• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲ

By ಉಡುಪಿ ಪ್ರತಿನಿಧಿ
|

ಉಡುಪಿ, ಸೆಪ್ಟೆಂಬರ್.19: ಉಪ್ಪುನೀರು ಮತ್ತು ಹಿನ್ನೀರು ಎರಡೂ ಇರುವ ಕಡೆ ಮನರಂಜನೆಗೇನು ಕೊರತೆ? ಕರಾವಳಿಯಲ್ಲಂತೂ ಕಡಲತೀರ ಮತ್ತು ಬ್ಯಾಕ್ ವಾಟರ್ ಪ್ರವಾಸಿಗರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಈ ವರ್ಷದ ಬೇಸಿಗೆ ಮಜಾಕ್ಕೆ ಈಗಲೇ ಉಡುಪಿಯಲ್ಲಿ ಬೋಟ್ ಹೌಸ್ ಸಿದ್ಧಗೊಂಡಿದೆ.

ಪ್ರಕೃತಿಯ ಆಸ್ವಾದನೆಗೆ ಬೋಟ್ ಹೌಸ್ ಗಿಂತ ಮತ್ತೊಂದು ಸಿಗಲು ಸಾಧ್ಯವೇ ಇಲ್ಲ. ಏನಿದರ ವಿಶೇಷತೆ ಅಂತೀರಾ? ಪ್ರಕೃತಿ ಪ್ರಿಯರಿಗಂತೂ ಇದು ಸಿಹಿಸುದ್ದಿ . ಕೇರಳದಲ್ಲಿ ಪ್ರಸಿದ್ಧಿ ಪಡೆದಿರುವ ಬೋಟ್ ಹೌಸ್ ಮತ್ತೆ ಉಡುಪಿಯಲ್ಲಿ ಸೇವೆಗೆ ಸಿದ್ಧಗೊಂಡಿದೆ.

ಉಡುಪಿಗೆ ಬಂತು ಕೇರಳ ಮಾದರಿಯ ಬೋಟ್ ಹೌಸ್

ಅಂದಹಾಗೆ ಈ ಬೋಟ್ ಹೌಸ್ ನಲ್ಲಿ ಅಲೆಗಳ ಏರಿಳಿತಗಳಿಲ್ಲ ಇಲ್ಲಿ ಏನಿದ್ದರೂ ಪ್ರಕೃತಿಯ ಮಡಿಲಲ್ಲಿ ಮೌನಧ್ಯಾನ. ಹಿನ್ನೀರಲ್ಲಿ ತೇಲುವ ಅಪೂರ್ವ ರಸದೌತಣ.

ಬೋಟ್ ನಲ್ಲಿ ಸಂಚರಿಸುತ್ತಾ ಕಡಲ ತಡಿಯ ಸೌಂದರ್ಯದ ಜತೆಗೆ ಹಿನ್ನೀರಿನ ಸವಿ, ಡಾಲ್ಫಿನ್ ಪಾಯಿಂಟ್, ಸೈಂಟ್ ಮೆರೀಸ್ ದ್ವೀಪಗಳನ್ನು ನೋಡುತ್ತಾ ಸೂರ್ಯಾಸ್ತವನ್ನು ಸವಿಯಬಹುದು. ಬೇಸಿಗೆ ರಜೆಯಲ್ಲಿ ಪ್ರವಾಸಿಗರಿಗೆ ಪರಿಸರದ ಸೌಂದರ್ಯದೊಂದಿಗೆ ಮೋಜಿಗೆ ಅವಕಾಶ ನೀಡುವ ಬೋಟ್ ಹೌಸ್ ಇದು.

ಒಂದೆಡೆ ಬೀಚ್ ನ ಸೌಂದರ್ಯ, ಇನ್ನೊಂದೆಡೆ ಹಿನ್ನೀರಿನ ಉಲ್ಲಾಸ ಸವಿಯುವ ಮನಸ್ಸು ನಿಮಗಿದ್ದರೆ ಖಂಡಿತ ಕೆಮ್ಮಣ್ಣು, ಕೋಡಿಬೆಂಗ್ರೆಯ ಸ್ವರ್ಣಾ ನದಿಯತ್ತ ಬನ್ನಿ. ಪ್ರತಿದಿನ ಸ್ವರ್ಣಾ ನದಿಯಿಂದ ಆರಂಭವಾಗಿ ಸಮುದ್ರಕ್ಕೆ ಸುತ್ತು ಹಾಕಲಿದೆ ಈ ಬೋಟ್ ಹೌಸ್.

ಬನ್ನೇರುಘಟ್ಟದಲ್ಲಿ ಜಾರಿಗೆ ಬರಲಿದೆ ತಿರುಪತಿ ಮಾದರಿ ವ್ಯವಸ್ಥೆ!

ಪ್ರವಾಸಿಗರಿಗೆ 2 ಗಂಟೆಗಳ ಕಾಲ ಸ್ವಚ್ಛಂದವಾಗಿ ನೀರಿನ ಮೇಲೆ ತೇಲಾಡುವ ಅವಕಾಶವನ್ನು ಈ ಬೋಟ್ ಹೌಸ್ ನೀಡಲಿದೆ. ಇದೊಂದು ಅಪ್ಪಟ ಮನೆಯ ವಾತಾವರಣ ಹೊಂದಿರುವ ಬೋಟ್. ಅಡಿಭಾಗದಲ್ಲಿ ಜೋಡಿಗಳಿಗೆ ಅನುಕೂಲವಾಗುವಂತೆ ಬೆಡ್ ರೂಂ ವ್ಯವಸ್ಥೆಯಿದೆ.

ಅಲ್ಲಿಂದಲೇ ಪ್ರಕೃತಿಯ ಸೌಂದರ್ಯ ಸವಿಯುವ ಅಪೂರ್ವ ಅವಕಾಶ. ಒಟ್ಟು 160 ಜನರಿಗೆ ಈ ಬೋಟ್ ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ಟೂರಿಸ್ಟ್ ಬೋಟ್ ನಲ್ಲಿ ಪಾರ್ಟಿ, ಬರ್ತ್ ಡೇ ಆಯೋಜನೆಗೂ ಅವಕಾಶ ಉಂಟು. ರಾತ್ರಿ ಉಳಿದುಕೊಳ್ಳಲೂ ಪ್ಯಾಕೇಜ್ ವ್ಯವಸ್ಥೆಯೂ ಇದೆ.

ಸಂಪೂರ್ಣ ಮರದಿಂದಲೇ ಸಿದ್ಧಗೊಂಡಿರುವ ಟೂರಿಸ್ಟ್ ಬೋಟನ್ನು ಹಳೆಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ನುರಿತ ಸಲಕರಣೆಗಳನ್ನು ಜೋಡಿಸಲಾಗಿದೆ. ಅಲ್ಲದೇ ನುರಿತ ತಜ್ಞರು ಬೋಟ್ ನಲ್ಲಿ ಇರುತ್ತಾರೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆಯ ಸಹಕಾರವೂ ಇದೆ.

ರಾಜ್ಯದ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳ ಪ್ರವೇಶ ಶುಲ್ಕ ಏರಿಕೆ

ಬೋಟ್ ಹೌಸ್ ಗಳಿಗೆ ಕೇರಳ ತುಂಬ ಪ್ರಸಿದ್ಧಿ. ಇದೀಗ ಕರ್ನಾಟಕದಲ್ಲಿ ಬೋಟ್ ಹೌಸ್ ಪರಿಚಯ ಆಗ್ತಿರೋದು ಉಡುಪಿಯಲ್ಲಿ ಮಾತ್ರ. ಈಗಾಗಲೇ ಉಡುಪಿಯಲ್ಲಿ ನಿಗಿನಿಗಿ ಬಿಸಿಲು ಪ್ರಾರಂಭಗೊಂಡಿದೆ. ಬೇಸಿಗೆಗೆ ಸಹಜವಾಗಿಯೇ ಪ್ರವಾಸಿಗರ ಓಡಾಟ ಹೆಚ್ಚು.

ಕಡಲ ತಡಿಯ ಸೌಂದರ್ಯದ ಜತೆಗೆ, ಇಲ್ಲಿನ ಜಲಮಾರ್ಗಗಳಲ್ಲಿ ಸಂಚರಿಸಿದರೆ ಸಾಕು, ನೀವು ಆ ಕ್ಷಣಗಳನ್ನು ಜೀವಮಾನದಲ್ಲಿ ಮತ್ತೀನೆಂದೂ ಮರೆಯಲಾರಿರಿ. ಇನ್ನು ಈ ಬೋಟ್ ಹೌಸ್ ನಲ್ಲಿ ನಿಮಗೆ ಕರಾವಳಿಯ ಮೀನು ಅಡುಗೆ, ಚಿಕನ್ ಅಡುಗೆಯನ್ನೂ ಸವಿಯಬಹುದು.

ಇದಲ್ಲದೆ ಬೋಟ್ ನಲ್ಲಿಯೇ ರಾತ್ರಿಯನ್ನು ಕಳೆಯಬೇಕೆನಿಸಿದವರಿಗೆ ಮಂದ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಮತ್ತೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು ? ಮತ್ತೇಕೆ ತಡ ಈ ಬೇಸಿಗೆಗೆ ನೀವೂ ಒಮ್ಮೆ ಇಲ್ಲಿ ಭೇಟಿ ಕೊಡಲು ಸಿದ್ಧರಾಗಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Boat House is ready for summer occasion in Udupi. This tourist boat also offers party and birthday parties. There is also a fish cooking, chicken cooking facilities available. Do you know What are the facilities available? Read this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more