ಉದ್ದೇಶಪೂರ್ವಕವಾಗಿ ಸೋಂಕು ಹರಡಲಾಗುತ್ತಿದೆ; ಶೋಭಾ ಕರಂದ್ಲಾಜೆ

ಉಡುಪಿ, ಜೂನ್ 05: "ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ವೈರಸ್ ಹಬ್ಬಿದೆ. ಪಾದರಾಯನಪುರ, ಸಿದ್ಧಿಕ್ ಲೇಔಟ್ ನಲ್ಲಿ ಉದ್ದೇಶಪೂರ್ವಕವಾಗಿ ತಬ್ಲಿಘಿಗಳು ಸೋಂಕು ಹಂಚಿದರು. ಅವರ ನಡತೆ ನೋಡಿದರೆ ಉದ್ದೇಶಪೂರ್ವಕವಾಗಿ ಹೀಗೆ ಇರುವಂತೆ ಕಾಣಿಸುತ್ತದೆ" ಎಂದು ಆರೋಪಿಸಿದ್ದಾರೆ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ.

Recommended Video

      ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

      "ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಈ ಕುರಿತು ಆಗ್ರಹಿಸುತ್ತೇನೆ. ಇಲ್ಲಿನ ಅನ್ನ ತಿಂದವರು ರೋಗ ಹಬ್ಬಿಸಿದರೆ ನಿಮಗೆ ಕ್ಷಮೆ ಇಲ್ಲ. ಕುಮ್ಮಕ್ಕು ಕೊಡುವ ಜನಪ್ರತಿನಿಧಿ, ಅಧಿಕಾರಿಗಳ ಮೇಲೆ ಕ್ರಮ ಆಗಲಿ" ಎಂದು ಆಗ್ರಹಿಸಿದರು.

      ಉಡುಪಿ ಜಿಲ್ಲೆಯಲ್ಲಿ ಈಗ ಕೊರೊನಾ ಸ್ಫೋಟವಾಗುತ್ತಿದೆ. ಮಹಾರಾಷ್ಟ್ರದ ಜನರ ಪಾಸ್ ತಡೆಯಲು ಮನವಿ ಮಾಡಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾತನಾಡಿದ್ದೇನೆ. ಆನ್ ಲೈನ್ ಪಾಸ್ ನಿಲ್ಲಿಸಲು ಸಲಹೆ ಕೊಟ್ಟಿದ್ದೇನೆ. ಸೋಂಕಿತರು ಗುಣಮುಖರಾದ ಮೇಲೆ ಉಳಿದವರಿಗೆ ಪಾಸ್ ಕೊಡಲು ಸಲಹೆ ನೀಡಲಾಗಿದೆ. ಒಂದು ವಾರದಲ್ಲಿ ಬಹಳ ಕಡಿಮೆ ಜನ ಬಂದಿದ್ದಾರೆ ಎಂದು ತಿಳಿಸಿದರು.

      Intentionally Tablighis Spreading Coronavirus Said Shobha Karandlaje

      ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕಾಗಿದೆ. ಎಂಎಚ್ ಐ ಗೈಡ್ ಲೈನ್ ಪ್ರಕಾರ ಬರುವವರನ್ನು ತಡೆಯುವಂತಿಲ್ಲ. ಮುಂಬೈ ಜನರಲ್ಲಿ ನಾನು ವಿನಂತಿ ಮಾಡುತ್ತೇನೆ ಎಲ್ಲವೂ ಸರಿ ಹೋದ ಮೇಲೆ ಉಡುಪಿಗೆ ಬನ್ನಿ ಎಂದು ಮನವಿ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+