ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಿದ್ದರಾಮಯ್ಯ ಮಠಕ್ಕೆ ಹೋಗಿದ್ದರೆ ಅದು ಅಪವಿತ್ರ ಆಗುತ್ತಿತ್ತು'

|
Google Oneindia Kannada News

Recommended Video

ಬಿಜೆಪಿ ನವ ಕರ್ನಾಟಕ ನಿರ್ಮಾಣ ಯಾತ್ರೆ : ಸಿದ್ದರಾಮಯ್ಯ ಮೇಲೆ ಎಗರಾಡಿದ ಬಿ ಎಸ್ ಯಡಿಯೂರಪ್ಪ

ಉಡುಪಿ, ನವೆಂಬರ್ 13 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಇದುವರೆಗೂ ಭೇಟಿ ನೀಡದಿರುವುದು ಒಳ್ಳೆಯದೇ ಆಯಿತು. ಅವರು ಮಠಕ್ಕೆ ಹೋಗಿದ್ದರೆ ಅದು ಅಪವಿತ್ರ ಆಗುತ್ತಿತ್ತು' ಎಂದು ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.

In Pics: Bjp ಪರಿವರ್ತನಾ ಯಾತ್ರೆಗೆ ಭಾರೀ ಜನ ಬೆಂಬಲ

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಭಾನುವಾರ ಉಡುಪಿ ಜಿಲ್ಲೆಯಲ್ಲಿ ಸಂಚಾರ ನಡೆಸಿತು.

ಕಾಪು, ಕಾರ್ಕಳ, ಉಡುಪಿಯಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಬಿಜೆಪಿ ನಾಯಕರು ಮಾತನಾಡಿದರು. ಯಡಿಯೂರಪ್ಪ, ಶ್ರೀರಾಮುಲು, ಶೋಭಾ ಕರಂದ್ಲಾಜೆ ಸೇರಿದಂತೆ ವಿವಿಧ ನಾಯಕರು ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, 'ರಾಜ್ಯದಲ್ಲಿ ಒಟ್ಟು 3.28 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದ ಆಗಿತ್ತು. ಆದರೆ, ಕಮೀಷನ್ ಕೇಳಿದ ಕಾರಣ ಅವರು ಹಿಂದಕ್ಕೆ ಹೋದರು' ಎಂದು ಆರೋಪಿಸಿದರು.

ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರ ಎಡವಟ್ಟುಗಳುಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರ ಎಡವಟ್ಟುಗಳು

ಸೋಮವಾರ ಯಾತ್ರೆ ಕುಂದಾಪುರ, ಬೈಂದೂರು, ಭಟ್ಕಳ ಮಾರ್ಗವಾಗಿ ಕುಮುಟಾ ತಲುಪಲಿದೆ. ಇಂದಿನಿಂದ ಬೆಳಗಾವಿಯಲ್ಲಿ ವಿಧಾನಸಭೆ ಕಲಾಪವೂ ಆರಂಭವಾಗಲಿದ್ದು, ಶಾಸಕರು ಅಧಿವೇಶನದಲ್ಲಿಪಾಲ್ಗೊಳ್ಳಲಿದ್ದಾರೆ.

'ಮಂಜುನಾಥನೆ ತಡೆದಿದ್ದಾನೆ'

'ಮಂಜುನಾಥನೆ ತಡೆದಿದ್ದಾನೆ'

'ಮೀನು, ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದ ಸಿದ್ದರಾಮಯ್ಯ ಅವರನ್ನು ಆ ಮಂಜುನಾಥನೆ ಬಾಗಿಲಲ್ಲಿ ತಡೆದಿದ್ದಾನೆ. ಒಳಗೆ ಹೋಗಲು ಬಿಟ್ಟಿಲ್ಲ' ಎಂದು ಯಡಿಯೂರಪ್ಪ ಲೇವಡಿ ಮಾಡಿದರು.

'ಕಪ್ಪು ಚುಕ್ಕೆ ಕಾಣಿಸುವುದು ಹೇಗೆ?'

'ಕಪ್ಪು ಚುಕ್ಕೆ ಕಾಣಿಸುವುದು ಹೇಗೆ?'

'ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ, ಶುದ್ಧ ಆಡಳಿತ ನಡೆಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೈಯೆಲ್ಲ ಹೊಲಸಾಗಿ ಇರುವಾಗ ಅದರಲ್ಲಿ ಕಪ್ಪುಚುಕ್ಕೆ ಕಾಣಲು ಹೇಗೆ ಸಾಧ್ಯ?' ಯಡಿಯೂರಪ್ಪ ಪ್ರಶ್ನಿಸಿದರು.

'ತಕ್ಷಣ ರಾಜೀನಾಮೆ ಪಡೆಯಿರಿ'

'ತಕ್ಷಣ ರಾಜೀನಾಮೆ ಪಡೆಯಿರಿ'

'ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು ಮಾಡಿದೆ. ಮಾನ ಮರ್ಯಾದೆ ಇದ್ದರೆ ತಕ್ಷಣ ಅವರ ರಾಜೀನಾಮೆ ಪಡೆಯಿರಿ. ಇಲ್ಲವಾದಲ್ಲಿ ಬೆಳಗಾವಿ ಅಧಿವೇಶನ ನಡೆಯಲು ಬಿಡುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.

'ಸಿದ್ದರಾಮಯ್ಯ ಒಬ್ಬ ಲೂಟಿ ಕೋರ'

'ಸಿದ್ದರಾಮಯ್ಯ ಒಬ್ಬ ಲೂಟಿ ಕೋರ'

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, 'ಸಿದ್ದರಾಮಯ್ಯ ಒಬ್ಬ ಲೂಟಿ ಕೋರ. ಪಡಿತರ ಅಕ್ಕಿ, ಗೋಧಿಯನ್ನು ಸಹ ಅವರು ಲೂಟಿ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಯಿಂದ ನವ ಕರ್ನಾಟಕ ನಿರ್ಮಾಣ ಸಾಧ್ಯವಿಲ್ಲ' ಎಂದರು.

English summary
Karnataka BJP president B.S.Yeddyurappa addressed Nava karnataka parivarthana yatra in Udupi, on November 12, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X