ಉಡುಪಿಯನ್ನು 1 ತಿಂಗಳಲ್ಲಿ ಹಸಿರು ವಲಯ ಮಾಡುತ್ತೇವೆ: ಸುಧಾಕರ್

ಉಡುಪಿ, ಜೂನ್ 3: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಪೈಕಿ 98% ಜನಕ್ಕೆ ರೋಗದ ಲಕ್ಷಣ ಇಲ್ಲ. ವಾರದೊಳಗೆ ಇನ್ನೊಂದು ಪ್ರಯೋಗಾಲಯ ಆರಂಭಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು.

ಉಡುಪಿಯಲ್ಲಿ ಕೊರೊನಾ ವೈರಸ್ ಮುಂಜಾಗ್ರತಾ ಸಭೆ ಬಳಿಕ ಮಾತನಾಡಿದ ಅವರು, ನಿರಂತರ ಮಾಸ್ಕ್ ಹಾಕಿದರೆ ಯಾವುದೇ ಅಪಾಯ ಇಲ್ಲ, ಎನ್-95 ಹಾಕಿದರೆ ಉಸಿರಾಟದ ಸಮಸ್ಯೆ ಆಗುತ್ತದೆ, ಮಾಮೂಲಿ ಮಾಸ್ಕ್ ಧರಿಸಿ ಯಾವುದೇ ಅಪಾಯ ಇಲ್ಲವೆಂದರು.

ಉಡುಪಿಯಲ್ಲಿ ಕೊರೊನಾ ವೈರಸ್ ಮಹಾಸ್ಪೋಟವಾಗುತ್ತಿದ್ದು, ಈ ಮೊದಲು 18 ನೇ ಸ್ಥಾನದಲ್ಲಿತ್ತು. ಈಗ ಮೊದಲ ಸ್ಥಾನಕ್ಕೆ ಬಂದಿದೆ, ಒಂದು ತಿಂಗಳಿನಲ್ಲಿ ಜಿಲ್ಲೆಯನ್ನು ಹಸಿರು ವಲಯವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ 9022 ಕೊರೊನಾ ಪರೀಕ್ಷೆ ಆಗಿದ್ದು, 64 ಜನ ಗುಣಮುಖರಾಗಿದ್ದಾರೆ.

Covid-19: We Will Make The Udupi A Green Zone In 1 Month: Minister Sudhakar

ಜನರಿಂದ ಕೊರೊನಾ ವೈರಸ್ ಭಯ ಹೋಗಬೇಕು, ಅದು ಸಾಮಾಜಿಕ ಪಿಡುಗು ಅಲ್ಲ. ಕೊರೊನಾ ವೈರಸ್ ಗಿಂತ ಸಾರ್ಸ್, ಎಬೋಲಾ ಮಾರಕವಾಗಿದ್ದು, ಮನುಷ್ಯ ವೈರಾಣು ವಿರುದ್ಧ ಹೋರಾಡಿ ಗೆಲ್ಲಬೇಕು. ಮಹಾರಾಷ್ಟ್ರದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದು, ಉಳಿದ 7 ದಿನ ಹೋಮ್ ಕ್ವಾರಂಟೈನ್ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

ವಾರ್ಡ್, ಬೂತ್ ವಾರು ಟಾಸ್ಕ್ ಫೋರ್ಸ್ ಕಮಿಟಿ ರಚನೆ ಮಾಡಿದ್ದು, ಹೊಸ ಸೋಂಕಿತ ವ್ಯಕ್ತಿ ಬಂದಾಗ ವಿವರ ಸಂಗ್ರಹಿಸಲಾಗುವುದು.

ರಾಜ್ಯದಲ್ಲಿ 10 ಲಕ್ಷ ಜನ ಸೋಂಕಿತರು ಬಂದರೂ ಕಟ್ಟೆಚ್ಚರ ವಹಿಸಬಹುದು. 64 ಲ್ಯಾಬ್ ಕಾರ್ಯಾಚರಣೆ ನಡೆಸುತ್ತಿವೆ, ಅಂತಹ ತಂತ್ರಜ್ಞಾನ ಸಿದ್ಧ ಮಾಡಿದ್ದೇವೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸುತ್ತೇವೆ, ರಾಜ್ಯ ಸರ್ಕಾರಗಳು ಆಯಾ ರಾಜ್ಯದವರನ್ನು ಬಿಟ್ಟುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದು ಉಡುಪಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+