ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಪ್ರಕಾಶ್ ಹೆಗ್ಡೆ ಪರ ಟ್ವಿಟರ್ ಅಭಿಯಾನ:ಚಿಂತೆಗೀಡಾದ ಶೋಭಾ ಕರಂದ್ಲಾಜೆ

|
Google Oneindia Kannada News

ಉಡುಪಿ, ಜನವರಿ 08: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮುಂದೆ ಚುನಾವಣೆಗೆ ಸ್ಪರ್ಧಿಸಲಿರುವ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ಈ ನಡುವೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಆಯ್ಕೆಗೆ ಒತ್ತಾಯಿಸಿ ಟ್ವಿಟರ್ ಅಭಿಯಾನ ಆರಂಭವಾಗಿದೆ.

ಹ್ಯಾಟ್ರಿಕ್ ಗೆಲುವಿನ ಸಿದ್ಧತೆಯಲ್ಲಿ ಎಂ.ವೀರಪ್ಪ ಮೊಯಿಲಿಹ್ಯಾಟ್ರಿಕ್ ಗೆಲುವಿನ ಸಿದ್ಧತೆಯಲ್ಲಿ ಎಂ.ವೀರಪ್ಪ ಮೊಯಿಲಿ

ಜಯಪ್ರಕಾಶ್ ಹೆಗ್ಡೆ ಅವರ ಅಭಿಮಾನಿಗಳು ಒಂದೇ ದಿನದಲ್ಲಿ ಮಾಡಿರುವ ಟ್ವೀಟ್ ಗಳು ನೂರೋ, ಇನ್ನೂರೋ ಅಲ್ಲ, ಭರ್ತಿ 3,000 ಟ್ವೀಟ್ ಗಳನ್ನು ಮಾಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುತ್ತಲೇ ಇದೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ದಕ್ಷಿಣ ಕನ್ನಡ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಪೈಪೋಟಿಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ದಕ್ಷಿಣ ಕನ್ನಡ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಪೈಪೋಟಿ

"ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಲು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸಮರ್ಥರು.‌ ಇವರಿಗೆ ಟಿಕೆಟ್ ನೀಡಿ ಎಂದು ಟ್ವಿಟರ್ ನಲ್ಲಿ ಒತ್ತಾಯಿಸಲಾಗುತ್ತಿದೆ". ಕಳೆದ ಎರಡು ದಿನಗಳಿಂದ ನಿರಂತರವಾಗಿ ಟ್ವೀಟ್ ಗಳು ಹೆಚ್ಚುತ್ತಿದ್ದು, ಹೆಗ್ಡೆ ಅವರ ಪರವಾಗಿ ಮಾಡಲಾದ ಈ ಹ್ಯಾಶ್ ಟ್ಯಾಗ್ ಟ್ವೀಟ್ ಭಾರಿ ಗಮನ ಸೆಳೆಯುತ್ತಿದೆ.

Jayaprakash Hegde fans started Twitter campaign

ಮುಂದಿನ ಲೋಕಸಭಾ ಚುನಾವಣೆಗೆ ಜಯಪ್ರಕಾಶ ಹೆಗ್ಡೆ ಬಿಜೆಪಿ ಅಭ್ಯರ್ಥಿಯಾಗಬೇಕು ಎನ್ನುವ ಒತ್ತಾಯ ಇತ್ತು. ಸದ್ಯ ಈ ಒತ್ತಾಯ ಟ್ವಿಟರ್ ಮೂಲಕವೂ ವ್ಯಕ್ತವಾಗುತ್ತಿದೆ. ಆದರೆ ಜಯಪ್ರಕಾಶ ಹೆಗ್ಡೆ ಅವರ ಅಭಿಮಾನಿಗಳು ಆರಂಭಿಸಿರುವ ಈ ಟ್ವಿಟರ್ ಅಭಿಯಾನ ಸಂಸದೆ ಶೋಭಾ ಕರದ್ಲಾಜೆ ಅವರನ್ನು ಚಿಂತೆಗೇಡುಮಾಡಿದೆ.

ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸ ಜೆಡಿಎಸ್ ಗೆ ಮುಳುಗು ನೀರಾಗುತ್ತಾ?ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸ ಜೆಡಿಎಸ್ ಗೆ ಮುಳುಗು ನೀರಾಗುತ್ತಾ?

ಬಿಜೆಪಿ ರಾಷ್ಟ್ರೀಯ ಮಟ್ಟದ ನಾಯಕರು ಈ ಟ್ವೀಟ್ ಹ್ಯಾಶ್ ಟ್ಯಾಗ್ ನೋಡಿ ಜಯಪ್ರಕಾಶ ಹೆಗ್ಡೆ ಅವರನ್ನು ಮುಂದಿನ ಉಡುಪಿ -ಚಿಕ್ಕಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಿದ್ದಾರೋ ? ಕಾದು ನೋಡಬೇಕು.

English summary
Supporter of BJP activists making noise on Twitter in favour of Jayaprakash Hegged . They demanding tick to Jayaprakash Hegged for contest in next upcoming Loksabha election from Udupi- Chikkamangaluru constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X