Get Updates
Get notified of breaking news, exclusive insights, and must-see stories!

ನೀವು ಮಂತ್ರಿ ಅಲ್ಲ, ರಾಜ: ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯ ನಿವೃತ್ತಿಗೆ ಬೆಂಬಲಿಗರು ಹೇಳಿದ್ದೇನು?

ಉಡುಪಿ, ಏಪ್ರಿಲ್‌ 4: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಇತಿಹಾಸ. ಹಿಂದೆಂದೂ ಕಾಣದ, ಮುಂದೆಂದೂ ಕಾಣ ಸಿಗದ ಅಪರೂಪ ವ್ಯಕ್ತಿತ್ವದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಎನ್ನುವುದು ಕುಂದಾಪುರ ಜನತೆಯ ಅಭಿಪ್ರಾಯ. ಕುಂದಾಪುರದ ವಾಜಪೇಯಿ ಎಂದೇ ಜನಪ್ರಿಯತೆ ಪಡೆದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಹಾಲಾಡಿ ಅವರ ಈ ನಿರ್ಧಾರ ಶಾಕ್‌ ನೀಡಿದೆ.

BJP Supporters Opinion About Halady Srinivas Shetty Retirement From Electoral Fray

1999ರಿಂದ ಆರಂಭಗೊಂಡು ಇಲ್ಲಿಯವರೆಗೆ ಸೋಲಿಲ್ಲದ ಸರದಾರನಂತೆ ಗೆಲುವಿನ ಕುದುರೆ ಏರಿ ಸಾಗುತ್ತಿರುವ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ, ಜಾತಿಯನ್ನು ಮೀರಿದ ನಾಯಕನಾಗಿ ಹೊರಹೊಮ್ಮಿದ್ದಾರೆ. 4 ಬಾರಿ ಬಿಜೆಪಿ ಪಕ್ಷದಿಂದ, ಒಮ್ಮೆ ಪಕ್ಷೇತರರಾಗಿಯೂ ಸ್ಪರ್ಧಿಸಿ ನಿರಂತರ ಜಯ ಕಾಯ್ದುಕೊಂಡಿದ್ದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬೆಂಬಲಿಗರು ಎನ್ನುವುದಕ್ಕಿಂತ, ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಕೇವಲ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದಷ್ಟೇ ಅಲ್ಲದೇ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅದರಿಂದಾಚೆಗೆ ಒಬ್ಬ ಸಾಧು ವ್ಯಕ್ತಿತ್ವದ, ಮಾನವೀಯ ಮೌಲ್ಯಗಳಿರುವ ನಾಯಕನಾಗಿದ್ದರು. ಕಷ್ಟ ಎಂದು ಬರುವವರಿಗೆ ಪ್ರತಿ ದಿನವೂ ತಮ್ಮ ಕೈಲಾದಷ್ಟು ಸಹಾಯ ಮಾಡುವ ಇವರು , ಈವರೆಗೂ ತಮ್ಮ ದಾನ ಧರ್ಮಗಳ ಬಗ್ಗೆ ಪ್ರಚಾರ ಬಯಸಿಲ್ಲ ಎನ್ನುವುದೇ ವಿಶೇಷ.

ನೀವು ಮಂತ್ರಿ ಅಲ್ಲ ರಾಜ ಎಂದ ಕುಂದಾಪುರ ಜನತೆ

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಐದು ಬಾರಿ ಶಾಸಕರಾದರೂ ಸಹ ಅವರಿಗೆ ಒಂದು ಬಾರಿಯೂ ಸಚಿವ ಸ್ಥಾನ ನೀಡಿಲ್ಲ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನಿಶ್ಕಲ್ಮಶ ರಾಜಕಾರಣಿಯಾಗಿದ್ದು, ಅವರಿಗೆ ಒಂದು ಬಾರಿ ಬಿಜೆಪಿ ಪಕ್ಷ ಸಚಿವ ಸ್ಥಾನ ನೀಡಬೇಕಿತ್ತು. ಈ ಮೂಲಕ ಪಕ್ಷಕ್ಕಾಗಿ ದುಡಿದ ಅವರಿಗೆ ಗೌರವ ನೀಡಬೇಕಿತ್ತು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಈ ಬಾರಿಯಾದರೂ ಹಾಲಾಡಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಅವರೇ ಈಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ, ನೀವು ಮಂತ್ರಿ ಅಲ್ಲ ರಾಜ ಎನ್ನುವ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

BJP Supporters Opinion About Halady Srinivas Shetty Retirement From Electoral Fray

ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ನೀಡಿರುವುದಕ್ಕೆ ಅವರ ಬೆಂಬಲಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾಜಕಾರಣಿ ಎನ್ನುವುದನ್ನು ಹೊರತುಪಡಿಸಿ ಎಂತಹ ವ್ಯಕ್ತಿ ಎನ್ನುವುದರ ಬಗ್ಗೆ ವ್ಯಾಕ್ಯಾನಿಸಿದ್ದಾರೆ.

'ಹಾಲಾಡಿಯವರ ಮನೆ, ನೊಂದವರ ಪಾಲಿನ ದೇವಸ್ಥಾನ, ಆರೋಗ್ಯ ಸಮಸ್ಯೆ ಪರಿಹರಿಸಿದ ಆಸ್ಪತ್ರೆ, ಅವರ ಮಾತುಗಳು ಜೀವನಕ್ಕೆ ಸ್ಪೂರ್ತಿ'-ಶಂಕರ ಅಂಕದಕಟ್ಟೆ, ಅಧ್ಯಕ್ಷರು ಕುಂದಾಪುರ ಮಂಡಲ ಬಿಜೆಪಿ

'ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಂತ್ರಿಯಲ್ಲ, ಕುಂದಾಪುರದ ರಾಜ. ಜನಸಾಮಾನ್ಯರ ಪಾಲಿನ ದೇವರು ನಿಷ್ಕಳಂಕ ರಾಜಕಾರಣಿ'- ಸಂಪತ್ ಶೆಟ್ಟಿ ಶಾನಾಡಿ, ಬಿಜೆಪಿ ಮುಖಂಡರು

'ಇತಿಹಾಸ ಪುರುಷ ಮಾತ್ರ ಐತಿಹಾಸಿಕ ನಿಲುವು ತಳೆಯುವುದು ಸಾಧ್ಯ. ಹಾಲಾಡಿಗೆ ಹಾಲಾಡಿಯೇ ಸಾಟಿ, ಕರ್ಣ ಮತ್ತು ಭೀಷ್ಮ ಒಂದೇ ವ್ಯಕ್ತಿಯಲ್ಲಿದ್ದರೆ ಅದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಲ್ಲಿ. ಅವರು ಜನರ ಎದೆಯಲ್ಲಿ ಎಂದಿಗೂ ಅಜರಾಮರ'- ವಸಂತ್‌ ಗಿಳಿಯಾರ್

'ತನ್ನ ಜೀವನವನ್ನೇ ದಿನ ದಲಿತರ ಏಳಿಗೆಗಾಗಿ ಮುಡಿಪಾಗಿಟ್ಟ ಆಧುನಿಕ ಸಂತ ಪಕ್ಷ ರಾಜಕಾರಣ ಮಾಡದೇ ಮಾನವೀಯ ಮೌಲ್ಯ ಸಾರಿದ ಕುಂದಾಪುರದ ಹೃದಯ ಸಾಮ್ರಾಟ'- ಪಡುಮುಂಡು ರತ್ನಾಕರ ಶೆಟ್ಟಿ, ಉದ್ಯಮಿಗಳು

'ಸರಳ ಸೌಜನ್ಯದ ಕುಂದಾಪುರದ ಮಾಣಿಕ್ಯ ಅಭಿಮಾನಿಗಳ ಪಾಲಿನ ದೇವರು. ಶಾಸಕರೆಂದರೆ ಹೀಗೂ ಇರಬಹುದು ಎನ್ನುವದನ್ನು ತೋರಿಸಿ ಕೊಟ್ಟ ಕುಂದಾಪುರದ ವಾಜಪೇಯಿ' ಗೌರೀಶ್ ಹೆಗ್ಡೆ, ಅಧ್ಯಕ್ಷರು ಗ್ರಾಮ ಪಂಚಾಯತ್ ಕೊರ್ಗಿ

'ಬಡವರ ಪಾಲಿನ ಆಶಾಕಿರಣ ಜಾತಿ ಧರ್ಮ ಮೇಲು ಕೀಳು ಎನ್ನುವ ತಾರತಮ್ಯ ಮಾಡದ ಮಾನವತಾವಾದಿ. ತನ್ನೆಲ್ಲಾ ಸಂಪತ್ತು ಮಾರಿ ಜನರ ಕಲ್ಯಾಣಕ್ಕಾಗಿ ವ್ಯಯಿಸಿದ ಅಧುನಿಕ ಕರ್ಣ. ಯಾವುದೇ ಶಿಲನ್ಯಾಸ, ಉದ್ಘಾಟನೆಯಲ್ಲಿ ಭಾಗವಹಿಸದೆ ಜನಪರ ಕೆಲಸ ಮಾಡಿದ ಧೀಮಂತ ನಾಯಕ. ಹಾಲಾಡಿ ಅವರು ಎಂದಿಗೂ ಯಾರಲ್ಲೂ ಬೇಡಿದವರಲ್ಲ, ತನ್ನಿಂದ ಆದದನ್ನು ನೀಡಿದವರು. ಬೆಂಗಳೂರು ವಿಧಾನ ಸೌಧ ಕುಂದಾಪುರ ಜನರ ಪಾಲಿಗೆ ಹಾಲಾಡಿಯವರ ಮನೆ'- ರಾಘವೇಂದ್ರ ಶೆಟ್ಟಿ, ಗ್ರಾ.ಪಂ ಸದಸ್ಯರು ಹೆಸಕುತ್ತೂರು ,

ಹೀಗೆ ಚುನಾವಣಾ ರಾಜಕೀಯ ವಿದಾಯದ ಹೇಳಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಗ್ಗೆ ಬೆಂಬಲಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+