Breaking: ಕಾಣೆ ಮೀನು ತಿಂದು ಶ್ರೀಕೃಷ್ಣ ಮಠಕ್ಕೆ ಭೇಟಿ‌ ನೀಡಿದ್ರಾ ಗೋವಾ ಸಿಎಂ?

ಉಡುಪಿ, ಅಕ್ಟೋಬರ್ 10: ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಮಾಂಸಹಾರ ಸೇವಿಸಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಅಪಚಾರ ಎಸಗಿದ್ದಾರೆ ಎಂದು ಉಡುಪಿ ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಉಡುಪಿ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಮೋದ್ ಸಾವಂತ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ತೆರಳುವ ಮೊದಲು ಭರ್ಜರಿ ಮಾಂಸಹಾರ ಸೇವನೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಶನಿವಾರ ಉಡುಪಿಗೆ ಭೇಟಿ‌ ನೀಡಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಉಡುಪಿಯ ಪ್ರವಾಸಿ ಮಂದಿರದಲ್ಲಿ ಮಾಂಸಾಹಾರ ಸೇವನೆ ಮಾಡಿದ್ದಾರೆ. ಮಾಂಸಹಾರ ಸೇವನೆ ಮಾಡಿ ದೇವಾಲಯಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀಗಳಿಂದ ಪ್ರಸಾದ ಸ್ವೀಕರಿಸಿದ್ದಾರೆ. ಸಿದ್ದರಾಮಯ್ಯ ಮಾಡಿದರೆ ಅದು ತಪ್ಪು ಅದರೆ ಗೋವಾ ಸಿಎಂ ಮಾಡಿದರೆ ಸರಿ ಎಂಬ ಬಿಜೆಪಿಗರ ದ್ವಂದ್ಚ ನಿಲುವು ಖಂಡನೀಯ ಎಂದು ರಮೇಶ್ ಕಾಂಚನ್ ಆರೋಪಿಸಿದ್ದಾರೆ.

Udupi Congress Accuses on Goa CM ate Fish food Before visiting Udupi Krishna Math

ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಹೋದರೆ ಅದು ಹಿಂದೂ ವಿರೋಧಿ. ಗೋವಾ ಮುಖ್ಯ ಮಂತ್ರಿ ಸಾವಂತ್ ಮಾಂಸಹಾರ ಸೇವಿಸಿ ದೇವಾಲಯಕ್ಕೆ ಹೋಗಿರುವುದು ಎಷ್ಟು ಸರಿ. ಇನ್ನೊಬ್ಬರ ಕಡೆ ಕೈತೋರಿಸುವ ಮೊದಲು ಬಿಜೆಪಿ ನಾಯಕರು ಸರಿಯಾಗಿರಬೇಕು. ಈ ಬಗ್ಗೆ ಬಹಿರಂಗವಾಗಿ ಬಿಜೆಪಿ ನಾಯಕರು ಕ್ಷಮೆ ಕೇಳಬೇಕು. ಗೋವಾ ಸಿಎಂ ಜೊತೆ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಶಾಸಕ ರಘುಪತಿ‌ ಭಟ್ ಜೊತೆಯಲ್ಲಿದ್ದರು, ದೇವಾಲಯಕ್ಕೆ ಹೋಗುವಾಗ ಮಾಂಸಹಾರ ಸೇವಿಸಬಾರದು ಎಂದು ತಿಳಿಸಬಹುದಿತ್ತು. ಆದರೆ ಶಾಸಕರೇ ಗೋವಾ ಮುಖ್ಯ ಮಂತ್ರಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಇದಕ್ಕೆ ಶಾಸಕ ರಘುಪತಿ ಭಟ್ ತಕ್ಕ ಉತ್ತರ ಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ಆಗ್ರಹಿಸಿದ್ದಾರೆ.

Udupi Congress Accuses on Goa CM ate Fish food Before visiting Udupi Krishna Math

ಇನ್ನೊಂದೆಡೆ ಗೋವಾ ಸಿಎಂ ಪ್ರಮೋದ್ ಸಾವಂತ್ ಮಾಂಸಹಾರ ಸೇವಿಸಿರುವ ಬಗ್ಗೆ ಪ್ರವಾಸಿ ಮಂದಿರದ ಮೂಲಗಳು ಸುದ್ದಿಯನ್ನು ಧೃಢಪಡಿಸಿವೆ. ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಮುನ್ನ ಪ್ರಮೋದ್ ಸಾವಂತ್‌ಗೆ ಕಿದಿಯೂರು ಹೋಟೆಲ್‌ನಿಂದ ಕಾಣೆ ಮೀನು ಮತ್ತು ಚಿಕನ್ ಸುಕ್ಕಾ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+