ಕೊಲ್ಲೂರಲ್ಲಿ ಜನ್ಮದಿನ ಆಚರಿಸಿಕೊಂಡ ಖ್ಯಾತ ಗಾಯಕ ಯೇಸುದಾಸ್
ಉಡುಪಿ, ಜನವರಿ 10: ಪದ್ಮಭೂಷಣ ಡಾ. ಯೇಸುದಾಸ್ ಅವರು ತಮ್ಮ ಜನ್ಮದಿನವನ್ನು ಉಡುಪಿಯ ಶ್ರೀಕ್ಷೇತ್ರ ಕೊಲ್ಲೂರಿನಲ್ಲಿ ಆಚರಿಸಿಕೊಂಡರು.
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ದೇವಿಗೆ ವರ್ಷದ ಹರಕೆ ಸಲ್ಲಿಸಿದ ಜೇಸುದಾಸ್ ಅವರು ತಮ್ಮ 81 ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಯೇಸುದಾಸ್ ಈ ಬಾರಿ ಕುಟುಂಬದ ಎಲ್ಲಾ ಸದಸ್ಯರನ್ನು ಕರೆತಂದು ದೇವರ ಪೂಜೆ ಮತ್ತು ಹೋಮದಲ್ಲಿ ಭಾಗಿಯಾದರು.
ಈ ವೇಳೆ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಜನಪ್ರಿಯ ಬಹುಭಾಷಾ ಗಾಯಕ ನಂತರ ಯಜ್ಞ ಶಾಲೆಯಲ್ಲಿ ಚಂಡಿಕಾ ಹೋಮ ನೆರವೇರಿಸಿದರು. ದೇವರ ನಾಮಗಳನ್ನು ಜೇಸುದಾಸ್ ಹಾಡುತ್ತಿದ್ದರೆ, ಸಂಗೀತ ಪ್ರೇಮಿಗಳೆಲ್ಲಾ ಮಂತ್ರಮುಗ್ಧರಾಗುತ್ತಾರೆ.

ಇನ್ನು ಸಿನೆಮಾ ಹಾಡುಗಳಿಗೆ ಇವರ ಕಂಠ ಸಿಕ್ಕರೆ ಕೇಳೋದೇ ಬೇಡ, ತಮ್ಮ ಕಂಚಿನ ಕಂಠದ ಮೂಲಕ ಸಂಗೀತ ರಸದೌತಣ ಉಣಬಡಿಸುತ್ತಾರೆ. ಯೇಸುದಾಸ್ ಅವರಿಗೆ ನ್ಯಾಶನಲ್ ಫಿಲಂ ಅವಾರ್ಡ್ ಜೊತೆ ಕರ್ನಾಟಕ, ತಮಿಳ್ನಾಡು, ಕೇರಳ, ಆಂಧ್ರ, ವೆಸ್ಟ್ ಬೆಂಗಾಲ್ ರಾಜ್ಯ ಪ್ರಶಸ್ತಿಯ ಜೊತೆಗೆ ದಕ್ಷಿಣ ಭಾರತದ ಹಲವಾರು ಪುರಸ್ಕಾರಗಳು ಒಲಿದು ಬಂದಿವೆ












Click it and Unblock the Notifications