ಕೇಂದ್ರ ಬಜೆಟ್ 2021: ಜನಪರ ಹೊರತು ಜನಪ್ರಿಯ ಬಜೆಟ್ ಅಲ್ಲ

ಉಡುಪಿ, ಫೆಬ್ರವರಿ 1: ಈ ವರ್ಷದ ಕೇಂದ್ರ ಬಜೆಟ್ ಜನಪರ ಹೊರತು, ಜನಪ್ರಿಯ ಬಜೆಟ್ ಅಲ್ಲ. ಈ ಬಾರಿಯ ಬಜೆಟ್ ಅನ್ನು ಹಿಂದಿನ ಬಜೆಟ್ ನ ಹಾಗೆ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಯಾಕೆಂದರೆ ಇದು ಕೊರೊನೋತ್ತರ ಬಜೆಟ್ ಎಂದು ರಾಜಕೀಯ ವಿಶ್ಲೇಶಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಆರ್ಥಿಕವಾಗಿ ಸಾಕಷ್ಟು ಸೊರಗಿರುವ ಸಂದರ್ಭದಲ್ಲಿ ತೆರಿಗೆ ವಿನಾಯಿತಿ ನೀಡುವುದು ಸುಲಭವಲ್ಲ. ಮುಂದಿನ ಅಭಿವೃದ್ಧಿಗೆ ಹಣವನ್ನು ಸಂಗ್ರಹಿಸಬೇಕಾದ ಅಗತ್ಯತೆಯೂ ಇದೆ. ಉದ್ಯೋಗ ಸೃಷ್ಠಿ ಮಾಡಬೇಕಾದ ಅನಿವಾರ್ಯತೆಯೂ ಇದೆ. ಜನರಿಗೆ ಇನ್ನಷ್ಟು ಹೊರೆಯೂ ಆಗದ ರೀತಿಯಲ್ಲಿ ತೆರಿಗೆ ಹಾಕುವ ಚಾಕಚಕ್ಯತೆಯನ್ನು ಕೇಂದ್ರ ಬಜೆಟ್ ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂದರು.

ಕೃಷಿಯನ್ನು ಪ್ರಧಾನವಾಗಿ ಇಟ್ಟುಕೊಂಡು "ಕೃಷಿ ಸೆಸ್' ಹಾಕಿರುವುದರ ಕುರಿತು ಜನರಿಗೆ ಮನವರಿಕೆ ಮಾಡಬೇಕಾದ ಅನಿವಾರ್ಯತೆ ಸರಕಾರಕ್ಕೂ ಇದೆ. ಕೃಷಿ ಸೆಸ್ ಅನ್ನು ಕೇವಲ ಆಮದು ಆಧರಿಸಿದ ವಸ್ತುಗಳಿಗೆ ಮಾತ್ರ. ಹೊರಗಿನಿಂದದ ಬರುವ ವಸ್ತುಗಳಿಗೆ ಹಾಕುವ ಕಸ್ಟಮ್ ಡ್ಯೂಟಿಯ ಮೇಲಿನ ತೆರಿಗೆಯ ಮೇಲೆ ಹಾಕುವ ಎಕ್ಸಟ್ರಾ ತೆರಿಗೆ ಇದು. ಹಾಗಾಗಿ ಹೆಚ್ಚು ವ್ಯತ್ಯಾಸ ಬರುವುದಿಲ್ಲ. ಇದರಿಂದಾಗಿ ದೇಶಿಯ ಉತ್ಪಾದನೆಗೆ ಹೆಚ್ಚು ಸಹಕಾರಿಯಾಗಬಹುದು ಅನ್ನುವ ಅಭಿಪ್ರಾಯ ಆರ್ಥಿಕ ತಜ್ಞರದ್ದಾಗಿದೆ.

Budget 2021: Not A Popular Budget But Good Budget For People: Surendranath Shetty

ಆದರೂ ಪೆಟ್ರೋಲಿಯಂ ವಸ್ತುಗಳ ಬೆಲೆ ಇನ್ನಷ್ಟು ಮೇಲೆ ಹೇೂಗದ ಹಾಗೆ ನೇೂಡಿಕೊಳ್ಳಬೇಕಾಗಿದೆ. ಇದರಿಂದಾಗಿ ಜನ ಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಮಾತ್ರವಲ್ಲ ಜನ ಸಾಮಾನ್ಯರೂ ಬಜೆಟ್ ನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯೂ ಇದೆ.

ಏನೇ ಆಗಲಿ ಇದೊಂದು ಸಂಕಷ್ಟ ಕಾಲದ ಬಜೆಟ್ ಆಗಿದ್ದು, ಜನರ ಸಹಕಾರ, ಸಹನೆ ತೀರಾ ಅನಿವಾರ್ಯವಾಗಿದೆ ಎಂದು ಉಡುಪಿಯ ರಾಜಕೀಯ ವಿಶ್ಲೇಷಕರಾದ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+