ಉಡುಪಿ ಪರ್ಯಾಯ: ಇತಿಹಾಸದಲ್ಲಿ 2ನೇ ಬಾರಿ ಮೆರವಣಿಗೆ ಮಾರ್ಗ ಬದಲು

ಉಡುಪಿ, ಜ 17: ಅಷ್ಠಮಠಗಳಲ್ಲೊಂದಾದ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಎರಡನೇ ಪರ್ಯಾಯ ಪೀಠಾರೋಹಣ ಸಮಾರಂಭಕ್ಕೆ ಕೃಷ್ಣನ ನಾಡು ಉಡುಪಿ ಸಜ್ಜಾಗಿದೆ. ಗುರುವಾರ (ಜ 18) ಬೆಳಗಿನ ಜಾವ ಎರಡು ಗಂಟೆಗೆ ಪರ್ಯಾಯದ ವಿಧಿವಿಧಾನ ಆರಂಭವಾಗಲಿದೆ.

ಪರ್ಯಾಯದ ಮುನ್ನಾದಿನವಾದ ಬುಧವಾರ ಸಂಜೆ ಏಳು ಗಂಟೆಗೆ ರಥಬೀದಿ ಆವರಣದಲ್ಲಿ, ಯಶಸ್ವಿಯಾಗಿ ಪಂಚಮ ಪರ್ಯಾಯವನ್ನು ಮುಗಿಸಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಗೆ ಅಭಿವಂದನೆ ಕಾರ್ಯಕ್ರಮ ನಡೆಯಲಿದೆ.

ಉಡುಪಿ ಪರ್ಯಾಯದ ಇದುವರೆಗಿನ ಇತಿಹಾಸದಲ್ಲಿ ಎರಡನೇ ಬಾರಿಗೆ (22 ವರ್ಷದ ಹಿಂದೆ, ಮೊದಲ ಬಾರಿ) ಪರ್ಯಾಯ ಮೆರವಣಿಗೆಯ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಗುರುವಾರ ಬೆಳಗಿನ ಜಾವ ಮೂರು ಗಂಟೆಗೆ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ.

Count down started for historical Udupi Palimar Seer Paryaya Mahotsava

ಉಡುಪಿ ಹೊರವಲಯದ ಕಾಪು ಬಳಿಯ ದಂಡತೀರ್ಥದಲ್ಲಿ ಬೆಳಗ್ಗಿನ ಜಾವ ಎರಡು ಗಂಟೆಗೆ ಪವಿತ್ರ ಸ್ನಾನ ಮಾಡಿ ಪಲಿಮಾರು ಶ್ರೀಗಳು ಉಡುಪಿ ಪ್ರವೇಶಿಸಲಿದ್ದಾರೆ. ಮೂರು ಗಂಟೆಗೆ ಜೋಡುಕಟ್ಟೆ ವೃತ್ತದಿಂದ ಪರ್ಯಾಯ ಮೆರವಣಿಗೆ
ಅರಂಭವಾಗಲಿದೆ.

In Pics: ಉಡುಪಿ: ಪಲಿಮಾರು ಶ್ರೀಗಳಿಂದ ಪರ್ಯಾಯ ಪುರ ಪ್ರವೇಶ

ಜೋಡುಕಟ್ಟೆ-ತಾಲೂಕು ಆಫೀಸ್ ಕಚೇರಿ- ಡಯಾನ ಸರ್ಕಲ್- ಕವಿಮುದ್ದಣ್ಣ ಮಾರ್ಗ- ಅಲಂಕಾರ್ ಚಿತ್ರಮಂದಿರ- ಹೆಡ್ ಪೋಸ್ಟ್ ಆಫೀಸ್ ರಸ್ತೆ- ಸಂಸ್ಕೃತ ಕಾಲೇಜು ವೃತ್ತ- ಕನಕದಾಸ ರಸ್ತೆಯ ಮೂಲಕ ಪರ್ಯಾಯ ಮೆರವಣಿಗೆ ರಥಬೀದಿಗೆ ಬರಲಿದೆ.

ಗುರುವಾರದ (ಜ 18) ಕಾರ್ಯಕ್ರಮದ ವಿವರ ಇಂತಿದೆ:
02.00 - ಕಾಪು ದಂಡತೀರ್ಥದಲ್ಲಿ ಪವಿತ್ರ ಸ್ನಾನ
03.00 - ಜೋಡುಕಟ್ಟೆ ವೃತ್ತದಲ್ಲಿರುವ ಮಂಟಪದಲ್ಲಿ ಪಲಿಮಾರು ಮಠದ ಪಟ್ಟದ ದೇವರಿಗೆ ಪೂಜೆ, ಪರ್ಯಾಯ ಮೆರವಣಿಗೆ ಆರಂಭ
05.15 - ಅಖಂಡ ಶ್ರೀಹರಿ ನಾಮ ಸಂಕೀರ್ತನೆ
05.35 - ಪರ್ಯಾಯ ಶ್ರೀ ರಥಬೀದಿ ಪ್ರವೇಶ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ
06.12 - ಪೇಜಾವರ ಶ್ರೀಗಳಿಂದ ಸ್ವಾಗತ, ಶ್ರೀಕೃಷ್ಣಮಠ ಪ್ರವೇಶ
06.35 - ಅಕ್ಷಯಪಾತ್ರೆ, ಸಟ್ಟುಗ ಸ್ವೀಕಾರ, ಸರ್ವಜ್ಞ ಪೀಠಾರೋಹಣ
06.50 - ಅರಳುಗದ್ದುಗೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನ
07.00 - ರಾಜಾಂಗಣದ ಆನಂದತೀರ್ಥ ಮಂಟಪದಲ್ಲಿ ಪರ್ಯಾಯ ದರ್ಬಾರ್
11.10 - ಮಹಾಪೂಜೆ
12.15 - ಮಹಾ ಅನ್ನ ಸಂತರ್ಪಣೆ
19.40 - ರಥೋತ್ಸವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+