• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಲಸ ಕೊಡಿಸೋದಾಗಿ ವಂಚಿಸಿ ಪಲಾಯನ ಮಾಡಿದ ದಂಪತಿ

By ಉಡುಪಿ ಪ್ರತಿನಿಧಿ
|

ಉಡುಪಿ, ಸೆಪ್ಟೆಂಬರ್ 14: ಉದ್ಯೋಗ ಕೊಡಿಸುವುದಾಗಿ ನಂಬಿಸಿ 3೦ ಲಕ್ಷ ರೂಪಾಯಿ ವಂಚಿಸಿ ಬಜಪೆಯ ಆಸೀಫ್ ಇಸ್ಮಾಯಿಲ್, ಆತನ ಪತ್ನಿ ಫರ್ವಿನ್ ಹಾಗೂ ತಂದೆ ಇಸ್ಮಾಯಿಲ್ ವಿದೇಶಕ್ಕೆ ಪರಾರಿಯಾದ ಘಟನೆ ನಡೆದಿದೆ.

ಆತ್ರಾಡಿಯ ಜುಬೇದಾ ಎಂಬಾಕೆಯ ಮಗ ಫರಾನ್ ‌ಗೆ ವಿದೇಶದಲ್ಲಿ ಕೆಲಸ ಕೊಡಿಸಿದ್ದು, ಇದಕ್ಕಾಗಿ ಜುಬೇದಾರವರು ವೀಸಾಕ್ಕೆ 5 ಲಕ್ಷ ರೂಪಾಯಿಯನ್ನು ಆರೋಪಿಗಳಿಗೆ ನೀಡಿದ್ದರು.

ನೌಕರಿ ಕೊಡಿಸುವುದಾಗಿ ವಂಚನೆ; ಹಣ ಕೇಳಿದ್ದಕ್ಕೆ ಥಳಿಸಿದ ಆರೋಪಿ

ಫರಾನ್, ಸೌದಿಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಆಸೀಫ್ ಇಸ್ಮಾಯಿಲ್‌ನೊಂದಿಗೆ 10 ತಿಂಗಳ ಕಾಲ ಕೆಲಸ ಮಾಡಿದ್ದು, ಆಗ ಯಾವುದೇ ಸಂಬಳ ನೀಡಲಾಗಿಲ್ಲ. ಅಲ್ಲದೆ ಜುಬೇದಾ ಮಗನ ಪಾಸ್ ಪೋರ್ಟ್ ಆಸೀಫ್ ಇಸ್ಮಾಯಿಲ್ ಬಳಿ ಇದ್ದು, ಅದನ್ನೂ ವಾಪಸ್ ನೀಡಿಲ್ಲ. ಮತ್ತೆ ಇಲ್ಲಿಗೇ ಬಂದು ಇಸ್ಮಾಯಿಲ್ ಕುಟುಂಬ ನೆಲೆಸಿತ್ತು.

ಆರೋಪಿಗಳಾದ ಹಸೀನಾ ಪರ್ವಿನ್ ಹಾಗೂ ಆಕೆಯ ಗಂಡ ಆಸಿಫ್ ಇಸ್ಮಾಯಿಲ್, ಜುಬೇದಾ ಗಂಡ 30 ವರ್ಷ ವಿದೇಶದಲ್ಲಿ ಉದ್ಯೋಗ ಮಾಡಿದ ಸರ್ವಿಸ್ ಹಣವನ್ನೂ ನೀಡದೆ ವಂಚಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಜುಬೇದಾ ಅವರ ತಂಗಿ ಜೀನತ್ ಮಗ ಅರ್ಫಾನ್ ‌ಗೆ ವೀಸಾ ಮಾಡಿಸಿ ಕೊಡಿಸುವ ನೆಪದಲ್ಲಿ ಆರೋಪಿಗಳು 5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ.

ನಾಗವಲ್ಲಿ ಕತೆ ಹೇಳಿ ಮೂವತ್ತು ಲಕ್ಷ ವಂಚಿಸಿದ ಕಳ್ಳ ಜ್ಯೋತಿಷಿ

ಒಟ್ಟಾರೆ ಆರೋಪಿ ದಂಪತಿ 30 ಲಕ್ಷದ ತನಕ ವಂಚಿಸಿ, ಕೊಲೆ ಬೆದರಿಕೆ ಒಡ್ಡಿದ್ದು, ವಿದೇಶಕ್ಕೆ ಮತ್ತೆ ಪರಾರಿಯಾಗಿದ್ದಾರೆ. ಜುಬೇದಾ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

English summary
Bajpe's Asif Ismail, his wife Farwin and his father Ismail have fled the country after cheating Rs 3೦ lakh in the name of giving employment abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X