ಕುಮಾರ್ ಬಂಗಾರಪ್ಪಗೆ ಎಚ್ಚರಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಬೋಜೇಗೌಡ
Recommended Video

ಉಡುಪಿ, ಅಕ್ಟೋಬರ್.31: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಮೆಂಟ್ ಮಾಡಿರುವ ಕುಮಾರ್ ಬಂಗಾರಪ್ಪ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ತಿರುಗಿ ಬಿದ್ದಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕುಮಾರ್ ಬಂಗಾರಪ್ಪ ಹೇಳಿಕೆ ಅವರ ಸಣ್ಣತನ ತೋರಿಸುತ್ತದೆ. ಜವಾಬ್ದಾರಿ ಇರುವ ಮನುಷ್ಯ ಆಗಿ, ಮಾಜಿ ಸಿಎಂ ಮಗ ಆಗಿ ಹೀಗೆ ಮಾತನಾಡಬಾರದು. ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಿದರೆ ಹುಷಾರ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ವಿಚಾರ ಪ್ರಸ್ತಾಪ ಮಾಡಿದರೆ ನಿಮ್ಮ ವೈಯಕ್ತಿಕ ವಿಚಾರ ತೆಗಿಯಬೇಕಾಗುತ್ತದೆ ಎಂದು ಕುಮಾರ್ ಬಂಗಾರಪ್ಪ ಅವರಿಗೆ ಬೋಜೇಗೌಡ ಎಚ್ಚರಿಕೆ ನೀಡಿದ್ದಾರೆ.

ನಾವು ಕುಮಾರ್ ಬಂಗಾರಪ್ಪ ತರಹ ಕೀಳುಮಟ್ಟದ ರಾಜಕೀಯ ಮಾಡಲ್ಲ. ಇವರಿಗ್ಯಾಕೆ ಕುಮಾರಸ್ವಾಮಿ ಉಸಾಬರಿ. ನಿಮಗಿಂತ ಸಣ್ಣತನ ತೋರುವ ಶಕ್ತಿ ನನಗಿದೆ. ದಾಖಲೆ ಇದ್ದರೆ ನ್ಯಾಯಾಲಯ ಇದೆ. ವೈಯಕ್ತಿಕ ವಿಚಾರ ಚುನಾವಣೆಗೆ ಬಳಸೋದು ಅಕ್ಷಮ್ಯ ಅಪರಾಧ.
ಬಂಗಾರಪ್ಪ ನಮ್ಮ ಪಕ್ಷದಲ್ಲಿದ್ದರು. ಅವರ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ರೆ ಏನು ತಪ್ಪು? ಬಂಗಾರಪ್ಪ ಅವರ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ಎಲ್ಲಾ ಅಧಿಕಾರ ಇದೆ ಎಂದು ಅವರು ಹೇಳಿದರು.












Click it and Unblock the Notifications