated in an all-India competition organized by Research Designs and Standards Organization, Lucknow.
Please Wait while comments are loading...