ಉಡುಪಿ; ಪತ್ನಿಯನ್ನು ಸಿಗರೇಟ್‌ನಿಂದ ಸುಟ್ಟ ಪ್ರಕರಣಕ್ಕೆ ಟ್ವಿಸ್ಟ್
ಉಡುಪಿ, ಮಾರ್ಚ್ 01; ಉಡುಪಿಯ ಕುಂದಾಪುರದಲ್ಲಿ ಪತಿ ಪತ್ನಿಯನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣ ಈಗ ತಿರುವು ಪಡೆದುಕೊಂಡಿದೆ.
ಪತ್ನಿಯು ಪತಿ ಜೊತೆಗೆ ಮಾವನ ವಿರುದ್ಧವೂ ಕುಂದಾಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಳು. ಇತ್ತ ತನ್ನ ಪುತ್ರ ಮಾನಸಿಕ ಅಸ್ವಸ್ಥ ಎಂದು ಅಂತಾ ತಾಯಿ ಹೇಳಿಕೆ ನೀಡಿದ್ದಾರೆ.
ಗರ್ಭಿಣಿಯಾಗಿರುವ ಪತ್ನಿಯನ್ನು ಸಿಗರೇಟ್‌ನಿಂದ ಸುಡುವ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿತ್ತು. ಕುಂದಾಪುರದ ಪ್ರದೀಪ್ ಎಂಬಾತ ಪತ್ನಿ ಪ್ರಿಯಾಂಕಗೆ ವರದಕ್ಷಿಣೆ ಕಿರುಕುಳ ನೀಡಿ, ಸಿಗರೇಟ್‌ನಿಂದ ಸುಟ್ಟಿದ್ದರು. ಪ್ರದೀಪ್‌ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದರು.

ಗರ್ಭಿಣಿ ಪತ್ನಿಗೆ ಸಿಗರೇಟ್‌ನಿಂದ ಚುಚ್ಚಿ ಚಿತ್ರಹಿಂಸೆ ನೀಡುವ ವೀಡಿಯೋ ವೈರಲ್ ಆಗಿತ್ತು. ಹಿಂಸೆ ನೀಡುವ ವೀಡಿಯೋ ಮಾಡಿದ್ದ ಪತಿರಾಯನ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪತ್ನಿ ಪ್ರಿಯಾಂಕ ದೂರಿನ ಮೇಲೆ ಪತಿಯ ಜೊತೆ ಮಾವನನ್ನು ಕೂಡಾ ಬಂಧಿಸಲಾಗಿದೆ. ವರದಕ್ಷಿಣೆ ಕಿರುಕುಳದಡಿಯಲ್ಲಿ ಕುಂದಾಪುರದ ಬರೆಗಟ್ಟು ನಿವಾಸಿಗಳಾದ ಪ್ರದೀಪ್ ಹಾಗೂ ಪ್ರಕಾಶ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಹಾಗೂ ಪ್ರಿಯಾಂಕ ಒಂದು ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ವರ್ಷ ಅಕ್ಟೋಬರ್ 25 ರಂದು ಕೊಲ್ಲೂರು ದೇವಾಲಯದಲ್ಲಿ ಮದುವೆಯಾಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಪತಿಯ ಮಾನಸಿಕತೆಗೆ ಪ್ರಿಯಾಂಕ ಬೇಸತ್ತಿದ್ದಾರೆ. ಅನ್ಯ ಜಾತಿಯ ಯುವಕನನ್ನು ಮದುವೆಯಾದ ಹಿನ್ನಲೆ ಕುಪಿತಗೊಂಡಿದ್ದ ಪ್ರಿಯಾಂಕ ತಾಯಿ, ಇದೇ ಕೋಪಕ್ಕೆ ಕೆಲ ದಿನದ ಹಿಂದೆ ಕರೆ ಮೂಲಕ ಅಳಿಯನನ್ನು ನಿಂದಿಸಿದ್ದರು.
ಇದೇ ಕೋಪಕ್ಕೆ ಕುಡಿದು ಬಂದು ಕ್ಷಮೆ ಕೇಳುವಂತೆ ಒತ್ತಾಯಿಸಿದ ಪ್ರದೀಪ್ ಪತ್ನಿಯನ್ನು ಸಿಗರೇಟ್‌ನಿಂದ ಚುಚ್ಚಿದ್ದ. ಇಷ್ಟೇ ಅಲ್ಲದೆ ಈ ಕೃತ್ಯದ ವೀಡಿಯೋ ಮಾಡಿದ್ದ. ಪತ್ನಿಯ ತಾಯಿಗೆ ವಿಡಿಯೋ ಕಳುಹಿಸಿ ಬೆದರಿಸಲು ಯತ್ನಿಸಿದ್ದ.
ಈ ವೀಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಕೂಡಲೇ ಮಗಳ ಜೊತೆ ಸೇರಿ ಪೊಲೀಸರಿಗೆ ಪ್ರಿಯಾಂಕ ಹಾಗೂ ಆಕೆಯ ತಾಯಿ ಸಾಕು ದೂರು ನೀಡಿದ್ದಾರೆ. ಪತಿ ಪ್ರದೀಪ್ ಪ್ರತೀ ದಿನ ಚಿನ್ನ ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಹಾಗೂ 2 ಲಕ್ಷ ಹಣ ಹಾಗೂ ನಾಲ್ಕು ಪವನ್ ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಆದರೆ ಮಗನ ಮೇಲೆ ಕೇಸು ದಾಖಲಾಗಿ ಬಂಧನವಾಗುತ್ತಿದ್ದಂತೆಯೇ ಪ್ರದೀಪ್ ತಾಯಿ ಶೋಭಾ ಈ ಬಗ್ಗೆ ಕಣ್ಣೀರಿಟ್ಟು ಗಳಗಳನೆ ಅತ್ತಿದ್ದಾರೆ. ಮನೋರೋಗ ಹೊಂದಿದ ಮಗನನ್ನು ಬಂಧಿಸಲಾಗಿದೆ ಜೊತೆಗೆ ಪತಿಯನ್ನೂ ಬಂಧಿಸಲಾಗಿದೆ. ನಾನು ಈಗ ಏಕಾಂಗಿ ಯಾಗಿದ್ದೇನೆ. ಪತಿ ಹಾಗೂ ಮಗನನ್ನ ಬಿಡಿಸಿ ಬರಲು ಹಣವಿಲ್ಲ. ನನ್ನ ಮಗ ಮಾಡಿದ್ದು ತಪ್ಪು. ಆದರೆ ಮಾನಸಿಕ ಖಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದು ನನ್ನ ಸೊಸೆಗೂ ಗೊತ್ತಿದೆ. ಈವರೆಗೂ ಸೊಸೆಯನ್ನ ಮಗಳಂತೆ ನೋಡಿಕೊಂಡಿದ್ದೆ. ಆದರೆ ತಾಯಿ ಮನೆಯ ಮಾತನ್ನು ಕೇಳಿ ಸುಳ್ಳು ವರದಕ್ಷಿಣೆ ದೂರನ್ನು ನೀಡಲಾಗಿದೆ. ನನ್ನ ಮಗನೇ ಸಾಲ ಮಾಡಿ ಮಾಂಗಲ್ಯ ಮಾಡಿಸಿದ್ದ. ಸಾಲದ ಮೊದಲ ಕಂತನ್ನು ಕಟ್ಟಿದ್ದಾನೆ. ಮದುವೆಯಾದ ಮೇಲೆ ಮಾನಸಿಕ ಸಮಸ್ಯೆಗೆ ಜಾರಿದ್ದಾನೆ ಅಂತಾ ಪ್ರದೀಪ್ ತಾಯಿ ಶೋಭಾ ಹೇಳಿದ್ದಾರೆ.
ಪ್ರದೀಪ್ ಲವ್ ಮ್ಯಾರೇಜ್ ಬಗ್ಗೆ ಮನಸ್ಸಿಗೆ ಆಳವಾಗಿ ತೆಗೆದುಕೊಂಡಿದ್ದ. ಮದುವೆಯಾದ ಮೇಲೆ ಬಾಂಬೆಗೆ ಓಡಿ ಹೋಗಲು ನಿರ್ಧರಿಸಿದ್ದ. ಆದರೆ ನಿರ್ಧಾರ ಬದಲಿಸಿ ನಮ್ಮೊಂದಿಗೆ ಚೆನ್ನಾಗಿ ಇದ್ದ. ಬರ ಬರುತ್ತಾ ಮಾನಸಿಕ ರೋಗಿಯಾಗಿದ್ದಾನೆ. ಆದರೆ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಇರೋದರಿಂದ ಈ ಸಮಯದಲ್ಲಿ ಕುಡಿಯಬಾರದೆಂದು ವೈದ್ಯರು ಹೇಳಿದ್ದರು.
ವಿಪರೀತ ಕುಡಿತ ಮನೆಯವರ ಮೇಲೆ ಹಲ್ಲೆಗೆ ಕಾರಣವಾಗಿತ್ತು. ಕುಡಿದಾಗ ಮಾನಸಿಕ ಸಮಸ್ಯೆ ಉಲ್ಬಣವಾಗುತ್ತದೆ. ಹೀಗೆ ಪತ್ನಿಯ ತಾಯಿ ಅವಮಾನ ಮಾಡಿದರೆಂದು ಕುಡಿದು ಈ ವಿಡಿಯೋ ಮಾಡಿದ್ದಾನೆ. ಈ ವೇಳೆ ನಾನು ತಡೆದಿದ್ದೆ. ಆದರೆ ಎಂದೂ ಸಿಗರೇಟ್ ನಿಂದ ಸುಟ್ಟಿಲ್ಲ ಯಾವತ್ತು ಹಲ್ಲೆ ನಡೆಸಿಲ್ಲ ಅಂತಾ ಪ್ರದೀಪ್ ತಾಯಿ ಶೋಭಾ ಹೇಳಿದ್ದಾರೆ.
ಪತಿಯ ಕಿರುಕುಳ ಬೇಸತ್ತು ಪತ್ನಿ ಪ್ರಿಯಾಂಕ ಆತನಿಂದ ವಿಚ್ಛೇದನ ಪಡೆಯೋಕೆ ತೀರ್ಮಾನ ಮಾಡಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಇನ್ನು ಪತಿಯ ಜೊತೆ ಜೀವನ ನಡೆಯಲ್ಲ ವಿಚ್ಚೇದನ ನೀಡುತ್ತೇನೆ. ಮದುವೆಯಾದ ಕೆಲವೇ ತಿಂಗಳಲ್ಲಿ ವಿಪರೀತ ಕುಡಿತ ನನ್ನ ಮೇಲೆ ಹಿಂಸೆಗೆ ಕಾರಣವಾಗಿತ್ತು. ಗರ್ಭಿಣಿ ಎಂದೂ ನೋಡದೆ ಸಿಗರೇಟ್‌ನಿಂದ ಸುಡುತ್ತಿದ್ದ. ಬೆಲ್ಟ್ ನಿಂದ ಹಲ್ಲೆ ಮಾಡುತ್ತಿದ್ದ. ಮಗು ಹೊಟ್ಟೆಯಲ್ಲೇ ಸಾಯಲಿ ಎನ್ನುತ್ತಿದ್ದ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಇನ್ನು ಅವನ ಜೊತೆ ಜೀವನ ಸಾಕು ಎಂದು ತಿಳಿಸಿದ್ದಾರೆ.












Click it and Unblock the Notifications