'ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು'
ಉಡುಪಿ, ನವೆಂಬರ್ 25: 'ಪ್ರತಿಯೊಬ್ಬ ಹಿಂದೂಗಳು ನಾಲ್ಕು ಮಕ್ಕಳನ್ನು ಪಡೆಯಬೇಕು. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರೋವರೆಗೂ ಮುಂದುರೆಯಲಿ ಎಂದು ಹರಿದ್ವಾರದ ಭಾರತ್ ಮಾತಾ ಮಂದಿರದ ಗೋವಿಂದದೇವ್ ಗಿರಿಜಿ ಮಹಾರಾಜ್ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿ ನಡೆಯುತ್ತಿರುವ ಹಿಂದೂ ಸಂಸದ್ ನಲ್ಲಿ ಶನಿವಾರ ಮಾತನಾಡಿದ ಹರಿದ್ವಾರದ ಭಾರತ್ ಮಾತಾ ಮಂದಿರದ ಗೋವಿಂದದೇವ್ ಗಿರಿಜಿ, "ಹಿಂದೂಗಳಿಗೆ ಇಬ್ಬರು ಮಕ್ಕಳೆಂಬ ಸೀಮಿತ ಬೇಡ. ಪ್ರತಿಯೊಬ್ಬ ಹಿಂದೂಗಳು ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದು ಹೇಳಿದರು.

ಹಿಂದೂಗಳು 2 ಮಕ್ಕಳಿಗೆ ಮಾತ್ರ ಸೀಮಿತವಾಗಬಾರದು. ಜನಸಂಖ್ಯೆ ಕಡಿಮೆಯಾದಂತೆ ಭಾರತ ತನ್ನ ಪ್ರದೇಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಅನೇಕ ಪ್ರದೇಶ ಕಳೆದುಕೊಂಡಿದ್ದೇವೆ.
ಸರ್ಕಾರ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ, ದೇಶದಲ್ಲಿ ಜನಾಂಗೀಯ ಅಸಮತೋಲನ ಹೆಚ್ಚಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ತನಕ 2 ಮಕ್ಕಳ ಬದಲಿಗೆ 4 ಮಕ್ಕಳನ್ನು ಹೊಂದಬೇಕೆಂದು ಎಂದು ತಿಳಿಸಿದರು.












Click it and Unblock the Notifications