ಮರಳು ಮಾಫಿಯಾ ಅಡ್ಡೆ ಮೇಲೆ ದಾಳಿ, ಉಡುಪಿ ಡಿಸಿ ಕೊಲೆ ಯತ್ನ

ಉಡುಪಿ ಜಿಲ್ಲೆಯ ಕಡ್ಲೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಭಾನುವಾರ ದಾಳಿ ನಡೆಸಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಎಸಿ ಶಿಲ್ಪಾ ನಾಗ್ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ

ಉಡುಪಿ, ಏಪ್ರಿಲ್ 3: ಜಿಲ್ಲೆಯ ಕಡ್ಲೂರಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ದಾಳಿಗೆ ಮುಂದಾದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಎಸಿ ಶಿಲ್ಪಾ ನಾಗ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಭಾನವಾರ ರಾತ್ರಿ ನಡೆದಿದೆ.

ಅಕ್ರಮ ಮರಳು ದಂಧೆ ಬಗ್ಗೆ ಎಸಿ ಶಿಲ್ಪಾ ನಾಗ್ ಅವರಿಗೆ ದೂರು ಬಂದಿತ್ತು. ಈ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಭಾನುವಾರ ದಿಢೀರ್ ದಾಳಿ ನಡೆಸಲು ನಿರ್ಧರಿಸಿ, ಜಿಲ್ಲಾಧಿಕಾರಿ ಪ್ರಿಯಾಂಕಾ, ಎಸಿ ಶಿಲ್ಪಾ ನಾಗ್, ಅವರ ಪತಿ, ಗನ್ ಮ್ಯಾನ್ ಹಾಗೂ ಚಾಲಕ ತೆರಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ, ನಾವು ಮರಳು ಮಾಫಿಯಾ ಮೇಲೆ ದಾಳಿ ನಡೆಸಲು ತೆರಳುವ ಮಾರ್ಗದುದ್ದಕ್ಕೂ ಕೆಲವು ಬೈಕ್ ಸವಾರರು ನಮ್ಮನ್ನು ಹಿಂಬಾಲಿಸಿದ್ದರು. ಎದುರಿನಿಂದ ಬರುತ್ತಿದ್ದ ಮರಳು ಲಾರಿಗಳವರು ನಮ್ಮನ್ನು ಕಂಡು ಲಾರಿ ನಿಲ್ಲಿಸಿ, ಪರಾರಿಯಾದರು.[ಅನಾಥ ಶವಗಳ ಆಪತ್ಬಾಂಧವನಿಗೆ ಸ್ಮಶಾನದಲ್ಲೇ ಸನ್ಮಾನ..!]

Udupi DC

ನಾವು ಲಾರಿ ಕೀ ತೆಗೆದುಕೊಂಡು ಕುಂದಾಪುರ ಪೊಲೀಸ್ ಠಾಣೆಗೆ ನೀಡಿದ್ದೇವೆ. ಆದರೆ, ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದಾಗ ಅಲ್ಲಿದ್ದವರು ಪಕ್ಕದ ಮನೆಯೊಳಗೆ ಹೋದರು. ಅಲ್ಲಿಗೆ ತೆರಳಿದಾಗ 25-30 ರಷ್ಟಿದ್ದ ಮಹಿಳೆಯರು ದಬಾಯಿಸಿದರು, ಇಲ್ಲಿಗೇಕೆ ಎಂದು ಬೆದರಿಸಿದರು.

ಅದಕ್ಕೂ ಮುನ್ನ ಗನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದರು. ಅಲ್ಲಿಂದ ಹೊರಟುಬಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆವು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮರಳು ಮಾಫಿಯಾ ಅಡ್ಡೆ ಮೇಲೆ ದಾಳಿ ನಡೆಸಿದ ವೇಳೆ ನನ್ನ ಹಾಗೂ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಕೊಲೆಗೆ ಯತ್ನಿಸಲಾಯಿತು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ದೂರಿನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+