ಶಿರೂರು ಶ್ರೀಗಳಿಗೆ ವಿಷಪ್ರಾಶನ? ಉಡುಪಿ ಶ್ರೀಕೃಷ್ಣನೇ ಬಲ್ಲ!
Recommended Video

ಮಣಿಪಾಲ, ಜುಲೈ 19: 'ಆಹಾರ ಪ್ರಾಶನದಲ್ಲಿ ವಿಷ ಇದ್ದರೆ ಒಬ್ಬರಿಗೆ ಮಾತ್ರ ಈ ರೀತಿ ಆಗಲು ಹೇಗೆ ಸಾಧ್ಯ? ಶ್ರೀಗಳಿಗೆ ಪ್ರತ್ಯೇಕ ಆಹಾರ ನೀಡಲಾಗಿತ್ತೆ? ವಿಷ ಹೇಗೆ ಆಹಾರ ಸೇರಲು ಸಾಧ್ಯ? ಹೀಗೆ ನಾನಾ ಪ್ರಶ್ನೆಗಳು ಎದ್ದಿವೆ. ಎಲ್ಲದರ ಉತ್ತರವನ್ನು ಉಡುಪಿ ಶ್ರೀಕೃಷ್ಣನೇ ಬಲ್ಲ.
'ಶಿರೂರು ಶ್ರೀಗಳು ವಿಷ ಸೇವಿಸಿರುವುದು ನಿಜ, ಫುಡ್ ಪಾಯ್ಸನ್ ಇರಬಹುದು ಅಥವಾ ಬಲವಂತ ವಿಷ ಪ್ರಾಶನವಾಗಿರಬಹುದು, ಈ ಸಮಯಕ್ಕೆ ಯಾವುದನ್ನು ಖಚಿತವಾಗಿ ಹೇಳಲಾಗದು, ಪೊಲೀಸರ ಕಣ್ಗಾವಲಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಈ ಬಗ್ಗೆ ತಿಳಯಲಿದೆ ' ಎಂದು ಕೆಎಂಸಿ ಡಾ. ಅವಿನಾಶ್ ಶೆಟ್ಟಿ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಫುಡ್ ಪಾಯ್ಸನ್ ಆಗುವುದಾದರೆ ಅದು ಕೇವಲ ಸ್ವಾಮೀಜಿಗಳಿಗೆ ಮಾತ್ರ ಏಕೆ? ಆ ಆಹಾರ ಸೇವಿಸಿದ ಎಲ್ಲರಿಗೂ ಆಗಬೇಕಿತ್ತು. ಇತ್ತೀಚೆಗೆ ದೇವರ ವಿಗ್ರಹದ ಸ್ಥಳ ಬದಲಾವಣೆಯಂಥ ಕೆಲವು ಸಂಗತಿಗಳು ಸ್ವಾಮೀಜಿಗಳಿಗೆ ತೀವ್ರ ಬೇಸರ ತಂದಿದ್ದವು. ಜೊತೆಗೆ ಅವರ ನೇರ ಸ್ವಭಾವವೂ ಅವರಿಗೆ ಮುಳುವಾಗಿರಬಹುದು ಎಂದು ಬರ್ಕೂರು ಸಂಸ್ಥಾನದ ಸ್ವಾಮೀಜಿ ಸಂತೋಷ ಭಾರತಿ ಶ್ರೀ ಮತ್ತು ಪೇಜಾವರದ ಮಾಜಿ ಕಿರಿಯ ಶ್ರೀಗಳಾದ ವಿಶ್ವವಿಜಯ ಸ್ವಾಮೀಜಿ ಸಂಶಯ ಹೊರಹಾಕಿದ್ದಾರೆ.
ಈ ನಡುವೆ ಆಹಾರ ತಜ್ಞ ದಿನೇಶ್ ಅವರು ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿ, 'ವಿಸೇರಾದಲ್ಲಿ ವಿಷ ಅಂಶ ಇದೆ ಎಂದು ಮರಣೋತ್ತರ ಪರೀಕ್ಷೆ ಸಮಯದಲ್ಲಿ ತಿಳಿದು ಬಂದರೂ, ಸಂಪೂರ್ಣವಾಗಿ ಯಾವ ವಿಷ, ದೇಹದ ಯಾವ ಯಾವ ಭಾಗಕ್ಕೆ ಹರಡಿದೆ. ವಿಷ ಸೇವಿಸಿರಬಹುದಾದ ಸಮಯ ಸೇರಿದಂತೆ ಇನ್ನಿತರ ಮಾಹಿತಿಗಳು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ ನೆರವು ಬೇಕಾಗುತ್ತದೆ. ಎಲ್ಲವನ್ನು ಸಂಪೂರ್ಣವಾಗಿ ತಿಳಿಯಲು ಕನಿಷ್ಠ 6 ವಾರಗಳ ಕಾಲವಾದರೂ ಬೇಕು' ಎಂದಿದ್ದಾರೆ.












Click it and Unblock the Notifications