ಮಣಿಪಾಲದ ಗ್ರಾಮದಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ
ಉಡುಪಿ, ಸೆಪ್ಟೆಂಬರ್ 05: ಮಣಿಪಾಲದ ಸರಳೆಬೆಟ್ಟು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದು ಮಣಿಪಾಲದಲ್ಲಿ ಸೆರೆಯಾಗಿದೆ. ಮಣಿಪಾಲದ ಸರಳೆಬೆಟ್ಟು ವಿಜಯನಗರ ಕೋಡಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಇಂದು ನಸುಕಿನ ವೇಳೆಗೆ ಚಿರತೆ ಬಿದ್ದಿದೆ.
Recommended Video
ದಾರಿ ತೋರಿದ ಗುರುವಿಗೆ ನಮನ | Happy teachers day | Oneindia Kannada
ಕಳೆದ ಕೆಲವು ದಿನಗಳಿಂದ ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆಯು ಜನರಲ್ಲಿ ಭೀತಿ ಹುಟ್ಟಿಸಿತ್ತು. ಅಲ್ಲದೇ ಸುತ್ತಮುತ್ತಲಿನ ಮನೆಯಲ್ಲಿದ್ದ ಕರು, ನಾಯಿ, ಕೋಳಿಗಳನ್ನು ಹಿಡಿದು ತಿನ್ನುತ್ತಿತ್ತು. ಚಿರತೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು.

ಕೊನೆಗೆ ಈ ಭಾಗದ ಜನರು ಅರಣ್ಯ ಇಲಾಖೆಯ ಮೊರೆ ಹೋಗಿದ್ದರು. ಅಧಿಕಾರಿಗಳು ಚಿರತೆಯನ್ನು ಕೆಡವಲು ಬೋನು ಇರಿಸಿದ್ದರು. ಇಂದು ಬೆಳಿಗ್ಗೆ ಭಾರೀ ಗಾತ್ರದ ಚಿರತೆ ಸೆರೆಯಾಗುವುದರೊಂದಿಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.












Click it and Unblock the Notifications