ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಕ್ಯಾಂಟೀನ್ ಊಟ, ಬಸ್ ಪ್ರಯಾಣ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 20: ಉಡುಪಿಯ ಉದ್ಯಮಿ ಕೆ.ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ನವನೀತ್ ಶೆಟ್ಟಿ, ನಿರಂಜನ್ ಭಟ್ ನನ್ನು ಉಡುಪಿ ನ್ಯಾಯಾಲಯ ಸೆ. 21ರವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ.

ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ, ಸಾಕ್ಷ್ಯನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರಗೆ ಕೋರ್ಟ್ ಅ.3ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ.[ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ : ಸಿಕ್ಕಿದ್ದು ಮಾನವನ ಮೂಳೆ]

ಸದ್ಯ ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ, ಸಿಐಡಿ ಕಸ್ಥಡಿಯಲ್ಲಿದ್ದ ನಿರಂಜನ ಭಟ್ ಹಾಗೂ ಉಡುಪಿ ಅಂಜಾರು ಜೈಲಿನಲ್ಲಿದ್ದ ಶ್ರೀನಿವಾಸ ಭಟ್, ರಾಘವೇಂದ್ರನನ್ನು ಪೊಲೀಸರು ಹೆಚ್ಚುವರಿ ಹಿರಿಯ ನ್ಯಾಯಾಧೀಶ ಕೆ.ರಾಜೇಶ್ ಕರ್ಣಂ ಅವರ ಎದುರು ಸೋಮವಾರ ಹಾಜರುಪಡಿಸಿದರು.

Bus journey, canteen meals for Bhaskar shetty murder accused

ಹೆಚ್ಚಿನ ತನಿಖೆಗಾಗಿ ನವನೀತ್ ಶೆಟ್ಟಿಯನ್ನು 6 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡಬೇಕು ಎಂದು ಸಿಐಡಿ ಪರವಾಗಿ ಎಪಿಪಿ ಪ್ರವೀಣ್ ಕುಮಾರ್ ನ್ಯಾಯಾಧೀಶರಲ್ಲಿ ಮನವಿ ಮಾಡದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ನವನೀತ್ ಶೆಟ್ಟಿಯನ್ನು ಸೆ. 21ರವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿದರು.[ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣ, ನಿರಂಜನ್ ಭಟ್ ಸಿಐಡಿ ವಶಕ್ಕೆ]

ಬಸ್‌ನಲ್ಲಿ ಕರೆತಂದರು: ಮಂಗಳೂರು ಜೈಲಿನಲ್ಲಿರುವ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿಯನ್ನು ಮಂಗಳೂರು ಪೊಲೀಸರು ಪಡುಬಿದ್ರಿ ವರೆಗೆ ಪೊಲೀಸ್ ಜೀಪ್ ನಲ್ಲಿ ಕರೆದುಕೊಂಡು ಬಂದು ಉಡುಪಿ ಪೊಲೀಸರ ವಶಕ್ಕೆ ಒಪ್ಪಿಸಿದರೆ, ಉಡುಪಿ ಪೊಲೀಸರು ಬಸ್‌ನಲ್ಲಿ ನ್ಯಾಯಾಲಯಕ್ಕೆ ಕರೆತಂದರು.

ವಾದ ಮಂಡನೆ ಸಂದರ್ಭ ಈ ವಿಷಯ ಪ್ರಸ್ತಾಪಿಸಿದ ಆರೋಪಿಗಳ ಪರ ವಕೀಲ ಅರುಣ್ ಬಂಗೇರ, ಬಸ್‌ನಲ್ಲಿ ಕರೆತಂದಿರುವುದು ಸರಿಯಲ್ಲ ಎಂದು ವಾದಿಸಿದರು. ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ನಿಯಮಾವಳಿ ಪಾಲಿಸುವಂತೆ ಆದೇಶಿಸಿದರು.[ಭಾಸ್ಕರ್ ಶೆಟ್ಟಿ ಕೊಲೆ : ನವನೀತ್, ನಿರಂಜನ್ ಮಂಗಳೂರು ಜೈಲಿಗೆ]

ಕ್ಯಾಂಟೀನ್ ಊಟ: ಈ ಮಧ್ಯೆ ವಿಚಾರಣೆ ಮುಗಿಯುವಾಗ ಮಧ್ಯಾಹ್ನದ ಊಟದ ಹೊತ್ತಾಗಿದ್ದ ಕಾರಣ ಅಮ್ಮ- ಮಗ ನ್ಯಾಯಾಲಯ ಆವರಣದಲ್ಲಿರುವ ಕ್ಯಾಂಟೀನ್ ನಲ್ಲಿಯೇ ಊಟ ಮಾಡಬೇಕಾಯಿತು. ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಅಮ್ಮ- ಮಗ ಒಟ್ಟಿಗೆ ಕುಳಿತು ಪರಸ್ಪರ ಸಂಭಾಷಣೆಯಲ್ಲಿ ನಿರತರಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupi businessman Bhaskar Shetty murder case accused, Astrologer Niranjan Bhat and Navaneeth shetty sent to CID custody till september 21 by court.
Please Wait while comments are loading...