ಉಡುಪಿ ಜನರೇ ಎಚ್ಚರ!: ಉಷ್ಣ ಅಲೆಯಿಂದ ಪಾರಾಗಲು ಏನೇನು ಮಾಡಬೇಕು?
ಉಡುಪಿ, ಫೆಬ್ರವರಿ 27: ಕರ್ನಾಟಕದಲ್ಲಿ ಬೇಸಿಗೆ ಆರಂಭವಾಗಿದ್ದು, ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಅಥವಾ ಉಷ್ಣ ಅಲೆ ಏಳಲಿದೆ. ಕರಾವಳಿಯಲ್ಲಿ ಮುಂದಿನ ಐದು ದಿನಗಳ ಕಾಲ ಉಷ್ಣ ಅಲೆ ಬೀಸಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಬಿಲಿಸಿ ಝಳ ಗರಿಷ್ಟ ಮಟ್ಟದಲ್ಲಿ ಹೆಚ್ಚಾಗುವ ಸಾಧ್ಯತೆಯಿದ್ದು, ಜನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ.
ಇನ್ನು ಬಿಸಿ ಗಾಳಿಯ ಸಮಯದಲ್ಲಿ ಜನರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೆಲವು ಸೂಚನೆಗಳನ್ನು ನೀಡಿದೆ. ಬಿಸಿ ಗಾಳಿಯ ಸಮಯದಲ್ಲಿ ಜನರು ಏನೇನು ಮಾಡಬೇಕು ಎನ್ನುವ ವಿವರ ಇಲ್ಲಿದೆ.

ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು
* ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರಿ
* ಬಿಸಿಲಿಗೆ ಹೋಗುವಾಗ ಕೊಡೆಗಳನ್ನು ಬಳಸಿ
* ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು ಬಳಸಿ
*ಹತ್ತಿಯ ಟೋಪಿಗಳನ್ನು ಬಳಸಿ
* ಬಿಸಿಲು ಹೆಚ್ಚಿರುವ ಸಮಯದಲ್ಲಿ ಮನೆಯಲ್ಲೇ ವಿಶ್ರಾಂತಿ ಪಡೆಯಿರಿ
* ಸಾಕಷ್ಟು ಮಜ್ಜಿಗೆ ನೀರು ಕುಡಿಯಿರಿ
*ವಾಸವಿರುವ ಕೋಣೆಯನ್ನು ತಂಪಾಗಿರಿಸಿ
* ಬಿಸಿ ಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಿ
* ಬಿಸಿ ಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ಚಿಕಿತ್ಸೆ ನೀಡಿ
* ಬಿಸಿ ಗಾಳಿಗೆ ತುತ್ತಾದ ವ್ಯಕ್ತಿಗೆ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ, ದ್ರವ ಹಾರ ನೀಡಿ
ಸಾರ್ವಜನಿಕರು ಅನುಸರಿಸಬಾರದ ಕ್ರಮಗಳು
* ನೇರ ಬಿಸಿಲು ಅಥವಾ ಬಿಸಿಗಾಳಿಗೆ ಒಡ್ಡಬೇಡಿ
*ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡಿ
* ಕಪ್ಪು, ಘಾಡ ಬಣ್ಣದ ತೆಳುವಾದ ಹಾಗೂ ಸಿಂಥೆಟಿಕ್ ಉಡುಪುಗಳನ್ನು ಧರಿಸಬೇಡಿ
*ನೇರ ಬಿಸಿಲಿಗೆ ತಲೆಯೊಡ್ಡಬೇಡಿ
* ಹೆಚ್ಚು ಬಿಸಿಲಿರುವ ಸಮಯದಲ್ಲಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡಬೇಡಿ
*ಬಿಸಿ ಚಹ ಮದ್ಯ ಸೇವಿಸಿಬೇಡಿ
*ಬಿಸಿ ಗಾಳಿಗೆ ತುತ್ತಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದನ್ನು ತಡಮಾಡಬೇಡಿ
* ಬಿಸಿ ಗಾಳಿ ಸಂದರ್ಭದಲ್ಲಿ ಚಹಾ, ಕಾಫಿ, ಮತ್ತು ಜೇನು ಸೇವಿಸಬೇಡಿ
* ವಾಸವಿರುವ ಕೋಣೆಯಲ್ಲಿ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಿ












Click it and Unblock the Notifications