ಶ್ರೀ ಕೊಲ್ಲೂರು ಮೂಕಾಂಬಿಕೆಗೆ ಚಿನ್ನದ ಖಡ್ಗ ನೀಡಿದ ತಮಿಳುನಾಡಿನ ಭಕ್ತ

ಉಡುಪಿ, ಅಕ್ಟೋಬರ್. 04: ಕೊಲ್ಲೂರು ಶ್ರೀ ಮೂಕಾಂಬಿಕೆಗೆ ತಮಿಳುನಾಡಿನ ಭಕ್ತರೊಬ್ಬರು ಚಿನ್ನಡ ಖಡ್ಗವನ್ನು ಹರಕೆ ರೂಪದಲ್ಲಿ ಅರ್ಪಿಸಿದ್ದಾರೆ. ತಮ್ಮ ಮನದ ಇಚ್ಛೆ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಅವರು 1 ಕೆಜಿ ತೂಕದ ಚಿನ್ನಡ ಖಡ್ಗವನ್ನು ಮೂಕಾಂಬಿಕೆಗೆ ಸಮರ್ಪಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಮೂಲದ ಡಾ.ನಳಿನ್ ವಿಮಲ್ ಕುಮಾರ್ ಎಂಬುವವರು ಶ್ರೀ ಮೂಕಾಂಬಿಕೆಯಲ್ಲಿ ಕೆಲದಿನಗಳ ಹಿಂದೆ ಹರಕೆ ಹೊತ್ತುಕೊಂಡಿದ್ದರು. ಹರಕೆ ಫಲಿಸಿದ ಹಿನ್ನೆಲೆಯಲ್ಲಿ ಡಾ.ನಳೀನ್ ವಿಮಲ್ ಕುಮಾರ್ 30 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಖಡ್ಗವನ್ನು ತಂದು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ.

Golden sword for Devi Mookambika

ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಚಿನ್ನದ ಖಡ್ಗವನ್ನು ಡಾ.ನಳಿನ್ ವಿಮಲ್ ಕುಮಾರ್ ಹಸ್ತಾಂತರಿಸಿದ್ದು, ಸದ್ಯ ಖಡ್ಗವನ್ನು ದೇವಾಲಯದ ಲಾಕರ್ ನಲ್ಲಿ ಇಡಲಾಗಿದೆ. ಕೊಲ್ಲೂರು ಮೂಕಾಂಬಿಕೆಗೆ ಈವರೆಗೆ 5ಕ್ಕೂ ಹೆಚ್ಚು ಚಿನ್ನದ ದೊಡ್ಡ ಖಡ್ಗ, ಹತ್ತಾರು ಚಿನ್ನದ ಸಣ್ಣ ಖಡ್ಗ, 200ಕ್ಕೂ ಹೆಚ್ಚು ಬೆಳ್ಳಿ ಖಡ್ಗಗಳು ಹರಕೆ ರೂಪದಲ್ಲಿ ಬಂದಿವೆ.

Golden sword for Devi Mookambika

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆಗೆ ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ ಅವರು ನೀಡಿದ್ದ ಚಿನ್ನದ ಖಡ್ಗವನ್ನು ಶ್ರೀ ದೇವಿಯ ಅಲಂಕಾರ ಸಂದರ್ಭ ಪ್ರತಿನಿತ್ಯ ಬಳಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+