ಉಡುಪಿಯಲ್ಲಿ ಸೆ.12ರಂದು ಬಕ್ರೀದ್ ರಜೆ

Posted By:
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 10 : ಕರ್ನಾಟಕ ಸರ್ಕಾರ ಬಕ್ರೀದ್‌ ಪ್ರಯುಕ್ತ ಸೆ.13ರಂದು ಸರ್ಕಾರಿ ರಜೆ ಘೋಷಣೆ ಮಾಡಿದೆ. ಆದರೆ, ಉಡುಪಿಯಲ್ಲಿ ಸೆ.12ರಂದು ಬಕ್ರೀದ್ ಆಚರಣೆ ಮಾಡುತ್ತಿದ್ದು, ಅಂದು ರಜೆ ಇರುತ್ತದೆ.

ಉಡುಪಿ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಸೆ.12ರ ಸೋಮವಾರ ಆಚರಣೆ ಮಾಡಲಾಗುತ್ತದೆ. ಆದ್ದರಿಂದ, ಶಾಲಾ-ಕಾಲೇಜುಗಳಿಗೆ ಅಂದು ರಜೆ ಘೋಷಣೆ ಮಾಡಲಾಗಿದೆ. ಸೆ.13ರ ಮಂಗಳವಾರ ಶಾಲಾ-ಕಾಲೇಜುಗಳು ಎಂದಿನಂತೆ ತೆರೆದಿರುತ್ತವೆ.[ಬಕ್ರೀದ್ ಸರ್ಕಾರಿ ರಜೆ ಸೆ.13ರ ಮಂಗಳವಾರ]

udupi dc office

ಕರ್ನಾಟಕ ಸರ್ಕಾರವೂ ಮೊದಲು ಸೆ.12ರಂದು ಸರ್ಕಾರಿ ರಜೆ ಘೋಷಣೆ ಮಾಡಿತ್ತು. ಆದರೆ, ಚಂದ್ರದರ್ಶನ ಸಮಿತಿ ಅಭಿಪ್ರಾಯದಂತೆ ಸೋಮವಾರ ನೀಡಿದ್ದ ರಜೆಯನ್ನು ರದ್ದುಗೊಳಿಸಲಾಗಿತ್ತು. ಸೆಪ್ಟೆಂಬರ್ 13ರ ಮಂಗಳವಾರ ಸರ್ಕಾರಿ ರಜೆಯನ್ನು ನೀಡಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿತ್ತು.[2016ನೇ ಸಾಲಿನ ಸರ್ಕಾರಿ ರಜೆ ದಿನಗಳ ಪಟ್ಟಿ]

ಹಲವು ಕ್ಯಾಲೆಂಡರ್‌ಗಳಲ್ಲಿ ಮತ್ತು ಕರ್ನಾಟಕ ಸರ್ಕಾರ ಹಿಂದೆ ಪ್ರಕಟಿಸಿದ ಸರ್ಕಾರಿ ರಜಾ ದಿನಗಳ ಪಟ್ಟಿಯಲ್ಲಿ ಸೆಪ್ಟಂಬರ್ 12 ಸೋಮವಾರ ಬಕ್ರೀದ್ ರಜೆ ಘೋಷಣೆ ಮಾಡಲಾಗಿತ್ತು. ಆದರೆ, ಈ ರಜೆಯನ್ನು ರದ್ದುಪಡಿಸಿ ಮಂಗಳವಾರ ರಜೆ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಉಡುಪಿಯಲ್ಲಿ ಮಾತ್ರ ಸೆ.12ರಂದು ಬಕ್ರೀದ್ ರಜೆ ಇರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi district administration announced Bakrid 2016 holiday on 12th September, Monday. Karnataka government announced Bakrid 2016 holiday on 13th September.
Please Wait while comments are loading...