ತೌಕ್ತೆ ಚಂಡಮಾರುತದಿಂದ ನಷ್ಟ; ಉಡುಪಿಯಲ್ಲಿ ಕೇಂದ್ರ ತಂಡದ ಅಧ್ಯಯನ

ಉಡುಪಿ, ಜೂನ್ 17; ತೌಕ್ತೆ ಚಂಡಮಾರುತದಿಂದ ಆದ ನಷ್ಟದ ಬಗ್ಗೆ ಅಂದಾಜು ನಡೆಸಲು ಕೇಂದ್ರದ ಅಧ್ಯಯನ ತಂಡ ಉಡುಪಿಗೆ ಆಗಮಿಸಿದೆ. ಮೇ ತಿಂಗಳಿನಲ್ಲಿ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಅಪಾರ ನಷ್ಟ ಉಂಟು ಮಾಡಿತ್ತು.

ಕೇಂದ್ರದ 5 ಸದಸ್ಯರ ತಂಡ ಉಡುಪಿಗೆ ಆಗಮಿಸಿದೆ. ಕೇಂದ್ರ ಗ್ರಹ ಇಲಾಖೆ ಅಧಿಕಾರಿ ಸುಶೀಲ್ ಪಾಲ್ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಎಸಿ ಕೆ. ರಾಜು, ಎಎಸ್ ಪಿ ಕುಮಾರಚಂದ್ರ ತಂಡದ ಜೊತೆ ಇದ್ದಾರೆ.

ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ತಂಡ ಭೇಟಿ ನೀಡಿತು. ಬೈಂದೂರು, ಶಿರೂರು, ಉಪ್ಪುಂದ, ಮರವಂತೆ ಮುಂತಾದ ಪ್ರದೇಶಗಳಲ್ಲಿ ಹಾನಿಗೊಳಗಾದ ಸಮುದ್ರ ತೀರ, ಕೃಷಿ ಭೂಮಿ, ಬಿದ್ದ ಮನೆಗಳ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿತು. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿತು.

Damage Due To Tauktae Cyclone Central Team In Udupi For Inspection

ತೌಕ್ತೆ ಚಂಡಮಾರುತದಿಂದ ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ತಂಡ ಜಿಲ್ಲೆಯಾದ್ಯಾಂತ ವಿವಿಧ ಕಡೆ ವೀಕ್ಷಣೆ ಮಾಡಿ ನಷ್ಟದ ಮಾಹಿತಿ ಸಂಗ್ರಹಿಸಿದೆ. ಕೇಂದ್ರ ಗೃಹ ಇಲಾಖೆಗೆ ನಷ್ಟದ ವರದಿಯನ್ನು ಅಧಿಕಾರಿಗಳ ತಂಡ ನೀಡಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, "ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಹಾನಿಗೊಳಗಾದ ವರದಿಯನ್ನು ಸಿದ್ಧಪಡಿಸಲಾಗಿದೆ. ಚಂಡಮಾರುತದಿಂದ ಹಾನಿಗೊಳಗಾದ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ ನೀಡಿದೆ. ಕೇಂದ್ರದ ಅಧ್ಯಯನ ತಂಡಕ್ಕೆ ನಷ್ಟದ ಅಂದಾಜಿನ ಕುರಿತು ಮಾಹಿತಿ ನೀಡಲಾಗಿದ್ದು, ಕೇಂದ್ರದ ನೆರವು ಆಧರಿಸಿ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಮಾಡಲಿದ್ದೇವೆ" ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+