ಉಡುಪಿಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಉಡುಪಿ, ಮೇ 20: ಉಡುಪಿಯ ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್ ಒಂದು ಮುಳುಗಡೆ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೋಟ್ ನಲ್ಲಿದ್ದ ಎಲ್ಲ 6 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಮೀನುಗಾರಿಕೆಗೆ ತೆರಳಿ ವಾಪಾಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಲ್ಪೆ ಬಂದರು ಸಮೀಪ ಬರುವಾಗ ಈ ಬೋಟ್ ಅಕಸ್ಮಾತ್ ಆಗಿ ಬಂಡೆಗೆ ಬಡಿದಿತ್ತು. ಶ್ರೀ ಸ್ವರ್ಣರಾಜ್ ಹೆಸರಿನ ಆಳ ಸಮುದ್ರ ಬೋಟ್ ಇದಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮೇ 14 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 19 ರಂದು ವಾಪಾಸ್ ಆಗುವಾಗ ಆಚಾತುರ್ಯ ನಡೆಯಿತು. ಬೋಟ್ ನ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ.

ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್ ನಲ್ಲಿದ್ದ 6 ಜನರ ರಕ್ಷಣೆ ಮಾಡಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಾಜು 80 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.












Click it and Unblock the Notifications