ಅಳುಪ ಉತ್ಸವದಲ್ಲಿ ತೆರೆದುಕೊಂಡ ಬಾರ್ಕೂರು ರಾಜವೈಭವ

ಉಡುಪಿ, ಜನವರಿ 25:ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬಾರಕೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಆಳುಪೋತ್ಸವ ನಡೆಯಲಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಪೂರ್ವಭಾವಿಯಾಗಿ ಇಲ್ಲಿನ ನಂದರಾಯನ ವೈಭವದ ಸಂಕೇತವಾಗಿದ್ದ ಬಾರ್ಕೂರು ಕೋಟೆ ಮತ್ತು ಅರಮನೆಯ 14.12 ಎಕರೆ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ 13 ಕಿಲೋಮೀಟರ್ ಸಾಗಿದಾಗ ಸಿಗುವ ಸ್ಥಳ ಬ್ರಹ್ಮಾವರ. ಅಲ್ಲಿಂದ ಬಲಬದಿಗೆ ಸಾಗುವ ರಸ್ತೆಯಲ್ಲಿ ಮೂರು ಕಿಲೋಮೀಟರ್ ಸಾಗಿದರೆ ಸಿಗುವುದೇ ಗತವೈಭವವನ್ನು ಸಾರುವ ಊರು ಬಾರಕೂರು. ಇಲ್ಲಿನ ಉದ್ದಗಲಗಳಲ್ಲಿ ಕಾಣಸಿಗುವುದು ಶಾಸನದ ಕಲ್ಲುಗಳು, ಮಹಾಸತಿಕಲ್ಲುಗಳು, ಕಲ್ಲು ಚಪ್ಪರಗಳು.

Barkur all set for Alupa utsava

ಸುಮಾರು ಇಪ್ಪತ್ತೈದು ಎಕರೆ ಸ್ಥಳದ ಸುತ್ತ ಆಳವಾದ ಕಂದಕ ಸೃಷ್ಟಿಸಿ ಕೋಟೆ ನಿರ್ಮಿಸಿರುವುದು ಹಾಗೂ ಅರಮನೆ ಇದ್ದ ಜಾಗ ಇವತ್ತಿಗೂ ನೋಡಲು ಸಿಗುವುದು. ಅರಮನೆ ಅಳಿದಿದ್ದರೂ ಕುದುರೆ, ಆನೆ ಕಟ್ಟುತ್ತಿದ್ದ ಲಾಯದ ಕಲ್ಲುಗಳನ್ನು ಇಲ್ಲಿ ನೋಡಬಹುದಾಗಿದೆ.

Barkur all set for Alupa utsava

ಇಲ್ಲಿನ ಕೋಟೆ-ಕೊತ್ತಲ, ದೇಗುಲಗಳು, ಮಸೀದಿ ಇತ್ಯಾದಿಗಳು ಆಳುಪೋತ್ಸವಕ್ಕೆ ಕೈ ಬೀಸಿ ಕರೆಯುವಂತಿದೆ. ತೆರೆಮರೆಯಲ್ಲಿದ್ದ ಕೋಟೆ ಈ ಅಳುಪ ಉತ್ಸವದ ಮೂಲಕ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+