ಕಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿ
ಉಡುಪಿ: ಮತ ಎಣಿಕೆ ಆರಂಭವಾಗುತ್ತಿದ್ದಂತೆ ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ಹೆಚ್ಚಾಗಿದೆ. ಕೇಸರಿ ಶಾಲು ಹೊತ್ತ ವ್ಯಕ್ತಿಯೊಬ್ಬ ಕಾಲಿಗೆ ಮೊಬೈಲ್ ಫೋನ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿಕೊಟ್ಟು ಸಿಕ್ಕಿಬಿದ್ದಿದ್ದಾನೆ.
ಬೈಂದೂರು ಕ್ಷೇತ್ರದಲ್ಲಿ ಘಟನೆ ನಡೆದಿದ್ದು, ಪೊಲೀಸರು ತಡೆದು ಪರಿಶೀಲನೆ ನಡೆಸಿದಾಗ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಈತ ಹೆಗಲ ಮೇಲೆ ಕೇಸರಿ ಶಾಲು, ಲುಂಗಿಯೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಟ್ಟಿದ್ದ. ಯಾರಿಗೂ ಕಾಣದಂತೆ ಬಲಗಾಲಿಗೆ ಮೊಬೈಲ್ ಫೋನ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.

ಆದರೆ ಸ್ಥಳದಲ್ಲಿ ಭದ್ರತೆ ಬಿಗಿಯಿದ್ದ ಕಾರಣ ಪೊಲೀಸರು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಕಾಲಿಗೆ ಮೊಬೈಲ್ ಫೋನ್ ಕಟ್ಟಿಕೊಂಡಿರುವುದು ತಿಳಿದು ಆತನನ್ನು ವಾಪಸ್ ಕಳುಹಿಸಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಬಿಗಿ ಭದ್ರತೆಯೊಂದಿಗೆ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ.












Click it and Unblock the Notifications