ಕುಂದಾಪುರ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಕುಂದಾಪುರ, ಜು.12: ಇತ್ತೀಚೆಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ರತ್ನ ಕೊಥಾರಿ ಶವವಾಗಿ ಶನಿವಾರ ಬೆಳಗ್ಗೆ ಪತ್ತೆಯಾಗಿದ್ದಾಳೆ..

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಎಡತ್ತೂರು ಕೊಣನಮಕ್ಕಿ ಅಲಂದೂರು ಗ್ರಾಮದ ನಿವಾಸಿ ಶಂಕರ್ ಕೊಥಾರಿ ಅವರ 17 ವರ್ಷದ ರತ್ನ ಕೊಥಾರಿ ಶವವಾಗಿ ಪತ್ತೆಯಾಗಿದ್ದಾಳೆ, ಶಿರೂರಿನ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದ ರತ್ನ ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದಳು. ಶನಿವಾರ ಆಲಂದೂರು ಬೈಂದೂರು ಸಮೀಪದ ಥೂದಳ್ಳಿ ಸಮೀಪ ಶವಪತ್ತೆಯಾಗಿದೆ.

Kundapur: Missing College student Ratna found Dead in Byndoor

ಜು.9ರಂದು ಕಾಲೇಜಿಗೆ ಹೋಗಿದ್ದ ರತ್ನ, ಕಾಲೇಜಿಗೆ ಹಾಜರಾಗಿದ್ದಳು ಆದರೆ, ಸಂಜೆ ವೇಳೆಗೆ ನಾಪತ್ತೆಯಾಗಿದ್ದಾಳೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಅವರ ಶವ ಪತ್ತೆಯಾದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.

ಬುಧವಾರ ಕಾಲೇಜು ಮುಗಿಸಿಕೊಂಡು ರತ್ನಾ ಮನೆ ಕಡೆಗೆ ತೆರಳಿದ್ದಾಳೆ. ಸಾವಂತಗುಡ್ಡೆ ತನಕ ಆಕೆ ಗೆಳತಿಯರು ಜೊತೆಗಿದ್ದರು. ನಂತರ ಆಕೆ ಬಗ್ಗೆ ನಮಗೆ ತಿಳಿಯಲಿಲ್ಲ ಎಂದು ಗೆಳತಿಯರು ಹೇಳಿದ್ದಾರೆ. ಗೆಳೆತಿಯರನ್ನು ಬಿಟ್ಟು ಮನೆ ಹಾದಿ ಮಧ್ಯೆ ಮರದ ಸೇತುವೆ ದಾಟುವಾಗ ಕಾಲು ಜಾರಿ ನದಿಗೆ ಬಿದ್ದಿರಬಹುದು ಎಂಬ ಅನುಮಾನವೂ ಇದೆ.

ಶವದ ಸಮೀಪದಲ್ಲೇ ಕಾಲೇಜಿಗೆ ತೆಗೆದುಕೊಂಡು ಹೋಗಿದ್ದ ಬ್ಯಾಗ್ ಬಿದ್ದಿದೆ. ಹೆಣ ಕೊಳತೆ ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ಘಟನೆಯೋ ಎಂಬುದರ ಬಗ್ಗೆ ಈ ಕೂಡಲೇ ಸ್ಪಷ್ಟವಾಗಿ ಹೇಳಲಾಗದು ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್ಪಿ ಬೋರಲಿಂಗಯ್ಯ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ಶಾಸಕ ಗೊಪಾಲ್ ಪೂಜಾರಿ ಆಗಮಿಸಿ ಪರಿಶೀಲನೆ ನಡೆಸಿ ತೆರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+