ಉಡುಪಿಯಲ್ಲಿ ಶೆಲ್ ಫಿಶ್ ಹಿಡಿಯಲು ಮುಗಿಬಿದ್ದ ಜನ
ಉಡುಪಿ, ಏಪ್ರಿಲ್ 10: ಉಡುಪಿಯ ಉದ್ಯಾವರದ ಪಿತ್ರೋಡಿ ಬಳಿ ಇರುವ ಪಾಪನಾಶಿನಿ ನದಿಯಲ್ಲಿ ಶೆಲ್ ಫಿಶ್ ಹಿಡಿಯಲು ಜನರು ಮುಗಿಬಿದ್ದಿದ್ದಾರೆ.
ಪಾಪನಶಿನಿ ನದಿಯಲ್ಲಿ ಮುಳುಗಿ ಮೀನು ತೆಗೆಯಲು ಜನರು ಧಾವಿಸಿದ್ದರು. ಸ್ಥಳೀಯವಾಗಿ ಇದನ್ನು ಮರುವಾಯಿ ಮೀನು ಎಂದು ಕರೆಯುತ್ತಾರೆ. ಕೊರೊನಾ ವೈರಸ್ ಇರುವ ಹಿನ್ನಲೆಯಲ್ಲಿ ಜನರು ಚಿಕನ್ ತಿನ್ನಲು ಭಯ ಪಡುತ್ತಿದ್ದಾರೆ. ಹಾಗಾಗಿ ಮೀನಿಗೆ ಬಹಳ ಬೇಡಿಕೆ ಇದೆ.
ಪ್ರತಿದಿನ ಕತ್ತಲಾವರಿಸುತ್ತಿದ್ದಂತೆ ಪಾಪನಾಶಿನಿ ನದಿಯತ್ತ ಮೀನು ಪ್ರಿಯರು ಬರುತ್ತಾರೆ. ನದಿಯಲ್ಲಿ ನೀರು ಇಳಿಮುಖವಾಗಿದ್ದು, ಹೀಗಾಗಿ ಜನರು ಮೀನು ಹಿಡಿಯಲು ಬರುತ್ತಿದ್ದಾರೆ.

ಮರುವಾಯಿ ಮೀನು ತೆಗೆಯಲು ಉಡುಪಿ ಜಿಲ್ಲಾಡಳಿತ ಅವಕಾಶ ನೀಡಿದೆ ಆದರೆ ಗುಂಪು ಸೇರುವಂತಿಲ್ಲ ಎಂದು ಖಡಕ್ ಆದೇಶ ನೀಡಿದೆ. ಗುಂಪು ಗುಂಪಾಗಿ ಜನ ಸೇರಿದ್ದರಿಂದ ಸ್ಥಳಕ್ಕೆ ಪೊಲೀಸ್ ದಾಳಿ ಮಾಡಿದ್ದಾರೆ.

ಶೆಲ್ ಮೀನು ಹಿಡಿಯಲು ಬಂದವರ ಬೈಕ್ ಗಳನ್ನು ಸೀಜ್ ಮಾಡಿದ್ದಾರೆ. ಹನ್ನೊಂದು ಬೈಕ್ ಗಳನ್ನು ಕಾಪು ಪೊಲೀಸರು ಸೀಜ್ ಮಾಡಿದ್ದು, ಸ್ಥಳದಲ್ಲಿ ಸೇರಿದ್ದ ಜನರು ಹೆದರಿ ಪರಾರಿಯಾಗಿದ್ದಾರೆ. ಗುಂಪಾಗಿ ಮರುವಾಯಿ ಮೀನು ಹಿಡಿಯಲು ಬರಬಾರದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications