ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Live: ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸಂಭ್ರಮದ ಚಾಲನೆ

|
Google Oneindia Kannada News

ಉಡುಪಿ, ಜನವರಿ 18: ಅಷ್ಟಮಠಗಳಲ್ಲೊಂದಾದ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಎರಡನೇ ಪರ್ಯಾಯ ಪೀಠಾರೋಹಣ ಉಡುಪಿಯಲ್ಲಿ ಇಂದು(ಜ.18) ಬೆಳಗ್ಗಿನ ಜಾವ 2 ಗಂಟೆಗೆ ಆರಂಭವಾಗಿದೆ.

ಈಗಾಗಲೇ ಉಡುಪಿಯ ಕಾಪು ಬಳಿಯ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮುಗಿಸಿ, ಪಲಿಮಾರು ಶ್ರೀ ಗಳು ಮೆರವಣಿಗೆಯ ಮೂಲಕ ಕೃಷ್ಣ ಮಠ ಪ್ರವೇಶಿಸಿದ್ದಾರೆ.

ಅಷ್ಟಮಠಗಳಿಗೆ ಸರದಿ ಪ್ರಕಾರ ಹಂಚಿಹೋಗುವ ಪರ್ಯಾಯ 16 ವರ್ಷಗಳಲ್ಲಿ ಒಂದು ಚಕ್ರ ಪೂರೈಸುತ್ತದೆ. ಇದೀಗ 32 ನೇ ಚಕ್ರಕ್ಕೆ ಕಾಲಿಟ್ಟಿರುವ 2018 ರ ಪರ್ಯಾಯ 249 ನೇ ಪರ್ಯಾಯವಾಗಿದೆ. ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಇದು ಎರಡನೆಯ ಪರ್ಯಾಯ.

ಉಡುಪಿ ಪರ್ಯಾಯ: ಇತಿಹಾಸದಲ್ಲಿ 2ನೇ ಬಾರಿ ಮೆರವಣಿಗೆ ಮಾರ್ಗ ಬದಲುಉಡುಪಿ ಪರ್ಯಾಯ: ಇತಿಹಾಸದಲ್ಲಿ 2ನೇ ಬಾರಿ ಮೆರವಣಿಗೆ ಮಾರ್ಗ ಬದಲು

* ಅಷ್ಟಮಠಾಧೀಶರ ಸಮ್ಮುಖದಲ್ಲಿ ವಿವಿಧ ಪರ್ಯಾಯ ವಿಧಿವಿಧಾನಗಳಿಗೆ ಚಾಲನೆ
* ಬೆಳಿಗ್ಗೆ 6.50ಕ್ಕೆ ಸರ್ವಜ್ಞ ಪೀಠವೇರಿದ ಪಲಿಮಾರು ಶ್ರೀ
* ಪರ್ಯಾಯದಲ್ಲಿ ಅಷ್ಟಮಠದ ಯತಿಗಳೂ ಭಾಗಿ
* ಅಕ್ಷಯ ಪಾತ್ರೆ, ಸಟ್ಟುಗ, ಬೀಗದ ಕೈಗಳನ್ನು ಪಲಿಮಾರು ಶ್ರೀಗಳಿಗೆ ಹಸ್ತಾಂತರಿಸಿದ ಪೇಜಾವರ ಶ್ರೀಗಳು
* ದಾಖಲೆಯ ಐದನೇ ಪರ್ಯಾಯ ಮುಗಿಸಿದ ಪೇಜಾವರ ಶ್ರೀಗಳು
* ಅನಂತೇಶ್ವರ, ಚಂದ್ರ ಮೌಳೇಶ್ವರ ದೇವಾಲಯಗಳಲ್ಲಿ ಪೂಜೆ ಪಲಿಮಾರು ಶ್ರೀಗಳಿಂದ ಪೂಜೆ
* ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳಿಂ ಪಲಿಮಾರು ಶ್ರೀಗಳಿಗೆ ಸ್ವಾಗತ.
* ಜೋಡುಕಟ್ಟೆ ಮೆರವಣಿಗೆಯಲ್ಲಿ ಕೃಷ್ಣ ಮಠಕ್ಕೆ ಆಗಮಿಸಿದ ಪಲಿಮಾರು ಶ್ರೀಗಳು

ಉಡುಪಿ ಪರ್ಯಾಯ: 2ನೇ ಬಾರಿ ಸರ್ವಜ್ಞ ಪೀಠವನ್ನೇರಿದ ಪಲಿಮಾರು ಶ್ರೀಗಳುಉಡುಪಿ ಪರ್ಯಾಯ: 2ನೇ ಬಾರಿ ಸರ್ವಜ್ಞ ಪೀಠವನ್ನೇರಿದ ಪಲಿಮಾರು ಶ್ರೀಗಳು

LIVE: Udupi Paryaya festival begins

ಪರ್ಯಾಯ ಉತ್ಸವದಲ್ಲಿ ಇಂದಿನ(ಜ.18) ಕಾರ್ಯಕ್ರಮಗಳ ವಿವರ ಇಂತಿದೆ.
02.00 - ಕಾಪು ದಂಡತೀರ್ಥದಲ್ಲಿ ಪವಿತ್ರ ಸ್ನಾನ
03.00 - ಜೋಡುಕಟ್ಟೆ ವೃತ್ತದಲ್ಲಿರುವ ಮಂಟಪದಲ್ಲಿ ಪಲಿಮಾರು ಮಠದ ಪಟ್ಟದ ದೇವರಿಗೆ ಪೂಜೆ, ಪರ್ಯಾಯ ಮೆರವಣಿಗೆ ಆರಂಭ

In Pics: ಉಡುಪಿಯಲ್ಲಿ ಪಲಿಮಾರು ಶ್ರೀಗಳ ಪರ್ಯಾಯೋತ್ಸವದ ಸಂಭ್ರಮ

05.15 - ಅಖಂಡ ಶ್ರೀಹರಿ ನಾಮ ಸಂಕೀರ್ತನೆ
05.35 - ಪರ್ಯಾಯ ಶ್ರೀ ರಥಬೀದಿ ಪ್ರವೇಶ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ
06.12 - ಪೇಜಾವರ ಶ್ರೀಗಳಿಂದ ಸ್ವಾಗತ, ಶ್ರೀಕೃಷ್ಣಮಠ ಪ್ರವೇಶ
06.35 - ಅಕ್ಷಯಪಾತ್ರೆ, ಸಟ್ಟುಗ ಸ್ವೀಕಾರ, ಸರ್ವಜ್ಞ ಪೀಠಾರೋಹಣ
06.50 - ಅರಳುಗದ್ದುಗೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನ
07.00 - ರಾಜಾಂಗಣದ ಆನಂದತೀರ್ಥ ಮಂಟಪದಲ್ಲಿ ಪರ್ಯಾಯ ದರ್ಬಾರ್
11.10 - ಮಹಾಪೂಜೆ 12.15 - ಮಹಾ ಅನ್ನ ಸಂತರ್ಪಣೆ
19.40 - ರಥೋತ್ಸವ

English summary
The grand biennial Paryaya festival in temple town Udupi has started on January 18 early morning. Vidyadheesha Tirtha Swamiji of Palimar Mutt is ascending the Paryaya Peetha also called the Sarvajna Peetha at the Sri Krishna Mutt for the 2nd time. Palimar Seer is taking charge from Vishwesha Tirtha Swamiji of Pejawar Mutt, who has completed his record 5th Paryaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X