ಉಡುಪಿಯ ಶ್ರೀಕೃಷ್ಣನ ಮೊರೆಹೋದ ಶಿವಣ್ಣ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಜನವರಿ. 19 : ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ 'ಟಗರು' ಕನ್ನಡ ಚಿತ್ರದ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್‌ ಬುಧವಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು.

ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಇತರೆ ಕುಟುಂಬ ಸದಸ್ಯರೊಂದಿಗೆ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್‌ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.[ಫೆ.24ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮಾತಾ ಅಮೃತಾನಂದಮಯಿ ಭೇಟಿ]

Kannada Actor Shivaraj Kumar Visits Sri Krishna Math

ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ' ಶ್ರೀಕೃಷ್ಣಮಠಕ್ಕೆ ಆಗಾಗ್ಗೆ ಬರುತ್ತೇನೆ. ಇಲ್ಲಿಗೆ ಬಂದಾಗ ನನ್ನ ತಂದೆ ಅಭಿನಯಿಸಿದ ಭಕ್ತ ಕನಕದಾಸ ಚಿತ್ರದ 'ಬಾಗಿಲನು ತೆರೆದು ಸೇವೆಯನ್ನು ಕೊಡೋ ಹರಿಯೇ' ಹಾಡು ನೆನಪಾಗುತ್ತದೆ' ಎಂದರು.

ಹಾಗೆಯೇ ಪೇಜಾವರ ಸ್ವಾಮೀಜಿ ಅವರ ಆಶೀರ್ವಾದ ಪಡೆದದ್ದು ತುಂಬಾ ಸಂತೋಷವಾಗಿದೆ. ಅವರೊಬ್ಬರು ಅತ್ಯುತ್ತಮ ವ್ಯಕ್ತಿ. ನನ್ನ ಮಗಳ ಮದುವೆಗೂ ಅವರು ಬಂದಿದ್ದರು. ಇನ್ನು ಶ್ರೀಕಂಠ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Well-known Kannada film actor Shivaraj Kumar, his wife Geetha Shivaraj Kumar along with family members visited Udupi Sri Krishna Math on Wednesday, January 18.
Please Wait while comments are loading...