ಭಾಸ್ಕರ ಶೆಟ್ಟಿ ಶವ ಸುಡಲು 20 ಲೀಟರ್ ಪೆಟ್ರೋಲ್ ಬಳಕೆ!

ಉಡುಪಿ, ಆಗಸ್ಟ್ 11 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪೂರ್ವ ನಿಯೋಜಿತವಾಗಿತ್ತು. ಹತ್ಯೆಯ ಬಳಿಕ ತಾವು ಸಿಕ್ಕಿ ಬೀಳದಂತೆ ಆರೋಪಿಗಳು ಯೋಜನೆ ರೂಪಿಸಿದ್ದರು. ಶವವನ್ನು ವಿಲೇವಾರಿ ಮಾಡಲು ಆರೋಪಿಗಳು ಅಗತ್ಯ ಯೋಜನೆಯನ್ನು ರೂಪಿಸಿದ್ದರು. ಶವವನ್ನು ಸುಡಲು 20 ಲೀಟರ್ ಪೆಟ್ರೋಲ್ ಬಳಕೆ ಮಾಡಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಇದೊಂದು ಯೋಜಿತ ಕೃತ್ಯವಾಗಿದ್ದರಿಂದ ಶವವನ್ನು ವಿಲೇವಾರಿ ಮಾಡುವ ಬಗೆ ಹೇಗೆ? ಎಂದು ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಮೊದಲೇ ಯೋಜನೆ ರೂಪಿಸಿದ್ದರು. ಅದಕ್ಕಾಗಿ ಅವರು ಪೆಟ್ರೋಲ್ ಬಂಕ್‌ನಿಂದ 20 ಲೀಟರ್ ಪೆಟ್ರೋಲ್ ಖರೀದಿಸಿ ನಂದಳಿಕೆಯಲ್ಲಿರುವ ನಿರಂಜನ್ ಭಟ್ ಮನೆಗೆ ತೆಗೆದುಕೊಂಡು ಹೋಗಿದ್ದರು.[ಭಾಸ್ಕರ ಶೆಟ್ಟಿ ಹತ್ಯೆ, ಮತ್ತಿಬ್ಬರು ಆರೋಪಿಗಳ ಬಂಧನ]

Businessman Bhaskar Shetty murder was pre-planned

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಅವರು ಒಪ್ಪಿಕೊಂಡಂತೆ ಹೋಮಕುಂಡದಲ್ಲಿ ಶವವನ್ನು ಸುಡಲಾಗಿದೆ. ಆ ನಂತರ ಅವಶೇಷಗಳನ್ನು ಚೀಲದಲ್ಲಿ ತುಂಬಿ ನದಿಗೆ ಎಸೆಯಲಾಗಿದೆ.[ಜ್ಯೋತಿಷಿ ನಿರಂಜನ್ ಭಟ್ ಆತ್ಮಹತ್ಯೆಗೆ ಯತ್ನ]

ಚೀಲ ಎಸೆಯಲಿಲ್ಲ : ಶವವನ್ನು ಸುಟ್ಟ ಬಳಿಕ ಅವಶೇಷ ವಿಲೇವಾರಿಯಲ್ಲಿಯೂ ಆರೋಪಿಗಳು ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಮೂಳೆಗಳಿರುವ ಇಡೀ ಚೀಲವನ್ನು ಎಸೆದರೆ ಅದು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತಿತ್ತು. ಆದ್ದರಿಂದ, ಚೀಲವನ್ನು ಎಸೆಯದೇ ಅದರಲ್ಲಿದ್ದ ಅವಶೇಷಗಳನ್ನು ಸ್ವಲ್ಪ ಸ್ವಲ್ಪವೇ ತೆಗೆದು ಹೊಳೆಗೆ ಎಸೆದಿದ್ದಾರೆ.[ಭಾಸ್ಕರ ಶೆಟ್ಟಿ ಹತ್ಯೆ : ತನಿಖೆಯ ಹೊಣೆ ಅಣ್ಣಾಮಲೈ ಹೆಗಲಿಗೆ?]

ಆರೋಪಿಗಳ ಯೋಜನೆ ಪೊಲೀಸರ ತನಿಖೆಗೆ ಹಿನ್ನಡೆ ಉಂಟುಮಾಡಿದೆ. ಏಕೆಂದರೆ ಶವದ ಅವಶೇಷಗಳು ಇನ್ನೂ ಸಿಕ್ಕಿಲ್ಲ. 20 ಲೀಟರ್ ಪೆಟ್ರೋಲ್ ಬಳಸಿ ಶವ ಸುಟ್ಟರೂ, ಅದನ್ನು ಸಾಬೀತು ಮಾಡುವಂತಹ ಸಾಕ್ಷಿಗಳು ಸಿಕ್ಕಿಲ್ಲ. ಶವವನ್ನು ಹೇಗೆ ಸುಟ್ಟರೂ ಎಂಬುದಕ್ಕೆ ಸರಿಯಾದ ಮಾಹಿತಿ ಪೊಲೀಸರಿಗೆ ಇನ್ನೂ ಲಭ್ಯವಾಗಿಲ್ಲ.

ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಂತೆ ಇದುವರೆಗೂ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್‌, ಜ್ಯೋತಿಷಿ ನಿರಂಜನ್ ಭಟ್, ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್, ಕಾರು ಚಾಲಕ ರಾಘವೇಂದ್ರನನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+